Advertisement

ಗರ್ಡಾಡಿಯ ಫಲ್ಗುಣಿ ನದಿಯ ಹಳ್ಳದಲ್ಲಿ ನೀರುನಾಯಿ ಗುಂಪು!

04:22 AM May 17, 2021 | Team Udayavani |

ಬೆಳ್ತಂಗಡಿ : ಗರ್ಡಾಡಿಯ ಕುಬಳಬೆಟ್ಟು ಗುತ್ತು ಸಮೀಪ ಫಲ್ಗುಣಿ ನದಿಯ ಹಳ್ಳದಲ್ಲಿ 10ರಿಂದ 15ರಷ್ಟಿರುವ ನೀರುನಾಯಿ ಗುಂಪು ಪತ್ತೆಯಾಗಿದೆ.

Advertisement

ಸಂಪತ್‌ ಕೊಂಬ ಅವರು ಮನೆ ಸಮೀಪ ಶನಿವಾರ ಸಂಜೆ ಕಂಡುಬಂದ ನೀರುನಾಯಿಗಳ ವೀಡಿಯೋ ಚಿತ್ರೀ ಕರಿಸಿದ್ದರು. ರವಿವಾರ ಸಂಜೆ ಮತ್ತೆ ಅದೇ ಸ್ಥಳದಲ್ಲಿ ಅವು ಕಾಣಸಿಕ್ಕಿವೆ. ವೇಣೂರು ವಲಯ ಅರಣ್ಯಾಧಿಕಾರಿ ಮಹೀಮ್‌ ಜನ್ನು ಮತ್ತು ಉಪವಲಯ ಅರಣ್ಯ ಅಧಿಕಾರಿ ಸುನೀಲ್‌ ಕುಮಾರ್‌ ಕೆ.ಎಸ್‌. ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.

ಸಿಹಿನೀರು ವಾಸಿಗಳು
ನೀರುನಾಯಿಗಳ ಪೈಕಿ ಪ್ರಪಂಚದಲ್ಲಿ 13 ಪ್ರಭೇದಗಳಿವೆ. ಭಾರತದಲ್ಲಿ ಮೂರೇ ಪ್ರಭೇದಗಳಿದ್ದು, ಇಲ್ಲಿ ಪತ್ತೆಯಾಗಿರು ವುದು Indian smooth coated otters ಎಂಬ ಪ್ರಭೇದಕ್ಕೆ ಸೇರಿದವು. ಸಿಹಿನೀರು ವಾಸಿಗಳಾಗಿರುವ ಇವು ಮೀನು, ಏಡಿ ಇತ್ಯಾದಿಗಳನ್ನು ತಿಂದು ಬದುಕುತ್ತವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕುಬಳಬೆಟ್ಟು ಪರಿಸರದಲ್ಲಿ ಕಿಂಡಿಅಣೆಕಟ್ಟು ಇದ್ದು, ಕಳೆದ ಡಿಸೆಂಬರ್‌ನಲ್ಲಿ ಒಮ್ಮೆ ಕಾಣಸಿಕ್ಕಿದ್ದವು. ರಾತ್ರಿವೇಳೆ ಕೂಗುವುದು ಕೇಳಿಸುತ್ತಿತ್ತು. ಆದರೆ ನೀರುನಾಯಿ ಎಂದು ತಿಳಿದಿರಲಿಲ್ಲ. ಇಂದು ಹಳ್ಳದಲ್ಲಿ ಕಾಣಿಸಿಕೊಂಡದ್ದರಿಂದ ಸ್ಪಷ್ಟವಾಗಿದೆ ಎಂದು ಸಂಪತ್‌ ಕೊಂಬ ಅವರು ಉದಯವಾಣಿಗೆ ತಿಳಿಸಿದ್ದಾರೆ.

ನೀರುನಾಯಿಗಳು ಕುದುರೆಮುಖ ಆಸುಪಾಸಿನ ನದಿಗಳಲ್ಲಿ ಕಾಣಸಿಗುತ್ತಿದ್ದು, ಕಳೆದ ವರ್ಷದ ಪ್ರವಾಹಕ್ಕೆ ನದಿಗಳಲ್ಲಿ ಸಾಗಿಬಂದಿರುವ ಸಾಧ್ಯತೆ ಇದೆ. ಇವುಗಳಿಂದ ಮನುಷ್ಯರಿಗಾಗಲೀ ಇತರ ಪ್ರಾಣಿಗಳಿಗಾಗಲೀ ಅಪಾಯವಿಲ್ಲ. ಸಿಹಿನೀರಿನ ಚೆಕ್‌ಡ್ಯಾಮ್‌ ಪ್ರದೇಶಗಳಲ್ಲಿ ಮರದ ಕಟ್ಟಿಗೆ ನಿಂತಿರುವ ಸ್ಥಳಗಳಲ್ಲಿ ಪೊಟರೆಗಳಂತೆ ಮಾಡಿ ಇವು ವಾಸಿಸುತ್ತವೆ.

Advertisement

– ಮಹೀಮ್‌ ಜನ್ನು, ವಲಯ ಅರಣ್ಯಾಧಿಕಾರಿ, ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next