Advertisement

17 ಕ್ಷುದ್ರಗ್ರಹಗಳಲ್ಲಿದೆ ನೀರು

06:15 AM Dec 20, 2018 | |

ಟೋಕಿಯೊ: ಬಾಹ್ಯಾಕಾಶದಲ್ಲಿ ಹಾರಾಡುವ 17 ಕ್ಷುದ್ರಗ್ರಹಗಳಲ್ಲಿ ನೀರಿನ ಅಂಶವಿರುವುದನ್ನು ಜಪಾನ್‌ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. 

Advertisement

ಜಪಾನ್‌ ಏರೋಸ್ಪೇಸ್‌ ಎಕ್ಸ್‌ಪ್ಲೊರೇಷನ್‌ ಏಜೆನ್ಸಿ (ಜಾಕ್ಸಾ) ಹಾಗೂ ಯೂನಿವರ್ಸಿಟಿ ಆಫ್ ಟೋಕಿಯೋ (ಯುಟಿ) ವಿಜ್ಞಾನಿಗಳು ಈ ಸಂಶೋಧನೆ ಮಾಡಿದ್ದಾರೆ. 2011ರಲ್ಲಿ ಹಾರಿ ಬಿಡಲಾಗಿದ್ದ  ಅಕಾರಿ ಎಂಬ ಉಪಗ್ರಹದ ಅತಿ ಸೂಕ್ಷ್ಮ ಇನ್‌ಫ್ರಾರೆಡ್‌ (2.3 ಮೈಕ್ರೋ ಮೀಟರ್‌) ಕಿರಣಗಳಿಂದ ನೀರಿನ ಪತ್ತೆ ಸಾಧ್ಯವಾಗಿದೆ. ಅಂದಹಾಗೆ, ಈ ಕ್ಷುದ್ರ ಗ್ರಹಗಳಲ್ಲಿನ ನೀರು ತೇವಗೊಂಡ ಖನಿಜಗಳ ಮಾದರಿಯಲ್ಲಿದ್ದು, ಲಕ್ಷಾಂತರ ವರ್ಷಗಳ ಕಾಲಾವಧಿಯಲ್ಲಿ ಆಂತರಿಕವಾಗಿ ನಡೆದಿರುವ ರಾಸಾಯನಿಕ ಪ್ರಕ್ರಿಯೆಗಳಿಂದ ರೂಪು ಗೊಂಡಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ನೀರಿನ ಉಗಮದ ಬಗ್ಗೆ ಹೊಸ ಸಿದ್ಧಾಂತ ಗಳು, ಚರ್ಚೆ, ವಾದಗಳಿಗೆ ಈ ಸಂಶೋಧನೆ ಹೊಸ ದಿಕ್ಕು ನೀಡಲಿದೆ ಎಂದು ನಿರೀಕ್ಷಿಸ ಲಾಗಿದೆ. ಸದ್ಯಕ್ಕೆ ಭೂಮಿ ಹೊರತುಪಡಿಸಿ ಬೇರೆಲ್ಲೂ ನೀರಿನ ಮೂಲವಿಲ್ಲ. 

ಈ ಅತ್ಯಮೂಲ್ಯ ಸಂಪನ್ಮೂಲದ ಉಗಮವಾಗಿ ದ್ದಾದರೂ ಹೇಗೆ ಎಂಬುದಕ್ಕೆ ವಿಜ್ಞಾನಿಗಳಲ್ಲಿ ಈವರೆಗೂ ನಿಖರ ಉತ್ತರವಿಲ್ಲ. ಇತ್ತೀಚೆಗೆ ಇತರ ಕೆಲ ಗ್ರಹಗಳಲ್ಲಿ ನೀರಿನ ಕುರುಹು ಇದೆ ಎಂದು ಊಹಿಸಲಾಗಿದೆಯಾದರೂ ಅದರ ಮೂಲದ ಬಗ್ಗೆಯೂ ನಿಖರ ಉತ್ತರ ಸಿಕ್ಕಿಲ್ಲ. ಹಾಗಾಗಿ, ಜಪಾನ್‌ ವಿಜ್ಞಾನಿಗಳ ಈ ಸಂಶೋ ಧನೆ ಜಲ ಮೂಲಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಬಹುದು ಎಂದು ಆಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next