Advertisement
ನೀರಿನ ಪೋಲು ನಿಯಂತ್ರಣ ಹಾಗೂ ಹೆಚ್ಚುತ್ತಿರುವ ನೀರಿನ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಕೆಲವು ಪ್ರಾಯೋಗಿಕ ಕ್ರಮಗಳನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಮುಖ್ಯವಾಗಿ ಕಡಿಮೆ ನೀರು ಹೊರಹಾಕುವ ಟ್ಯಾಪ್‌ಗ್ಳ ಬಳಕೆಗೆ ಉತ್ತೇಜನ ನೀಡಲು ಕಾರ್ಯಯೋಜನೆ ರೂಪಿಸುತ್ತಿದ್ದು ಆರಂಭಿಕ ಹಂತದಲ್ಲಿ ಸರಕಾರಿ ಕಚೇರಿಗಳಲ್ಲಿ ಸ್ಮಾರ್ಟ್ ಟ್ಯಾಪ್‌ಗ್ಳು ಸೇರಿದಂತೆ ಕಡಿಮೆ ನೀರು ಹೊರಹಾಕುವ ಟ್ಯಾಪ್‌ಗ್ಳನ್ನು ಪ್ರಾಯೋಗಿಕವಾಗಿ ಅಳವಡಿಸಲು ಸರಕಾರ ನಿರ್ಧರಿಸಿದೆ. ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿರುವ ಮಂಗಳೂರಿನಲ್ಲೂ ಈ ಮಾದರಿಯ ಕ್ರಮಗಳನ್ನು ಕೈಕೊಳ್ಳುವ ನಿಟ್ಟಿನಲ್ಲಿ ಚಿಂತನೆಗಳು ನಡೆಯಬೇಕಾಗಿದೆ.
ಕಡಿಮೆ ನೀರು ಚೆಲ್ಲುವ ಟ್ಯಾಪ್‌ಗ್ಳ ಬಳಕೆಗೆ ಪ್ರರೇಪಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಕ್ರಮಗಳನ್ನು ಕೈಗೊಳ್ಳಲು ಸರಕಾರ ನಿರ್ಧರಿಸಿದೆ. ಬೆಂಗಳೂರಿನ ಜಲಮಂಡಳಿ ಹಾಗೂ ಲೋಕೋಪಯೋಗಿ ಇಲಾಖೆಗಳ ಮೂಲಕ ಇದನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಸ್ಮಾರ್ಟ್ ಟ್ಯಾಪ್ ಸೇರಿದಂತೆ ಕಡಿಮೆ ಪ್ರಮಾಣದಲ್ಲಿ ನೀರು ಹೊರಚೆಲ್ಲುವ ಟ್ಯಾಪ್‌ಗ್ಳ ಅಳವಡಿಕೆಯನ್ನು ಉತ್ತೇಜಿಸಲು ಸರಕಾರ ಚಿಂತನೆ ನಡೆಸಿದ್ದು ಆರಂಭದಲ್ಲಿ ಪ್ರಾಯೋಗಿಕವಾಗಿ ಸರಕಾರಿ ಕಚೇರಿಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿದೆ. ಈ ರೀತಿಯ ಟ್ಯಾಪ್‌ಗ್ಳನ್ನು ಬಳಸಿದರೆ ಸರಕಾರಿ ಕಚೇರಿಗಳಲ್ಲಿ ಉಪಯೋಗಿಸುವ ನೀರಿನಲ್ಲಿ ಶೇ. 30 ರಿಂದ 40 ರಷ್ಟು ನೀರು ಉಳಿತಾಯ ಮಾಡಲು ಸಾಧ್ಯ ಎಂಬುದಾಗಿ ಜಲಮಂಡಳಿ ಅಧಿಕಾರಿಗಳು ಅಂದಾಜಿಸಿದ್ದಾರೆ. ಯೋಜನೆಯನ್ನು ಸರಕಾರಿ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುವ ಬಗ್ಗೆ ಲೋಕೋಪಯೋಗಿ ಇಲಾಖೆಯೊಂದಿಗೆ ಕೂಡ ಚರ್ಚೆ ನಡೆದಿದೆ.
Related Articles
Advertisement
ಸರಕಾರದಿಂದ ಸಹಾಯಧನ ಇರಲಿವಿದ್ಯುತ್ ಉಳಿತಾಯದ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಸರಕಾರ ಎಲ್‌ಇಡಿ ವಿದ್ಯುತ್‌ದೀಪಗಳನ್ನು ಅಳವಡಿಸಲು ಸಹಾಯಧನ ಯೋಜನೆ ಜಾರಿಗೆ ತಂದಿದೆ. ಪ್ರತಿಯೊಂದು ಕುಟುಂಬಕ್ಕೆ ನಿರ್ದಿಷ್ಟ ಪ್ರಮಾಣದಲ್ಲಿ ಎಲ್‌ಇಡಿ ಬಲ್ಬ್ಗಳನ್ನು, ಟ್ಯೂಬ್ ಲೈಟ್‌ಗಳನ್ನು ಸಹಾಯಧನದಲ್ಲಿ ನೀಡಲಾಗುತ್ತಿದೆ. ಇದೇ ರೀತಿಯಾಗಿ ನೀರಿನ ಮಿತಬಳಕೆಗೆ ಪೂರಕವಾದ ಟ್ಯಾಪ್‌ಗ್ಳ ಅಳವಡಿಕೆಗೆ ಜನರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರಕಾರದಿಂದ ಸಹಾಯಧನ ನೀಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಸ್ಮಾರ್ಟ್ ಟ್ಯಾಪ್‌ಗ್ಳು ಸೇರಿದಂತೆ ಅತ್ಯಾಧುನಿಕ ಟ್ಯಾಪ್‌ಗ್ಳು ದುಬಾರಿಯಾಗಿರುತ್ತದೆ. ಅದುದರಿಂದ ಇವುಗಳನ್ನು ಅಳವಡಿಸಲು ಜನರು ಮುಂದೆ ಬರುವುದಿಲ್ಲ. ಸಹಾಯಧನ ಲಭ್ಯವಾದರೆ ಜನರನ್ನು ಇದರತ್ತ ಆಕರ್ಷಿಸಬಹುದಾಗಿದೆ. ಕಡಿಮೆ ನೀರು ಹೊರಸೂಸುವ ಟ್ಯಾಪ್‌ಗ್ಳನ್ನು ಅಳವಡಿಸಲು ಉತ್ತೇಜಿಸಲು ಎಲ್‌ಇ ಡಿ ಬಲ್ಬ್ಗಳ ಮಾದರಿಯಲ್ಲೇ ಸಹಾಯಧನ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೂಪಿಸಬೇಕು. ಕಡಿಮೆ ನೀರು ಹೊರಸೂಸುವ ಟ್ಯಾಪ್‌ಗ್ಳನ್ನು ಬಳಸುವುದರಿಂದ ಆಗುವ ಲಾಭಗಳು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲೂ ಕಾರ್ಯಕ್ರಮಗಳು ನಡೆಯಬೇಕು. ತ್ಯಾಜ್ಯ ನೀರು ಸಂಸ್ಕರಣೆ
ಮಳೆ ನೀರನ್ನು ಸಂರಕ್ಷಿಸುವುದರ ಜತೆಗೆ ತ್ಯಾಜ್ಯ ನೀರು ಸಂಸ್ಕರಣೆ ವ್ಯವಸ್ಥೆಯನ್ನು ನಡೆಸುವುದು ಕೂಡ ನೀರು ಉಳಿಸಲು ಪೂರಕವಾಗಿದೆ. ಈಗಾಗಲೇ ನಗರಗಳಲ್ಲಿ ತ್ಯಾಜ್ಯ ನೀರು ಸಂಸ್ಕರಿಸಿ ಬಳಕೆ ಮಾಡಲಾಗುತ್ತಿದ್ದರೂ ಪೂರ್ಣ ಪ್ರಮಾಣದಲ್ಲಿ ಆಗುತ್ತಿಲ್ಲ. ಅಪಾರ್ಟ್‌ಮೆಂಟ್‌ಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ಕಡ್ಡಾಯವಾಗಿ ಸ್ಥಾಪನೆಯಾಗಬೇಕು ಎಂಬ ನಿಯಮ ಇದ್ದರೂ ಪಾಲನೆಯಾಗುತ್ತಿಲ್ಲ. ಈ ನೀರನ್ನು ಇತರ ಬಳಕೆಗೆ ಉಪಯೋಗಿಸುವುದರಿಂದ ನೀರಿನ ಸಂರಕ್ಷಣೆಯಾಗುತ್ತದೆ. ಮಂಗಳೂರಿನಲ್ಲಿ ತ್ಯಾಜ್ಯನೀರನ್ನು ಸಂಸ್ಕರಿಸಿ ಎಂಆರ್‌ಪಿಎಲ್, ಎಸ್‌ಇಝಡ್‌ಗೆ ಬಳಸಲಾಗುತ್ತಿದೆ. ಇದೀಗ ಮನೆಯಲ್ಲಿ ಫ್ಲಶ್ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವ ತಂತ್ರಜ್ಞಾನವೂ ಬಂದಿದೆ. ಕೇಶವ ಕುಂದರ್