Advertisement

ಬಸವಸಾಗರ ಜಲಾಶಯದಿಂದ ನದಿಗೆ ನೀರು

11:54 AM Feb 12, 2019 | |

ನಾಲತವಾಡ: ಸಮೀಪದ ಬಸವಸಾಗರ ಜಲಾಶಯದಿಂದ ರವಿವಾರ ಬೆಳಗ್ಗೆ 6 ಗಂಟೆಯಿಂದ ಆಣೆಕಟ್ಟಿನ 2 ಕ್ರಸ್ಟ್‌ಗೇಟ್‌ಗಳ ಮೂಲಕ 6 ಸಾವಿರ ಕ್ಯೂಸೆಕ್‌ ನೀರನ್ನು ನದಿ ಪಾತ್ರದ ಮೂಲಕ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರಕ್ಕೆ (ಆರ್‌ಟಿಪಿಎಸ್‌) ಹರಿಸಲಾಗುತ್ತಿದೆ ಎಂದು ಆಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ ಶಂಕರ ನಾಯ್ಕೋಡಿ ತಿಳಿಸಿದ್ದಾರೆ.

Advertisement

ಆರ್‌ಟಿಪಿಎಸ್‌ನ ಬೇಡಿಕೆಯಂತೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆರೋಗ್ಯ ಸಚಿವ ಶಿವಾನಂದ ಪಾಟೀಲರ ನಿರ್ದೇಶನ, ಮೇಲಧಿಕಾರಿಗಳ ಸೂಚನೆಯಂತೆ ಆಣೆಕಟ್ಟಿನ ಕ್ರಸ್ಟ್‌ಗೇಟ್ ಮೂಲಕ ನದಿ ಪಾತ್ರಕ್ಕೆ ನೀರು ಹರಿಸಲಾಗುತ್ತಿದೆ. ಕಾರಣ ನದಿ ತೀರದಲ್ಲಿ ಬರುವ ಗ್ರಾಮಗಳ ಜನ, ಜಾನುವಾರುಗಳು ನದಿಗೆ ಇಳಿಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸೋಮವಾರ ಸಂಜೆ ನದಿ ಪಾತ್ರಕ್ಕೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಒಟ್ಟಾರೆ ಜಲಾಶಯದಿಂದ ಕುಡಿಯುವ ನೀರಿಗೆ ಅವಲಂಬಿತವಾಗಿರುವ ನಗರ, ಪಟ್ಟಣಗಳಿಗೆ ಮುಂದಿನ ಬೇಸಿಗೆ ಜುಲೈ ತಿಂಗಳು ಅಂತ್ಯದವರೆಗೆ 4 ಟಿಎಂಸಿಯಷ್ಟು ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಆಲಮಟ್ಟಿ ಜಲಾಶಯದಲ್ಲಿ ನೀರು ಸಂಗ್ರಹವಿದ್ದು, ಕಾಲ ಕಾಲಕ್ಕೆ ಸರ್ಕಾರದಿಂದ ಬರುವ ಸೂಚನೆ ಮೇರೆಗೆ ಕುಡಿಯುವ ನೀರನ್ನು ಜಲಾಶಯದಿಂದ ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next