Advertisement

ವಿಫಲ ಕೊಳವೆ ಬಾವಿಯಿಂದ ಚಿಮ್ಮುತ್ತಿರುವ ನೀರು

10:54 PM Oct 20, 2019 | Lakshmi GovindaRaju |

ವಿಜಯಪುರ: ಕಳೆದ ನಾಲ್ಕಾರು ದಿನಗಳಿಂದ ಜಿಲ್ಲೆಯಲ್ಲಿ ಸತತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿದ್ದು, ವಿಫಲ ಕೊಳವೆ ಬಾವಿಯಿಂದ ಮುಗಿಲೆತ್ತರಕ್ಕೆ ಸ್ವಯಂ ನೀರು ಚಿಮ್ಮತೊಡಗಿದೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ಮಾಳಿಂಗರಾಯ ದೊಡಮನಿ ಎಂಬುವರು ಈ ಹಿಂದೆ ಕೊಳವೆಬಾವಿ ಕೊರೆಸಿದ್ದರು. ಆರಂಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬರುತ್ತಿದ್ದ ನೀರು, ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತ್ತು.

Advertisement

ಹೀಗಾಗಿ, ಕೊಳವೆ ಬಾವಿಗೆ ಅಳವಡಿಸಿದ್ದ ಪಂಪ್‌ ತೆಗೆಯಲಾಗಿತ್ತು. ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಕೊಳವೆ ಬಾವಿಯಿಂದ 20 ಅಡಿಗೂ ಹೆಚ್ಚು ಎತ್ತರದಲ್ಲಿ ನೀರು ಚಿಮ್ಮತೊಡಗಿದೆ. ಇದನ್ನು ಕಂಡ ಮಾಳಿಂಗರಾಯ ಹರ್ಷ ವ್ಯಕ್ತಪಡಿಸಿದ್ದು, ಇನ್ನಾದರೂ ತನ್ನ ಕೊಳವೆ ಬಾವಿ ನಿರಂತರ ಇದೇ ರೀತಿ ನೀರು ಕೊಡುತ್ತಿರಲಿ ಎಂದು ಮಳೆರಾಯನಲ್ಲಿ ಪ್ರಾರ್ಥಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next