Advertisement

ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ ಜಲ ಸಂರಕ್ಷಣೆ ಅಭಿಯಾನ

02:39 PM Jul 19, 2019 | Suhan S |

ಕೆರೂರ: ಹೂಲಗೇರಿ ಗ್ರಾಮದ ಎಚ್.ಆರ್‌. ಪಾಟೀಲ ಸರ್ಕಾರಿ ಪ್ರೌಢಶಾಲೆ ಹಾಗೂ ಸಾಲು ಮರದ ತಿಮ್ಮಕ್ಕ ಇಕೋ ಕ್ಲಬ್‌ಗಳ ಸಹಯೋಗದಲ್ಲಿ ಗುರುವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಪ್ರಭಾತ ಪೇರಿ ಮೂಲಕ ಜಲ ಸಂರಕ್ಷಣೆಯ ಜಾಗೃತಿ ಅಭಿಯಾನ ನಡೆಸಿದರು.

Advertisement

ಇಕೋ ಕ್ಲಬ್‌ ಸಂಚಾಲಕ ಪ್ರೇಮಾನಂದ ದೊಡಮನಿ, ಆಧುನಿಕ ಬದುಕಿನಲ್ಲಿ ನಾವುಗಳೆಲ್ಲಾ ಸಾಕಷ್ಟು ನೀರು ಪೋಲು ಮಾಡುತ್ತಿದ್ದೇವೆ. ಭವಿಷ್ಯದ ಯುವ ಜನಾಂಗಕ್ಕೆ ನೀರು ಉಳಿಸುವುದು ಅಗತ್ಯವಾಗಿದೆ. ಜನರಲ್ಲಿ ಜಾಗೃತಿ ಅರಿವು ಮೂಡಿಸಬೇಕಿದೆ ಎಂದರು.

ನೀರು ಸಂರಕ್ಷಣೆ ಅವಶ್ಯಕತೆ, ಭವಿಷ್ಯದ ಪೀಳಿಗೆಗೆ ನೀರು ಉಳಿಸಲು ಈಗಿನಿಂದಲೇ ಜಾಗೃತಿಯ ಅಗತ್ಯತೆ ಕುರಿತು ಘೋಷ ವಾಕ್ಯ ಮತ್ತು ಬ್ಯಾನರ್‌ ಮೂಲಕ ಗ್ರಾಮಸ್ಥರಲ್ಲಿ ಅರಿವು ಮೂಡಿಸುವಲ್ಲಿ ಮುಂದಾದರು.

ಕಾರ್ಯಕ್ರಮದಲ್ಲಿ ವೈ.ಡಿ. ಹಂಡಿ, ಪ್ರಕಾಶ ಗೌಡರ, ಎಸ್‌.ಎಂ. ಮಲಜಿ, ಎಸ್‌.ಎಸ್‌. ಓಂಕಾರ, ಎಸ್‌.ಎಸ್‌. ರಾಠೊಡ, ಎಸ್‌.ಎನ್‌. ಕಲ್ಲಗೋನಾಳ, ವಿ.ಎಸ್‌. ಯಾವಗಲ್ ಮತ್ತು ಹೂಲಗೇರಿ ಗ್ರಾಮ ಪಂಚಾಯತ್‌ ಸದಸ್ಯರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next