Advertisement

ಜಲಸಂರಕ್ಷಣೆ ಇಂದಿನ ಗರಿಷ್ಠ ಆದ್ಯತೆಯಾಗಲಿ

09:22 AM Jul 20, 2019 | sudhir |

ಉಡುಪಿ: ನೀರಿನ ಪ್ರತಿ ಹನಿಯೂ ಅಮೂಲ್ಯ. ನೀರಿನ ಜಲಸಂಪನ್ಮೂಲ ರಕ್ಷಣೆ, ಪೋಲಾಗದಂತೆ ಬಳಸುವುದರಲ್ಲೇ ಭೂಮಿಯ ಭವಿಷ್ಯ ಅಡಗಿದೆ.

Advertisement

ನಿತ್ಯ ನೀರು ಲಭ್ಯತೆಗೆ ಸಮಾಜದ ಪ್ರತಿಯೊಬ್ಬರೂ ಮಳೆನೀರನ್ನು ತಡೆಹಿಡಿದು ಸಂಗ್ರಹಿಸುವ ಅಥವಾ ಭೂಗರ್ಭದಲ್ಲಿ ಇಂಗಿಸುವ ವ್ಯವಸ್ಥೆಯನ್ನು ಮಾಡಬೇಕಿದೆ.

ನೀರಿನ ಬೇಡಿಕೆ

ರಾಜ್ಯ ಜಲ ನೀತಿ ಪ್ರಕಾರ ಗ್ರಾಮಾಂತರದ ಓರ್ವ ವ್ಯಕ್ತಿಗೆ ದಿನಕ್ಕೆ 55ಲೀ., ಪಟ್ಟಣದಲ್ಲಿ ರುವವನಿಗೆ 70 ಲೀ., ನಗರ ಪ್ರದೇಶದಲ್ಲಿರು ವವನಿಗೆ 100 ಲೀ., ಮಹಾನಗರದಲ್ಲಿರುವವರಿಗೆ 135 ಲೀ. ನೀರು ಅಗತ್ಯವಿದೆ. ಭೂಮಿಯಲ್ಲಿ ಶೇ. 97ರಷ್ಟು ನೀರು ಉಪ್ಪುಗಿದ್ದು, ಶೇ. 2ರಷ್ಟು ನೀರು ಮಂಜುಗಡ್ಡೆ ಹಾಗೂ ನೀರ್ಗಲ್ಲುಗಳ ರೂಪದಲ್ಲಿದೆ. ಅಂದರೆ ಮಾನವನ ಬಳಕೆಗೆ ಸಿಗುವ ನೀರು ಕೇವಲ ಶೇ. 1ರಷ್ಟು ಮಾತ್ರ!

ನೀರಿನ ಅಭಾವ ತೀವ್ರವಾಗಲು ಕಾರಣಗಳು

Advertisement

– ನಗರೀಕರಣದ ನೆವದಲ್ಲಿ ಮಳೆ ಆಕರ್ಷಿಸುವ ಕಾಡು ನಾಶ, ಭೂಮಿ ತಂಪಾಗಿರಿಸುವ ಮರಗಿಡಗಳ ನಾಶ, ಜನಸಂಖ್ಯೆ ಹೆಚ್ಚಳದೊಂದಿಗೆ ಹೆಚ್ಚಿದ ನೀರಿನ ಬೆೇಡಿಕೆ, ಜಾಗತಿಕ ತಾಪಮಾನ ಏರಿಕೆ ಮುಂತಾದ ಕಾರಣಗಳು ನೀರಿನ ಅಭಾವ ಹೆಚ್ಚಲು ಕಾರಣವಾಗಿದೆ.

– ಕೃಷಿ ಹಾಗೂ ಸಾಮಾನ್ಯ ಬಳಕೆಗೆ ಉಪಯೋಗವಾಗುತ್ತಿದ್ದ, ಅಂತರ್ಜಲ ಹೆಚ್ಚಲು ಕಾರಣವಾಗುತ್ತಿದ್ದ ಕೆರೆಗಳು, ಗದ್ದೆಗಳನ್ನು ಕೃಷಿ ಮಾಡುವುದನ್ನು ನಿಲ್ಲಿಸಿ, ಸಮುಚ್ಚಯಗಳು, ನಗರ ವಿಸ್ತರಣೆ ಇತ್ಯಾದಿ ಆಗಿದ್ದರಿಂದ ನೀರು ಇಂಗುತ್ತಿಲ್ಲ. ನೀರಿಗಾಗಿ ಎಲ್ಲೆಡೆ ಕೊಳವೆಬಾವಿ ಕೊರೆದು ನೀರಿನ ಮಟ್ಟವೂ ಗಣನೀಯವಾಗಿ ಕುಸಿದಿದೆ.

– ಹೆಚ್ಚಿದ ಕೈಗಾರಿಕೆ, ಮನುಷ್ಯ ಉಂಟುಮಾಡಿದ ತ್ಯಾಜ್ಯದಿಂದ ನೀರು ಕಲುಷಿತವಾಗುತ್ತಿರುವುದು, ನೈಸರ್ಗಿಕ ಸಂಪನ್ಮೂಲವಾದ ನೀರಿನ ಬೇಕಾಬಿಟ್ಟಿ ಬಳಕೆಯಿಂದಲೂ ಅಭಾವವಾಗಿದೆ.

ಜಲ ಸಂರಕ್ಷಣೆ ಅಭಿಯಾನದ ಭಾಗವಾಗಿ ಮಳೆಕೊಯ್ಲು ಮಾಹಿತಿ ಕಾರ್ಯಾಗಾರವನ್ನು ‘ಉದಯವಾಣಿ’ಯು ಜಿಲ್ಲಾಡಳಿತ, ಜಿ.ಪಂ.,

ನಿರ್ಮಿತಿ ಕೇಂದ್ರ, ಎಂಜಿಎಂಕಾಲೇಜಿನ ಸಹಭಾಗಿತ್ವದಲ್ಲಿ ಜು. 20ರ ಬೆಳಗ್ಗೆ

9.30ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ

ನಡೆಸಲಿದ್ದು, ಸಾರ್ವಜನಿಕರು ಭಾಗವಹಿಸಬಹುದು.

ಜಾಗೃತಿ ಅಗತ್ಯ

ನೀರಿನ ಹಿತಮಿತ ಬಳಕೆಯ ಬಗ್ಗೆ ಜನರಲ್ಲಿ ಈ ಕ್ಷಣದಿಂದಲೇ ಅರಿವು ಮೂಡಬೇಕು. ಮಳೆನೀರನ್ನು ಶೇಖರಿಸಿಟ್ಟುಕೊಳ್ಳುವ ಪರಿಪಾಠ ಬೆಳೆಸಿಕೊಂಡರೆ ಬೇಸಗೆ ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ. ನೀರು ಶೇಖರಣೆಯಲ್ಲಿ ಹಲವಾರು ವಿಧಾನಗಳಿದ್ದು, ವೆಚ್ಚವೂ ಅತ್ಯಲ್ಪವಾಗಿದೆ. ಈ ಬಗ್ಗೆ ಪ್ರತಿ ಮನೆಯಲ್ಲೂ ಜಾಗೃತಿಯಾಗಬೇಕು.

-ಜೋಸೆಫ್ ಜೆ.ಎಂ. ರೆಬೆಲ್ಲೊ, ಜಲತಜ್ಞರು

ಕಡಿಮೆ ಖರ್ಚಿನ ಹಲವು ವ್ಯವಸ್ಥೆಗಳಿವೆ. ಕೊಳವೆ ಬಾವಿಯ ಸುತ್ತ 10 ಅಡಿ ಉದ್ದ, 10 ಅಡಿ ಅಗಲ ಮತ್ತು 10 ಅಡಿ ಆಳದ ಗುಂಡಿ ತೋಡಿ, ಕೊಳವೆ ಬಾಗೆ ಹಾಕಿರುವ ಕೇಸಿಂಗ್‌ ಪೈಪ್‌ಗೆ ಅಲ್ಲಲ್ಲಿ 5 ಮಿಲಿ ಮೀಟರ್‌ ವ್ಯಾಸದಲ್ಲಿ ರಂಧ್ರಗಳನ್ನು ಕೊರೆಯಬೇಕು. ಅನಂತರ ಕೇಸಿಂಗ್‌ ಪೈಪ್‌ನ ರಂಧ್ರಗಳ ಸುತ್ತಲೂ ಅಕ್ವಾ ಮೆಷ್‌, ನೈಲಾನ್‌ ಮೆಷ್‌ ಮತ್ತು ಸ್ಯಾಂಡ್‌ ಫಿಲ್ಟರ್‌ನ್ನು ಅಳವಡಿಸಬೇಕು. ಮೆಷ್‌/ಫಿಲ್ಟರ್‌ನ್ನು ಅಳವಡಿಸುವಾಗ ಅಲ್ಯೂಮಿನಿಯಂ ತಂತಿಯಿಂದಲೇ ಸುತ್ತಬೇಕು. ಹೊಂಡದಲ್ಲಿ ಕೇಸಿಂಗ್‌ ಪೈಪ್‌ನ ಸುತ್ತ 1 ಮೀಟರ್‌ ವ್ಯಾಸದ ಸಿಮೆಂಟ್ ರಿಂಗ್‌ಗಳನ್ನು ಜೋಡಿಸಬೇಕು. ರಿಂಗ್‌ನ ಹೊರ ಭಾಗದಲ್ಲಿ ಉಳಿದ ಹೊಂಡದ ಆಳದಲ್ಲಿ 4 ಅಡಿ ಆಳದವರೆಗೆ ಬೋಲ್ಡ್ರಸ್‌ ದಪ್ಪ ಕಲ್ಲುಗಳು, ಅದರ ಮೇಲೆ 2 ಅಡಿ 40 ಮಿ.ಮೀ. ಜಲ್ಲಿ, ಅದರ ಮೇಲೆ 1 ಅಡಿ ಇದ್ದಿಲು, ಅದರ ಮೇಲೆ 1 ಅಡಿ 20 ಮಿ.ಮೀ. ಜಲ್ಲಿ ಹಾಕಬೇಕು. ಅನಂತರ ಗೆದ್ದಲು ನಿರೋಧಕ ಹೈ-ಡಿನ್ಸಿಟಿ ಪೊಲಿಥಿನ್‌ ಮ್ಯಾಟ್ ಹಾಸಬೇಕು. ಇದರ ಮೇಲ್ಭಾಗದಲ್ಲಿ 2 ಅಡಿ ದಪ್ಪದಲ್ಲಿ ದಪ್ಪ ಮರಳನ್ನು ಹಾಕಬೇಕು. ರಿಂಗ್‌ನ ಮೇಲ್ಭಾಗದಲ್ಲಿ ಅದಕ್ಕೊಂದು ಮುಚ್ಚಳವನ್ನು ಮುಚ್ಚಬೇಕು.
ಇಂಗುಗುಂಡಿಯ ಸುತ್ತ ಕಲ್ಲು ಸಿಮೆಂಟಿನಿಂದ ತಡೆ ಗೋಡೆ ಕಟ್ಟಿ ಮಳೆ ನೀರು ಸುಲಭ ಹಾಗೂ ಸರಾಗವಾಗಿ ಬರುವಂತೆಯೂ ಮತ್ತು ನೀರಿನ ಜತೆ ಕಸ-ಕಡ್ಡಿ ಬಾರದಂತೆ ವ್ಯವಸ್ಥೆ ಮಾಡಬೇಕು. ಛಾವಣಿ ಅಥವಾ ತಾರಸಿಯ ಮೇಲಿನ ಮಳೆ ನೀರನ್ನು ಕೂಡ ಸೋರಿ ಬಿಡುವುದರ ಬದಲಾಗಿ ಪೈಪ್‌ ಲೈನ್‌ ಮುಖಾಂತರ ಈ ಕೊಳವೆ ಬಾವಿಯ ಸುತ್ತಲೂ ನಿರ್ಮಿಸಿದ ಇಂಗುಗುಂಡಿಗೆ ಬಂದು ಬೀಳುವಂತೆ ಮಾಡಬೇಕು. ನೀರನ್ನು ಸೋಸುವ/ಶೋಧಿಸುವ ವ್ಯವಸ್ಥೆಯನ್ನು ಮಾಡಿದರೆ ಉತ್ತಮ. ಹೀಗೆ ಮಾಡಿದರೆ ಇಂಗುಗುಂಡಿಯಲ್ಲಿ ಸಂಗ್ರಹವಾಗುವ ಮಳೆ ನೀರು, ಮಣ್ಣಿನಲ್ಲಿ ಇರುವ ರಂಧ್ರಗಳಿಂದ ಮತ್ತು ಬಂಡೆಗಳಲ್ಲಿರುವ ಸೀಳು ಬಿರುಕು ಹಾಗೂ ಕಂದಕಗಳ ಮೂಲಕ ಭೂಮಿಯೊಳಗೆ ಇಳಿಯುವುದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಲು ಸಾಧ್ಯವಿದೆ.
Advertisement

Udayavani is now on Telegram. Click here to join our channel and stay updated with the latest news.

Next