Advertisement

ಪರಿಸರಕ್ಕೆ ವರವಾದ Lockdown: 20 ವರ್ಷದ ಬಳಿಕ ಪರಿಶುದ್ಧವಾದ ಹರಿದ್ವಾರ, ರಿಷಿಕೇಶ ಗಂಗಾ ನದಿ

08:07 AM Apr 24, 2020 | Nagendra Trasi |

ನವದೆಹಲಿ:ಜಗತ್ತಿನ ಬಹುತೇಕ ದೇಶಗಳು ಲಾಕ್ ಡೌನ್ ನಲ್ಲಿದೆ. ಏತನ್ಮಧ್ಯೆ ಕಲುಷಿತಗೊಂಡಿದ್ದ ಪರಿಸರ ಶುದ್ಧವಾಗತೊಡಗಿದೆ. ಇದಕ್ಕೆ ಉದಾಹರಣೆ ಭಾರತದ ಗಂಗಾ ಮತ್ತು ಯಮುನಾ ನದಿ. ಈವರೆಗೂ ಸಂಪೂರ್ಣವಾಗಿ ಕಲುಷಿತಗೊಂಡಿದ್ದ ಈ ನದಿಗಳ ನೀರು ಸ್ನಾನ ಮಾಡಲು ಯೋಗ್ಯವಾಗಿಲ್ಲವಾಗಿತ್ತು. ಆದರೆ ಇದೀಗ ಹರಿದ್ವಾರ, ರಿಷಿಕೇಶದಲ್ಲಿರುವ ಗಂಗಾ ನದಿ ನೀರು ಕುಡಿಯುವಷ್ಟು ಶುದ್ಧವಾಗಿದೆ ಎಂದು ವರದಿ ತಿಳಿಸಿದೆ.

Advertisement

ಗಂಗಾ ನದಿ ಶುದ್ದೀಕರಣವಾಗಿ ಹಲವು ಸರ್ಕಾರಗಳು ಕೋಟ್ಯಂತರ ರೂಪಾಯಿ ಯೋಜನೆ ರೂಪಿಸಿ, ವ್ಯಯಿಸಿದ್ದರು ಕೂಡಾ ಯಶಸ್ವಿಯಾಗಲು ವಿಫಲವಾಗಿದ್ದವು. ಆದರೆ ಇದೀಗ ದೀರ್ಘಾವಧಿಯ ಲಾಕ್ ಡೌನ್ ನಿಂದಾಗಿ ನದಿ ನೀರು ಶುದ್ಧವಾಗಿದೆ ಎಂದು ವರದಿ ವಿವರಿಸಿದೆ.

ಉತ್ತರಾಖಂಡ್ ನ ಮಾಲಿನ್ಯ ನಿಯಂತ್ರಣ ಮಂಡಳಿ, ಹರಿದ್ವಾರ ಮತ್ತು ರಿಷಿಕೇಶದಲ್ಲಿನ ಗಂಗಾ ನದಿ ನೀರಿನ ಗುಣಮಟ್ಟವನ್ನು ಪರೀಕ್ಷಿಸಿತ್ತು. ಇದೀಗ ನೀರಿನ ಗುಣಮಟ್ಟದ ಫಲಿತಾಶಂ ಪಾಸಿಟಿವ್ ಎಂದು ಬಂದಿದೆ.ಈ ಹಿನ್ನೆಲೆಯಲ್ಲಿ 2000ನೇ ಇಸವಿ ಬಳಿಕ ಮೊದಲ ಬಾರಿಗೆ ಹರಿದ್ವಾರ, ರಿಷಿಕೇಶದಲ್ಲಿನ ಗಂಗಾ ನದಿ ನೀರನ್ನು ಕುಡಿಯಬಹುದಾಗಿದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next