Advertisement

ಸಚಿವರ ಯತ್ನದಿಂದ 23 ಕೆರೆಗೆ ನೀರು

03:15 PM Aug 14, 2017 | Team Udayavani |

ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಎಸ್‌. ಮಲ್ಲಿಕಾರ್ಜುನ್‌ರ ಪ್ರಯತ್ನದಿಂದ ಇಂದು ದಾವಣಗೆರೆ, ಜಗಳೂರು ತಾಲೂಕಿನ 23 ಕೆರೆಗಳಿಗೆ
ನೀರು ಹರಿಯುತ್ತಿದ್ದು, ರೈತರು ಸಂಯಮದಿಂದ ಇರಬೇಕು ಎಂದು ಸಿರಿಗೆರೆಯ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

Advertisement

ಭಾನುವಾರ ತಾಲೂಕಿನ ಆನಗೋಡು ಸಮೀಪದ ಸಿದ್ಧನೂರು ಗ್ರಾಮದ ಶ್ರೀ ಮರುಳಸಿದ್ದೇಶ್ವರ ದೇವಸ್ಥಾನದಲ್ಲಿ ರೈತರನ್ನು
ಉದ್ದೇಶಿಸಿ, ಮಾತನಾಡಿದ ಅವರು, ತುಂಗಭದ್ರಾ ನದಿಯಿಂದ ದಾವಣಗೆರೆ ಮತ್ತು ಜಗಳೂರು ತಾಲೂಕಿನ 23 ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ವಲಯವಾರು ವಾಲ್‌Ìಗಳನ್ನು ಅಳವಡಿಸಲಾಗುವುದು. ನೀರನ್ನು ಸಮರ್ಪಕವಾಗಿ ಹರಿಸಬೇಕು ಎಂಬುದು ಇದರ ಉದ್ದೇಶ ಆಗಿದೆ ಎಂದರು.

ರೈತರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ರೈತರಿಗೂ ಸಹ ನೀರು ಸಿಗಲಿದೆ. ರೈತರು ಅವಸರ ಪಟ್ಟು ಪೈಪ್‌ ಹಾಗೂ ವಾಲ್‌ಗ‌ಳನ್ನು ಹಾಳು ಮಾಡಿ, ಆಯಾ ಗ್ರಾಮಗಳ ಕೆರೆಗಳಿಗೆ ಮಾತ್ರವೇ ನೀರು ತುಂಬಿಸಿಕೊಳ್ಳುವ ಕೆಲಸಕ್ಕೆ ಕೈ ಹಾಕಬಾರದೆಂದು ಕಟ್ಟುನಿಟ್ಟಿನ ಸೂಚನೆ
ನೀಡಿದರು. 23 ಕೆರೆಗಳಿಗೆ ನೀರು ಹರಿಸುವ ವಾಲ್‌Ì  ಗಳ ನಿಯಂತ್ರಣಕ್ಕಿಂತ ರೈತರ ಮನಸ್ಸಿನ ನಿಯಂತ್ರಣ ಅವಶ್ಯಕತೆ ಇದೆ ಎಂದು ಹೇಳಿದರು. 

ಕೆಲವು ರೈತರ ದುರಾಸೆಯಿಂದ ಕೆಲವು ಅವಘಡಗಳು ಸಂಭವಿಸುತ್ತಿವೆ. ಇಂತಹ ಘಟನೆಗಳು ಮರುಕಳಿಸಬಾರದು. ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣದಿಂದ ನೀರಿನ ಸಮಸ್ಯೆ ಉಂಟಾಗಿದೆ. ಎಲ್ಲಾ ರೈತರಿಗೂ ಸಹ ದಾಹ ಇದೆ. ಆದರೆ ದಾಹವನ್ನು ನಮ್ಮ ಮೇಲೆ ವಿಶ್ವಾಸವಿಟ್ಟು ಸುಧಾರಿಸಿಕೊಳ್ಳಿ ಎಲ್ಲರಿಗೂ ಸಂತೃಪ್ತಿಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

23 ಕೆರೆಗಳ ಬಗ್ಗೆ ಯಾವುದೇ ಸಮಸ್ಯೆಗಳು ಬಂದರೂ ಪರಿಹರಿಸಲು ತುಂಗಭದ್ರೆ ಹೆಸರಿನಲ್ಲಿ ವಾಟ್ಸಾಪ್‌ ಗ್ರೂಪ್‌ವೊಂದನ್ನು ಆರಂಭಿಸಲಾಗಿದೆ. ಈ ಗ್ರೂಪಿನಲ್ಲಿ ಆಯಾ ಭಾಗದ ರೈತರನ್ನು ಸಂಚಾಲಕರನ್ನಾಗಿ ನೇಮಿಸಿದ್ದು, ಮಠದಿಂದ ಕೆರೆಗಳಿಗೆ ಸಂಬಂಧಿ ಸಿದಂತೆ ಪ್ರಕಟಣೆ ಹೊರಡಿಸಲಾಗುವುದು. ತಮ್ಮ ಸಮಸ್ಯೆಗಳಿದ್ದರೆ ಮಾತ್ರ ಈ ಗ್ರೂಪಿಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು.

Advertisement

ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗಿರೀಶ್‌ ಮಾತನಾಡಿ, 2014 ರಿಂದ ನೀರು ತುಂಬಿಸುವ ಕಾರ್ಯ ನಡೆಯುತ್ತಿದೆ. ಆದರೆ ಮಳೆಗಾಲದ ವೈಪರೀತ್ಯದಿಂದ ನೀರು ಪೂರೈಕೆಯಾಗಿಲ್ಲ. ಪ್ರಸ್ತುತ ಎಲ್ಲಾ ತಾಂತ್ರಿಕ ದೋಷಗಳ ನಿವಾರಣೆಯಾಗಿ ಈಗ ಎಲ್ಲಾ ಕೆರೆಗಳಿಗೂ ನೀರು ಹರಿಸಲಾಗುತ್ತಿದೆ. ರೈತರು ಸಹಕರಿಸಬೇಕೆಂದು ಮನವಿ ಮಾಡಿದರು. 

ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಸ್‌. ಬಸವಂತಪ್ಪ, ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಗಂಗನಕಟ್ಟೆ ಗುರುಸ್ವಾಮಿ, ಎಪಿಎಂಸಿ
ಸದಸ್ಯ ಅಣಜಿ ಚಂದ್ರಶೇಖರ್‌, ನೀರಾವರಿ ಹೋರಾಟ ಸಮಿತಿಯ ಕೊಟ್ರೇಶ್‌ನಾಯ್ಕ, ಡಾ| ಮಂಜುನಾಥ್‌ಗೌಡ, ಗಡಿಗುಡಾಳ್‌ ಮಂಜುನಾಥ್‌, ಯು.ಜಿ. ಶಿವಕುಮಾರ್‌, ಶಶಿಧರ್‌ ಹೆಮ್ಮನಬೇತೂರು,ಇಂಜಿನಿಯರ್‌ಗಳಾದ ಕೊಟ್ರೇಶ್‌ ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next