ದೇವರಹಿಪ್ಪರಗಿ: ಹುಣಶ್ಯಾಳ ಹಾಗೂ ಕುದರಗುಂಡ ಕೆರೆಗಳ ನಿರ್ಮಾಣ ಪ್ರಕ್ರಿಯೆ ಟೆಂಡರ್ ಹಂತದಲ್ಲಿದ್ದು, ಈಗ ಗ್ರಾಮಕ್ಕೆ ಜಲಜೀವನ ಮಿಷನ್ ಯೋಜನೆಯಡಿ ಮನೆ-ಮನೆಗೆ ನಲ್ಲಿ ಸಂಪರ್ಕ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಸಾಹೇಬಗೌಡ ಪಾಟೀಲ (ಸಾಸನೂರ) ಹೇಳಿದರು.
ಕುದರಗುಂಡ ಗ್ರಾಮದಲ್ಲಿ ಗುರುವಾರ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಸಿಂದಗಿ ಅಡಿಯಲ್ಲಿ 2020-21ನೇ ಸಾಲಿನ ಜಲಜೀವನ ಮಿಷನ್‌ನ ಅಂದಾಜು 28 ಲಕ್ಷ ಮೊತ್ತದ ಮನೆ-ಮನೆಗೆನಲ್ಲಿ ಸಂಪರ್ಕಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಜಲಜೀವನ ಮಿಷನ್ ಯೋಜನೆಯಡಿ ತಾಲೂಕಿನ ನಿವಾಳಖೇಡ ಗ್ರಾಮದಲ್ಲಿ 39 ಲಕ್ಷ, ಮುಳಸಾವಳಗಿ ಎಲ್.ಟಿಯಲ್ಲಿ 16 ಲಕ್ಷಗಳ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಈ ಯೋಜನೆ ಗ್ರಾಮೀಣ ಜನರ ಮನೆ-ಮನೆಗೆ ಕುಡಿವ ನೀರು ಪೂರೈಸುವಲ್ಲಿ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಗ್ರಾಮದ ಜನತೆ ಬೇಡಿಕೆಯಂತೆ ಕುದರಗುಂಡ- ಯಲಗೋಡ ನಡುವಿನ 3 ಕಿ.ಮೀ ರಸ್ತೆ ಹಾಗೂ ಬೀರಲಿಂಗೇಶ್ವರ ದೇವಸ್ಥಾನ ಶಾಸಕರ ಅನುದಾನದಲ್ಲಿ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಶಿವಾನಂದಮಠದ ಸಿದ್ಧರಾಮೇಶ್ವರ ಸ್ವಾಮೀಜಿ, ರಾಮನಗೌಡ ನಾವದಗಿ, ಪ್ರಕಾಶ ಪಡಶೆಟ್ಟಿ, ರಾಮನಗೌಡ ಬಿರಾದಾರ, ಸಿದ್ದು ಬುಳ್ಳಾ, ಪ್ರೇಮಾನಂದ ಮಾಡಗಿ, ಬಾಪುಗೌಡ ಬಿರಾದಾರ, ಬಾಬುಗೌಡ ಪಾಟೀಲ, ಮಲಕಾಜಯ್ಯ ಹಿರೇಮಠ, ಅಪ್ಪಾಸಾಹೇಬಗೌಡ ಬಿರಾದಾರ, ಬಾಬುಗೌಡ ಬಿರಾದಾರ, ಮಹಾಂತೇಶ ಹೊಸಮನಿ, ಗೊಲ್ಲಾಳಪ್ಪ ನಾವಿ, ರವಿ ಪೂಜಾರಿ, ಆನಂದ ರಾಠೊಡ ಸೇರಿದಂತೆ ಇತರರಿದ್ದರು.