ಬೆಂಗಳೂರು : ಮೇಕೆದಾಟು ಪಾದಯಾತ್ರೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರಿ ಸಮಾರ ನಡೆಯುತ್ತಿರುವ ವೇಳೆಯಲ್ಲಿ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಿದ ಕುರಿತು ಬುಧವಾರ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಪ್ರಧಾನಿಯವರನ್ನು ಭೇಟಿ ಮಾಡಿದ್ದೆವು. 2017 ಮಾರ್ಚ್ 13 ರಂದು 5,912 ಕೋಟಿ ರೂ. ಮೊತ್ತದ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ಕೊಟ್ಟಿದ್ದೆವು, ಅದು ಐತಿಹಾಸಿಕ ಮೈಲಿಗಲ್ಲು ಎಂದರು.
ಮೇಕೆದಾಟು ಯೋಜನೆ ಪ್ರಸ್ತಾಪ ಜಾರಿಗೆ ತರಲು ಪ್ರಯತ್ನ ಪಟ್ಟಿದ್ದು ಕಾಂಗ್ರೆಸ್. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ನಾನು ಜಲ ಸಂಪನ್ಮೂಲ ಸಚಿವ ಆಗಿದ್ದಾಗ ದೆಹಲಿಯಲ್ಲಿ ನಾರಿಮನ್ ಅವರ ಜತೆ ಚರ್ಚೆ ಮಾಡಿ ರೂಪು ರೇಷೆ ಸಿದ್ಧಪಡಿಸಿದ್ದೆವು ಎಂದು, ಯೋಜನೆಯ ಪ್ರತಿ ಹಂತದ ಬೆಳವಣಿಗೆ ಹಾಗೂ ಸಭೆಯ ವಿವರ ನೀಡಿದರು.
ಈಗಿನ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರು ನಮ್ಮ ಜಿಲ್ಲೆಯವರು. ಅವರ ಬಗ್ಗೆ ಬಹಳ ಗೌರವ ಇದೆ. ಮೇಧಾವಿಗಳು ಇದ್ದಾರೆ. ಮೇಕೆದಾಟು ಯೋಜನೆ ವಿಚಾರದಲ್ಲಿ ವಾಸ್ತವ ತಿಳಿದು ಮಾತನಾಡಬೇಕು. ಸತ್ಯಾಂಶ ತಿರುಚಬಾರದು, ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸಬಾರದು ಎಂದು ತಿರುಗೇಟು ನೀಡಿದರು.
ಮೇಕೆದಾಟು ಯೋಜನೆ ಗಂಭೀರ ವಿಷಯ. ಜವಾಬ್ದಾರಿಯಿಂದ ನಡೆಯಬೇಕು. ಜಲವಿವಾದ ಹುಡುಗಾಟದ ವಿಚಾರವಲ್ಲ. ದಾಖಲೆ ಇತ್ತು ಮಾತನಾಡಬೇಕು. ಸುಳ್ಳು ಪ್ರಚಾರ ಬೇಕಿಲ್ಲ ಎಂದು ಕಿಡಿ ಕಾರಿದರು.