Advertisement

ಬಜೆಯಲ್ಲಿ ನೀರಿನ ಮಟ್ಟ ಏರಿಕೆ

12:57 AM Jun 16, 2020 | Team Udayavani |

ಉಡುಪಿ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಸ್ವರ್ಣಾ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಸೋಮವಾರ ಬಜೆ ಡ್ಯಾಂ ನೀರಿನ ಮಟ್ಟ 5.75 ಮೀ. ಏರಿಕೆಯಾಗಿದೆ.

Advertisement

ಘಟ್ಟ ಪ್ರದೇಶ ಹಾಗೂ ಕಾರ್ಕಳದ ಸುತ್ತಮುತ್ತಲಿನಲ್ಲಿ ಹೆಚ್ಚಿನ ಮಳೆಯಾದ ಹಿನ್ನೆಲೆಯಲ್ಲಿ ಡ್ಯಾಂ ಭರ್ತಿಯಾಗಿದೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತಿದ್ದು ಡ್ಯಾಂ ನಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ನೀರಿನ ಶೇಖರಣೆ 6 ಮೀ. ತಲುಪಿದ ತತ್‌ಕ್ಷಣ ನೀರಿನ ಹೊರ ಹರಿವು ಆರಂಭವಾಗಲಿದೆ ಎಂದು ನಗರಸಭೆ ಎಇಇ ಮೋಹನ್‌ ರಾಜ್‌ ಮಾಹಿತಿ ನೀಡಿದ್ದಾರೆ.

ಮೂಲ ಡ್ಯಾಂನ ಸ್ವರೂಪ 4.9 ಮೀ. ಇದ್ದು, ಅದನ್ನು ವಿದ್ಯುತ್‌ ಉತ್ಪಾದನೆಗಾಗಿ 5.9 ಮೀ. ಏರಿಕೆ ಮಾಡಲಾಗಿದೆ. ಈ ಬಾರಿ ಬೇಸಗೆಯಲ್ಲಿ ಡ್ಯಾಂನಿಂದ ನಗರಸಭೆಯ 35 ವಾರ್ಡ್‌ಗಳಿಗೆ ವಾರ ಪೂರ್ತಿ ಕುಡಿಯುವ ನೀರು ಪೂರೈಕೆಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next