Advertisement

“ಪರಿಸರದೊಂದಿಗೆ ಜಲ ಸಂರಕ್ಷಣೆಯೂ ಪ್ರಮುಖ ಗುರಿ’

02:50 AM Jul 09, 2017 | |

ಬೆಳ್ಮಣ್‌: ಪರಿಸರ ಸಂರಕ್ಷಣೆಯ ಜತೆ ನೀರಿಗಾಗಿ ಅರಣ್ಯ ಎಂಬ ಧ್ಯೇಯದಲ್ಲಿ  ಅರಣ್ಯ ಇಲಾಖೆ ವತಿಯಿಂದ ರಾಜ್ಯದಾದ್ಯಂತ ನಡೆಯುತ್ತಿರುವ ಸಸ್ಯ ಸಂತೆ ವಿಶೇಷ ಕಾರ್ಯಕ್ರಮ ಬೆಳ್ಮಣ್‌ ಪರಿಸರದಲ್ಲಿ  ಸೋಮವಾರ ನಡೆಯಿತು.

Advertisement

ಸಸ್ಯ ಸಂತೆ ಎನ್ನುವ ವಿಶೇಷ ಕಾರ್ಯಕ್ರಮದ ಮೂಲಕ ಪರಿಸರದ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ರಾಜ್ಯ ವ್ಯಾಪ್ತಿ ಅರಣ್ಯ ಇಲಾಖೆ ಮಾಡುತ್ತಿದೆಯೆಂದು ಅರಣ್ಯಾ ಧಿಕಾರಿಗಳು ತಿಳಿಸಿದ್ದಾರೆ.
ಜನರಲ್ಲಿ ಪರಿಸರ ಹಾಗೂ ನೀರಿನ ಬಗ್ಗೆ ಅರಿವು ಮೂಡಿಸುವ ಕಾರ್ಯ ಇದಾಗಿದ್ದು ಪ್ರತಿಯೊಬ್ಬರಲ್ಲಿಯೂ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯ ಕ್ರಮವನ್ನು ಇಲಾಖೆಯಿಂದ ಹಮ್ಮಿ ಕೊಳ್ಳಲಾಗಿದೆಯೆಂದೂ ಅರಣ್ಯಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

ಸಸಿಗಳ ವಿತರಣೆ
ಅರಣ್ಯ ಇಲಾಖೆ ವತಿಯಿಂದ ಸಿಗುವ ಸಸಿಗಳನ್ನು ರಿಯಾಯಿತಿ ದರದಲ್ಲಿ ಜನರಿಗೆ ತಲುಪಿಸಲಾಗುತ್ತಿದ್ದು ಬೆಳ್ಮಣ್‌ ವಲಯ ಅರಣ್ಯಾ ಧಿಕಾರಿಗಳು  ಪ್ರತೀ ಚಿಕ್ಕ ಸಸಿಗಳಿಗೆ 1 ರೂ ಹಾಗೂ ದೊಡª ಪ್ರಮಾಣದ ಸಸಿಗಳಿಗೆ 3 ರೂ ದರದಲ್ಲಿ  ನೀಡುತ್ತಿದ್ದಾರೆ.ತಮ್ಮ ಪರಿಸರವನ್ನು ಹಸಿರಾಗಿಸುವ ಜತೆಯಲ್ಲಿ ಇಲಾಖೆಯ ಜಲಸಂರಕ್ಷಣೆಯ ಉದ್ದೇಶಕ್ಕೆ ಬೆಳ್ಮಣ್‌ ಭಾಗದ ಜನ ಸಸ್ಯ ಖರೀದಿಸಲು ಮುಗಿ ಬೀಳುತ್ತಿದ್ದು ಇಲಾಖೆಯ ಈ ವಿನೂತನ ಯೋಜನೆ ಫಲ ಕೊಟ್ಟಿದೆ ಯಲ್ಲದೆ ಈ ಕುರಿತು ಗ್ರಾಮಸ್ಥರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಸಿಗುವ ಸಸಿಗಳು
ಬೆಳ್ಮಣ್‌ ಪರಿಸರದ ಜನ ವಿವಿಧ ತಳಿಗಳ ಸಸಿಗಳಾದ ಹಲಸು, ಮಾವು, ವಾಟ್‌, ಬೀಟ್‌, ಸಾಗುವಾನಿ, ರಾಮಪತ್ರೆ, ನೆಲ್ಲಿ, ಸಂಪಿಗೆ, ಹೆಬ್ಬಲಸು, ಜಾರಿಗೆ  ಸಹಿತ ವಿವಿಧ  ಜಾತಿಯ ಸಸಿಗಳನ್ನು ಕೊಂಡರು.ಕೊಂಡ ಗಿಡಗಳನ್ನು ನೆಟ್ಟು ಸಂರಕ್ಷಿಸುವ ಬಗ್ಗೆಯೂ ಮಾಹಿತಿ ನೀಡಲಾಯಿತು.

ಖುಷಿ ಕೊಟ್ಟ ಯೋಜನೆ
ಪ್ರತಿಯೋರ್ವರಲ್ಲಿಯೂ ಪರಿಸರ ಹಾಗೂ ನೀರಿನ ಬಗ್ಗೆ ಜಾಗೃತಿ ಮೂಡಿಸುವ ಈ ವಿಶೇಷ ಕಾರ್ಯಕ್ರಮಕ್ಕೆ ವಿವಿಧ ಸಂಘಟನೆಗಳ ಸದಸ್ಯರು  ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ ಅರಣ್ಯ ಇಲಾಖೆಯ ಈ ಯೋಜನೆ ಖುಷಿ ಕೊಟ್ಟಿದೆಯೆಂದರು.

Advertisement

ಬೆಳ್ಮಣ್‌ ಪೇಟೆಯಲ್ಲಿ ನಡೆದ ಸಸಿ ಸಂತೆ ಕಾರ್ಯಕ್ರಮದಲ್ಲಿ ಬೆಳ್ಮಣ್‌ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಮಲ್ಲಿಕಾ ರಾವ್‌, ತಾಲೂಕು ಪಂಚಾಯತ್‌ ಸದಸ್ಯೆ ಆಶಾ ದೇವೇಂದ್ರ ಶೆಟ್ಟಿ, ಉದ್ಯಮಿ ನಂದಳಿಕೆ ಚಾವಡಿ ಅರಮನೆ ಸುಹಾಸ್‌ ಹೆಗ್ಡೆ, ಎನ್‌.ಎಂ. ಹೆಗಡೆ, ಸೀತಾರಾಮ್‌ ಭಟ್‌, ಲಯನ್ಸ್‌ ಅಧ್ಯಕ್ಷ ಪ್ರಕಾಶ್ಚಂದ್ರ, ರೋಟರಿ ಅಧ್ಯಕ್ಷ ದೇವೇಂದ್ರ ಶೆಟ್ಟಿ, ಮುಕುಂದ ಕಾಮತ್‌, ಅರಣ್ಯ ರಕ್ಷಕ ಭಾಸ್ಕರ್‌, ರೋಟರಿ ಸದಸ್ಯ ಮರ್ವಿನ್‌ , ರಾಜೇಶ್‌,  ಮತ್ತಿತರಿದ್ದರು.

ನೀರಿಗಾಗಿ ಅರಣ್ಯ ಎಂಬ ಧ್ಯೇಯದಲ್ಲಿ  ರಾಜ್ಯಾದ್ಯಂತ ನಡೆಯುತ್ತಿರುವ ಅಭಿಯಾನದ ಭಾಗವಾಗಿ ಬೆಳ್ಮಣ್‌ನಲ್ಲಿ  ನಮ್ಮ ವಲಯ ಅರಣ್ಯ ಇಲಾಖೆಯಿಂದ‌ ನಡೆಯುತ್ತಿರುವ ಈ ವಿಶೇಷ ಕಾರ್ಯಕ್ರಮಕ್ಕೆ ಜನರು ಚೆನ್ನಾಗಿ ಸ್ಪಂದಿಸಿದ್ದಾರೆ. ಜನರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸಿ ಮಾಹಿತಿ ನೀಡುವ  ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ.
-ಪ್ರಕಾಶ್ಚಂದ್ರ,  ಬೆಳ್ಮಣ್‌ ಉಪ ವಲಯದ ಅರಣ್ಯಾಧಿಕಾರಿ

ಅರಣ್ಯ ಇಲಾಖೆಯ ಈ  ಕಾರ್ಯಕ್ರಮ ಶ್ಲಾಘನೀಯ,ಪರಿಸರದ ಜೊತೆಗೆ ನೀರಿನ ಬಗ್ಗೆ ಅರಿವು ಮೂಡಿಸುವ ಸಸ್ಯ ಸಂತೆ ಕಾರ್ಯಕ್ರಮ ಜನರಲ್ಲಿ ಪರಿಸರದ ಬಗ್ಗೆ ಒಲವು ಮೂಡಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಶಾಲೆಯ ಮಕ್ಕಳಿಗೂ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು.
-ಮರ್ವಿನ್‌, ಗ್ರಾಮಸ್ಥರು.

Advertisement

Udayavani is now on Telegram. Click here to join our channel and stay updated with the latest news.

Next