Advertisement
ಉಭಯ ತಾಲೂಕುಗಳ ಹಲವು ಗ್ರಾ.ಪಂ. ವ್ಯಾಪ್ತಿಯಲ್ಲಿ ಈಗಾಗಲೇ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದರೂ, ಈ ಬಗ್ಗೆ ಗ್ರಾ.ಪಂ.ಗಳು ನಿರ್ಣಯ ಮಾಡಿ ತಹಶೀಲ್ದಾರ್‌ಗೆ ಪ್ರಸ್ತಾವನೆ ಕಳುಹಿಸಿದ್ದರೂ, ಈ ವರೆಗೆ ತಾಲೂಕು ಆಡಳಿತ ದಿಂದ ನೀರಿನ ಪೂರೈಕೆಗೆ ಯಾವುದೇ ಅನುದಾನ ಬಂದಿಲ್ಲ ಎನ್ನುವುದು ಗ್ರಾ.ಪಂ.ಗಳ ವಾದವಾಗಿದೆ.
ಪ್ರತಿ ವರ್ಷ ಎಪ್ರಿಲ್‌ನಿಂದ ಕುಡಿಯುವ ನೀರಿನ ಪೂರೈಕೆಗೆ ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು.
ಆದರೆ ಈ ಬಾರಿ ಬಿಸಿಲಿನ ಬೇಗೆ ಫೆಬ್ರವರಿ, ಮಾರ್ಚ್ ನಿಂದಲೇ ಶುರುವಾಗಿದ್ದು, ಇದರಿಂದ ಎಲ್ಲೆಡೆಗಳಲ್ಲಿ ನೀರಿನ ಮೂಲಗಳಲ್ಲಿ ನೀರು ಇಳಿಮುಖವಾಗುತ್ತಿದೆ. ಕೆಲವು ಬಾವಿಗಳಲ್ಲಿ ಬತ್ತಿ ಹೋಗಿದೆ. ಈ ಕಾರಣದಿಂದಾಗಿ ತುರ್ತಾಗಿ ಕುಡಿಯುವ ನೀರಿನ ಪೂರೈಕೆಗೆ ಅನುದಾನ ನೀಡಬೇಕು ಎನ್ನುವುದು ಪಂಚಾಯತ್‌ಗಳ ಒತ್ತಾಯವಾಗಿದೆ. ಕೆಲವು ಗ್ರಾ.ಪಂ.ಗಳಲ್ಲಿ ಎರಡು ದಿನಕ್ಕೊಮ್ಮೆ ಜನರಿಗೆ ನಳ್ಳಿ ನೀರು ಪೂರೈಸಲಾಗುತ್ತಿದ್ದು, ಇನ್ನು ಹೆಮ್ಮಾಡಿ ಸೇರಿದಂತೆ ಕೆಲ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲ ವಾರ್ಡ್‌ಗಳಿಗೆ 3 ದಿನಕ್ಕೊಮ್ಮೆ ನೀರು ಕೊಡಲಾಗುತ್ತಿದೆ. ಶಾಲೆಯ ಪಾಳು ಬಿದ್ದ ಬಾವಿಯನ್ನು ಪಂಚಾಯತ್ ವತಿಯಿಂದ ಸ್ವತ್ಛಗೊಳಿಸಿ, ಅದರಿಂದ ನೀರು ಕೊಡಲಾಗುತ್ತಿದೆ. ಇನ್ನು ಜಿ.ಪಂ. ಅನುದಾನದಡಿ ಸಂತೋಷನಗರದಲ್ಲಿ ಬಾವಿ ತೊಡಲಾಗುತ್ತಿದೆ. ಗುಜ್ಜಾಡಿಯಲ್ಲಿ ಶಾಲೆಯೊಂದಕ್ಕೆ ಪಂಚಾಯತ್ ವತಿಯಿಂದಲೇ ಈಗಾಗಲೇ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ.
Related Articles
ತಲ್ಲೂರು ಗ್ರಾ.ಪಂ.ನ ಉಪ್ಪಿನಕುದ್ರು, ಹೆಮ್ಮಾಡಿ ಗ್ರಾ.ಪಂ.ನ ಸಂತೊಷನಗರ, ಕನ್ನಡಕುದ್ರು, ದೇವಸ್ಥಾನ ವಠಾರ, ಕಟ್‌ಬೆಲೂ¤ರು ಪಂಚಾಯತ್, ಹಕ್ಲಾಡಿಯ ತೋಪುÉ, ಹಕ್ಲಾಡಿ ಗುಡ್ಡೆ, ಎಸ್ಸಿ ಕಾಲನಿ, ಬ್ರಹೆ¾àರಿ ಕೊರಗ ಕಾಲನಿ, ಕರ್ಕುಂಜೆ ಗ್ರಾ.ಪಂ.ನ ಮಾವಿನಕಟ್ಟೆ, ಗುಲ್ವಾಡಿ ಗ್ರಾ.ಪಂ., ಹೊಸಾಡು ಗ್ರಾ.ಪಂ.ನ ಮುಳ್ಳಿಕಟ್ಟೆ, ತ್ರಾಸಿಯ ಮೊವಾಡಿ, ಗುಜ್ಜಾಡಿಯ ಬೆಣೆYರೆ, ಜನತಾ ಕಾಲನಿ, ಕೊಡಪಾಡಿ, ಗಂಗೊಳ್ಳಿ, ಮರವಂತೆ, ನಾವುಂದ, ಉಪ್ಪುಂದ, ಯಡ್ತರೆ ಸೇರಿದಂತೆ ಅನೇಕ ಗ್ರಾ.ಪಂ.ಗಳಲ್ಲಿ ನೀರಿನ ಸಮಸ್ಯೆ ಉದ್ಭವವಾಗಿದೆ.
Advertisement
ಸಭೆ ಕರೆದು ತೀರ್ಮಾನಕುಂದಾಪುರ ತಾ|ನ ಕುಡಿಯುವ ನೀರಿನ ಪೂರೈಕೆಗೆ ಅನುದಾನದ ಕೊರತೆಯಿಲ್ಲ. ಆದಷ್ಟು ಬೇಗ ನಾನು, ಕಾರ್ಯನಿರ್ವಹಣಾಧಿಕಾರಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ಸಭೆ ಕರೆದು, ತೀರ್ಮಾನಿಸಲಾಗುವುದು. ಸಭೆಯಲ್ಲಿ ಟ್ಯಾಂಕರ್ ನೀರು ಪೂರೈಕೆಗೆ ಲೀ.ಗೆ ಇಂತಿಷ್ಟು ದರ ನಿಗದಿಪಡಿಸಿ, ಅನುದಾನ ಬಿಡುಗಡೆ ಮಾಡಲಾಗುವುದು. – ಆನಂದಪ್ಪ ನಾಯ್ಕ,
ಕುಂದಾಪುರ ತಹಶೀಲ್ದಾರ್ ಶೀಘ್ರ ಬಿಡುಗಡೆ
ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇರುವಲ್ಲಿ ಎಲ್ಲೆಲ್ಲ ಟ್ಯಾಂಕರ್ ನೀರಿನ ಅಗತ್ಯತೆಯಿದೆಯೋ ಅಲ್ಲಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ಈ ಬಾರಿ ಎಪ್ರಿಲ್‌ಗಿಂತ ಮೊದಲೇ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಕುಡಿಯುವ ನೀರಿನ ಪೂರೈಕೆಗೆ ಆದಷ್ಟು ಬೇಗ ತೀರ್ಮಾನಿಸಲಾಗುವುದು.
– ಕಿರಣ್ ಗೌರಯ್ಯ, ಬೈಂದೂರು ತಹಶೀಲ್ದಾರ್ (ಪ್ರಭಾರ)