ಚೇರ್ಕಾಡಿಯಲ್ಲಿ ನೀರಿಲ್ಲ
ಕಳೆದ ವರ್ಷ ಕುಡಿಯುವ ನೀರಿನ ಭೀಕರ ಸಮಸ್ಯೆ ತಲೆದೋರಿದ್ದ ಪಾರ್ತಿಬೆಟ್ಟು, ಜಾರ್ಜಡ್ಡು ಪ್ರಗತಿ ನಗರದಲ್ಲಿ ಈ ಬಾರಿ ಬೋರ್‌ವೆಲ್ ಹಾಕಿಸಿದ್ದರಿಂದ ಸಮಸ್ಯೆ ಕಡಿಮೆ ಇದೆ. ಆದರೆ ಹೊಸಗರಡಿಬೆಟ್ಟು, ಮೈತ್ರಿನಗರ ಪ್ರದೇಶದಲ್ಲಿ ನೀರಿನ ಸಮಸ್ಯೆ ಈಗಾಗಲೇ ಇದೆ.
Advertisement
ಕುಧ್ಕುಂಜೆಯಲ್ಲಿ ಮಡಿಸಾಲು ಹೊಳೆಯ ನೀರು ಶುದ್ಧೀಕರಣ- ಪೂರೈಕೆ ಘಟಕ ಸ್ಥಾಪನೆಯಿಂದ ಪಂಚಾಯತ್ ವ್ಯಾಪ್ತಿಯ ನೀರಿನ ಸಮಸ್ಯೆ ಒಂದು ಹಂತಕ್ಕೆ ಪರಿಹಾರ ಕಂಡಿದೆ. ಆದರೆ ಗೋರ್ಪಳ್ಳಿ ಸರ್ಪು ಕುಧ್ಕುಂಜೆ ಸೇತುವೆ ನಿರ್ಮಾಣ ಕಾಮಗಾರಿಯಿಂದ ನೀರಿನ ಸಂಗ್ರಹಕ್ಕೆ ತೊಂದರೆಯಾಗಿದೆ. ಮಡಿಸಾಲು ಹೊಳೆಯಲ್ಲಿ ವಿಪರೀತ ಮರಳುಗಾರಿಕೆಯಿಂದ ನೀರು ಬರಿದಾಗುವ ಆರೋಪವಿದೆ. ಕೊಕ್ಕರ್ಣೆಯಲ್ಲಿ ಅಂತರ್ಜಲ ವೃದ್ಧಿ ಪಂಚಾಯತ್ ವ್ಯಾಪ್ತಿಯ ಗುಂಡಾಲಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಈ ಬಾರಿ ಅಂತರ್ಜಲ ವೃದ್ಧಿಯಾಗಿದೆ. ಪಂಚಾಯತ್ ಅನುದಾನದಲ್ಲಿ ಹಲವೆಡೆ ಪೈಪ್‌ಲೈನ್ ಅಳವಡಿಸಿರುವುದರಿಂದ ಅನುಕೂಲವಾಗಿದೆ. ಒಟ್ಟು 11 ಬೋರ್‌ವೆಲ್, 2 ತೆರೆದ ಬಾವಿ ನೀರುಣಿಸುತ್ತಿವೆ.
ಪಂಚಾಯತ್ ವ್ಯಾಪ್ತಿಯ ಕೆಂಜೂರು, ಪಾದೇಮಠ, ಬಲ್ಲೆಬೈಲು, ಕಲ್ಲುಗುಡ್ಡೆ, ಕಳೂ¤ರು ಸಂತೆಕಟ್ಟೆ, ಸುಳ್ಳಿ ಪ್ರದೇಶದಲ್ಲಿ ಪ್ರತಿವರ್ಷ ಬೇಸಗೆಯಲ್ಲಿ ನೀರಿನ ಸಮಸ್ಯೆಯಾಗುತ್ತದೆ. ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 5 ಬೋರ್ ವೆಲ್‌ಗಳಿವೆ. ಇದರೊಂದಿಗೆ ಸೀತಾನದಿಯ ಜೋಮ್ಲುವಿನಿಂದ ನೀರು ಶುದ್ಧೀಕರಣಗೊಂಡು ಎಲ್ಲೆಡೆಗೆ ಪೂರೈಕೆಯಾಗುತ್ತಿದೆ. ಇದ್ದ ನೀರೂ ಪೋಲು
ನಾಲ್ಕೂರು ಗ್ರಾ.ಪಂ.ನ ಬಹುತೇಕ ಭಾಗಕ್ಕೆ ನೀರುಣಿಸುವ ಮಿಯಾರು ಕಿಂಡಿ ಅಣೆಕಟ್ಟಿನ ಹಲಗೆ ಒಡೆದಿದೆ. ಪರಿಣಾಮ ಸಂಗ್ರಹಿಸಿದ ಅಮೂಲ್ಯ ಜೀವಜಲ ವ್ಯರ್ಥವಾಗಿದೆ.
Related Articles
Advertisement
ಕರ್ಜೆಯಲ್ಲಿ ಟ್ಯಾಂಕರ್ ನೀರು ಪಾಲಂಡೆ, ತಡಾಲು, ಹಾಡಿಬೆಟ್ಟು, ಕಡಂಗೋಡು, ಕೆಳಬೆಟ್ಟು, ಬ್ರಾಹ್ಮಣರಬೆಟ್ಟು, ಕುಪ್ಪಾಳ,ಬಾಳೆಬೆಟ್ಟು, ಗುಂಡಾಳ, ನೂಜಿ, ಆಲಡ್ಕ, ತಳಬ, ಕಂಗಿಬೆಟ್ಟು,ಮರ್ಡಿ, ಕುರ್ಪಾಡಿ, ಸರಂಬಳ್ಳಿ, ಹಾಲಿಬೆಟ್ಟು, ತೆಂಕಬೈಲು, ಕುಕ್ಕುಡೆ, ತೆಕ್ಕರಾಡಿ, ಉದ್ದಳ್ಕ ಪ್ರದೇಶಗಳಲ್ಲಿ ಬೇಸಗೆಯಲ್ಲಿ ನೀರಿನ ಕೊರತೆ ಸಾಮಾನ್ಯವಾಗಿದೆ. ಕೆಲವೆಡೆ ಪೈಪ್‌ಲೈನ್ ಅಳವಡಿಸಲಾಗಿದ್ದು, ತೀವ್ರ ಸಮಸ್ಯೆ ಇರುವಲ್ಲಿ ಟ್ಯಾಂಕರ್ ಮೂಲಕ ಪೂರೈಸಲಾಗುತ್ತದೆ. ಪಂಚಾಯತ್ ವ್ಯಾಪ್ತಿಯ 9 ಬೋರ್‌ವೆಲ್, 3 ತೆರೆದ ಬಾವಿ ನೀರಿನ ಮೂಲವಾಗಿದೆ. ಶಾಶ್ವತ ಪರಿಹಾರ
ಸಮಸ್ಯೆ ಇರುವ ಪ್ರದೇಶಗಳಿಗೆ ಟ್ಯಾಂಕರ್ ನೀರು ಪೂರೈಸಲು ತಯಾರಿ ಮಾಡಲಾಗಿದೆ. ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕಾರ್ಯಗತವಾದರೆ ಶಾಶ್ವತ ಪರಿಹಾರ ದೊರೆಯಲಿದೆ.
– ಪ್ರವೀಣ್ ಡಿ’ಸೋಜಾ,
ಕಳೂ¤ರು ಪಿಡಿಒ – ಪ್ರವೀಣ್ ಮುದ್ದೂರು