Advertisement

ನೀರಿನ ಅಭಾವ; ಜನರ ಪರದಾಟ

11:29 AM Jun 09, 2020 | Suhan S |

ಅಥಣಿ: ಶಿರಹಟ್ಟಿ ಗ್ರಾಮದ ಪುನರ್ವಸತಿ ಕೇಂದ್ರದ ಮೂವತ್ತಕ್ಕೂ ಹೆಚ್ಚು ಕುಟುಂಬಗಳು ಕುಡಿವ ನೀರಿಗೆ ಪರಿತಪಿಸುವಂತಾಗಿದೆ. ಕಳೆದ 25 ದಿನಗಳ ಹಿಂದೆ ಕೊಳವೆ ಬಾವಿ ಮೋಟಾರ್‌ ತೊಂದರೆಯಿಂದ ಜನ-ಜಾನುವಾರುಗಳಿಗೆ ನೀರಿಲ್ಲದೆ ಸಮಸ್ಯೆ ಉಂಟಾಗಿದೆ.

Advertisement

ಅಕ್ಕಪಕ್ಕದಲ್ಲೂ ನೀರಿನ ಮೂಲ ಇಲ್ಲದೆ ತುಂಬಾ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಸ್ಥಳೀಯ ಪಿಡಿಒ ನಿರ್ಲಕ್ಷ ಮಾಡುತ್ತಿದ್ದಾರೆಂದು ಗ್ರಾಮಸ್ಥ ಸಂಜೀವ ಶಿವನೂರ ಆರೋಪಿಸಿದರು.

ಸಂದೀಪ್‌ ನೇಸೂರ ಎಂಬುವರು ಮಾತನಾಡಿ, ಹಲವಾರು ದಿನಗಳಿಂದ ಕೊಳವೆ ಬಾವಿ ಮೋಟಾರ್‌ ಬಂದ್‌ ಆಗಿದೆ. ಜನಪ್ರತಿನಿಧಿಗಳು ಈ ಕಡೆ ಬರೋಲ್ಲ, ಅಧಿಕಾರಿಗಳಿಗೆ ಹೇಳಿದರೆ ಯಾರೂ ಗಮನಿಸುತ್ತಿಲ್ಲ. ಆದಷ್ಟು ಬೇಗ ನಮಗೆ ನೀರು ಬರುವಂತೆ ಮಾಡಿ ಎಂದು ಮನವಿ ಮಾಡಿಕೊಂಡರು.

ಈ ಕುರಿತು ಶಿರಹಟ್ಟಿ ಗ್ರಾಮದ ಪಿಡಿಒ ಅಶೋಕ ಫಲಸಮಠ ಪ್ರತಿಕ್ರಿಯಿಸಿ, ಅಲ್ಲಿ ನೀರಿನ ಅಭಾವ ಆಗಿರುವುದು ನಿಜ. ಎರಡು ದಿನಗಳಲ್ಲಿ ಮೋಟಾರ್‌ ರಿಪೇರಿ ಮಾಡಿಸಿ ನೀರು ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next