Advertisement
ಯರಗೋಳ್ ಅಣೆಕಟ್ಟು ಕಾಮಗಾರಿ 13 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಾಣ ಮಾಡುತ್ತಿರುವ ಅಣೆಕಟ್ಟಿಗೆ ಅಗತ್ಯ ಜಮೀನು ವಶಪಡಿಸಿಕೊಳ್ಳಲು ವಿಳಂಬವಾಯಿತು. ವರ್ಷದಿಂದ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಮುಂದಿ 6 ತಿಂಗಳೊಳಗಾಗಿ ಮುಗಿಸುವ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಿದರು.
Related Articles
Advertisement
ಒಟ್ಟು 240 ಕೋಟಿ ರೂ. ಅನುದಾನದಲ್ಲಿ ಪೈಪ್‌ಲೈನ್ 80 ಕೋಟಿ ರೂ., ಅಣೆಕಟ್ಟು ಮತ್ತು ಸೇವಾ ರಸ್ತೆ ನಿರ್ಮಾಣಕ್ಕೆ 88 ಕೋಟಿ ರೂ. ಮತ್ತು ಅಣೆಕಟ್ಟುನಿಂದ ನೀರು ಪೂರೈಕೆ ಮಾಡಲು ಯಂತ್ರೋಪಕರಣಗಳ ಅಳವಡಿಸಿ ಕ್ರಮಕೈಗೊಳ್ಳುವುದಕ್ಕೆ 72 ಕೋಟಿ ರೂ. ಮಂಜೂರಾಗಿದೆ ಎಂದು ಹೇಳಿದರು.
45 ಗ್ರಾಮಗಳಿಗೆ ನೀರು ಪೂರೈಕೆ: ಬಂಗಾರಪೇಟೆ, ಮಾಲೂರು ಮತ್ತು ಕೋಲಾರ ನಗರಕ್ಕೆ ಕುಡಿಯುವ ಪೂರೈಕೆ ಮಾಡಲು ಯೋಜನೆ ಸಿದ್ಧಪಡಿಸಲಾಗಿದ್ದು, ಕುಡಿಯುವ ನೀರು ಪೂರೈಕೆಗೆ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಇಲಾಖೆಯು ಕ್ರಮಕೈಗೊಳ್ಳಲಿದ್ದು, ಯರಗೋಳ್‌ನಿಂದ ಬಂಗಾರಪೇಟೆ, ಅಲ್ಲಿಂದ ಮಾಲೂರು ಮತ್ತು ಕೋಲಾರಕ್ಕೆ ಹಾದುಹೋಗುವ ಮಾರ್ಗ ಮಧ್ಯೆ ಬರುವ 45 ಗ್ರಾಮಗಳಿಗೆ ನೀರು ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ಒದಗಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಜಿ.ಜಗದೀಶ್, ಯೋಜನಾಧಿಕಾರಿ ರವಿಚಂದ್ರ, ಪಂಚಾಯತ್ ರಾಜ್ ಕಾರ್ಯಪಾಲಕ ಎಂಜಿನಿಯರ್ ಎಚ್.ಡಿ.ಶೇಷಾದ್ರಿ, ತಾಪಂ ಇಒ ಎನ್.ವೆಂಕಟೇಶಪ್ಪ, ಮುಳಬಾಗಿಲು ತಾಪಂ ಇಒ ಮಂಜುನಾಥ್, ಸಾಮಾಜಿಕ ಅರಣ್ಯಾಧಿಕಾರಿ ದೇವರಾಜ್ ಮುಂತಾದವರಿದ್ದರು.