Advertisement

“ನೀರಿನ ಶುಲ್ಕ ವಸೂಲಿ ಕಡ್ಡಾಯ’

08:05 PM Jun 07, 2019 | mahesh |

ಇಡ್ಕಿದು: ಇಡ್ಕಿದು ಗ್ರಾ.ಪಂ.ನ ಸಾಮಾನ್ಯ ಸಭೆ ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು. ಗ್ರಾ.ಪಂ. ವ್ಯಾಪ್ತಿಯಲ್ಲಿ ವೈಯಕ್ತಿಕ ನಳ್ಳಿ ನೀರಿನ ಮೀಟರ್‌ ಅಳವಡಿಸಿದ್ದು, ಮುಂದಿನ ತಿಂಗಳಿನಿಂದ ಕಡ್ಡಾಯವಾಗಿ ಮೀಟರ್‌ ರೀಡಿಂಗ್‌ ಮಾಡಿ ಕರ ವಸೂಲಿ ಮಾಡುವಂತೆ ನೀರಿನ ಕರ ವಸೂಲಿಗಾರರಿಗೆ ಸೂಚಿಸಲಾಯಿತು. ಗ್ರಾ.ಪಂ. ವ್ಯಾಪ್ತಿಯ ರಸ್ತೆಗಳ ಚರಂಡಿಗಳನ್ನು ತುರ್ತಾಗಿ ದುರಸ್ತಿ ಮಾಡುವಂತೆ ನಿರ್ಣಯ ಕೈಗೊಳ್ಳಲಾಯಿತು.

Advertisement

ಆರೋಗ್ಯ ನೈರ್ಮಲ್ಯ ಸಮಿತಿಯನ್ನು ಆರೋಗ್ಯ ಇಲಾಖೆ ಮತ್ತು ಗ್ರಾ.ಪಂ. ಸದಸ್ಯರನ್ನು ಒಳಗೊಂಡಂತೆ ರಚಿಸಿ ಕಾರ್ಯ ವೈಖರಿಯ ಬಗ್ಗೆ ಮಾಹಿತಿಯನ್ನು ಜಿಲ್ಲಾ ಶುಶ್ರೂಷಣಾಧಿಕಾರಿ ಮಿಸ್ಸಿ ಅವರು ನೀಡಿದರು. ಮಳೆಗಾಲದಲ್ಲಿ ಬರಬಹುದಾದ ಡೆಂಗ್ಯೂ, ಚಿಕೂನ್‌ ಗುನ್ಯಾ ಮತ್ತು ಅತಿಸಾರ ಭೇದಿ ರೋಗಗಳ ಮುಂಜಾಗ್ರತಾ ಕ್ರಮಗಳನ್ನು ಆಶಾ ಕಾರ್ಯಕರ್ತೆಯರು ಮನೆ ಭೇಟಿ ಸಂದರ್ಭದಲ್ಲಿ ತಿಳಿಹೇಳುವಂತೆ ಸೂಚಿಸಿದರು.

ಗ್ರಾ.ಪಂ. ಉಪಾಧ್ಯಕ್ಷ ಎಂ. ಸುಧೀರ್‌ ಕುಮಾರ್‌ ಶೆಟ್ಟಿ ಮಿತ್ತೂರು, ಪಂ. ಸದಸ್ಯರಾದ ಜಯರಾಮ ಕಾರ್ಯಾಡಿಗುತ್ತು, ಚಿದಾನಂದ ಪೆಲತ್ತಿಂಜ, ಸತೀಶ್‌ ಕೆಂರ್ದೆಲು, ಕೇಶವ ಉರಿಮಜಲು, ರಮೇಶ ಪೂಜಾರಿ ಸೂರ್ಯ, ಜನಾರ್ದನ ಕಂಪ, ಕರುಣಾಕರ ಅಡ್ಯಾಲು, ವಸಂತಿ ಒಡ್ಯಪೆì, ಜಗದೀಶ್ವರಿ ಕುವೆತ್ತಿಲ, ಬೇಬಿ ಸೂರ್ಯ, ಪ್ರೇಮಾ ಅರ್ಕೆಚ್ಚಾರು, ರಸಿಕಾ ಕಂಬಳದಡ್ಡ, ರತ್ನಾ ಸೇಕೆಹಿತ್ಲು, ಶಾರದಾ ಅಡ್ಯಾಲು ಉಪಸ್ಥಿತರಿದ್ದರು.

ಪಿಡಿಒ ಗೋಕುಲ್‌ದಾಸ್‌ ಭಕ್ತ ಸ್ವಾಗತಿಸಿದರು. ಕಾರ್ಯದರ್ಶಿ ಎ.ಬಿ. ಅಜಿತ್‌ ಕುಮಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next