Advertisement

ಮುಂದಿನ ತಿಂಗಳಿನಿಂದ ನೀರಿನ ಬಿಲ್‌ ಪಾವತಿ ಆನ್‌ಲೈನ್‌

10:07 PM Dec 13, 2019 | mahesh |

ಮಹಾನಗರ: ಮಹಾನಗರ ಪಾಲಿಕೆಯ ನಿಗದಿತ ಪೌರ ಸೇವೆಗಳು ಮುಂದಿನ ಒಂದು ತಿಂಗಳಲ್ಲಿ ಆನ್‌ಲೈನ್‌ ಮುಖೇನ ಜನರ ಕೈಗೆಟಕುವಂತೆ ಮಾಡಲು ಪಾಲಿಕೆ ಕೊನೆಯ ಹಂತದ ಸಿದ್ಧತೆ ನಡೆಸುತ್ತಿದೆ. ಮೊದಲನೇ ಹಂತದಲ್ಲಿ ನೀರಿನ್‌ ಬಿಲ್‌ ಪಾವತಿ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇತರೇ ಸೇವೆಗಳನ್ನು ಕೂಡ ಆನ್‌ಲೈನ್‌ನಲ್ಲಿ ಪಡೆಯಲು ಅನುವು ಮಾಡಿಕೊಡಲು ಪಾಲಿಕೆ ಚಿಂತಿಸುತ್ತಿದೆ.

Advertisement

ಪಾಲಿಕೆ ಅಧಿಕಾರಿಗಳ ಮಾಹಿತಿ ಪ್ರಕಾರ ಆನ್‌ಲೈನ್‌ ವ್ಯವಸ್ಥೆಗೆ ಡಾಟಾ ಪ್ರಕ್ರಿ ಯೆಯು ಕೊನೆಯ ಹಂತದಲ್ಲಿದ್ದು, ಮುಂದಿನ ಕೆಲವು ದಿನಗಳಲ್ಲಿ ಸಾರ್ವ ಜನಿಕರಿಗೆ ಲಭ್ಯವಾಗಲಿದೆ. ಆನ್‌ಲೈನ್‌ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಬ್ಯಾಂಕ್‌ ಅಧಿಕಾರಿಗಳ ಜತೆ ಮಾತುಕತೆ ನಡೆ Ó ‌ಲಾ ಗುತ್ತಿದೆ. ಆ್ಯಪ್‌ ಬಿಡುಗಡೆ ಮಾಡಿ ಮೊಬೈಲ್‌ ಮುಖೇನ ಆನ್‌ಲೈನ್‌ ವ್ಯವ ಸ್ಥೆಯು ಗ್ರಾಹಕರಿಗೆ ಲಭಿಸುವಂತೆ ಮಾಡು ವುದು ಪಾಲಿಕೆಯ ಉದ್ದೇಶ. ಆದರೆ ಇದೀಗ ಮೊದಲ ಹಂತದಲ್ಲಿ ಪಾಲಿಕೆ ವೆಬ್‌ಸೈಟ್‌ನಲ್ಲಿಯೇ ಹಣ ಪಾವ ತಿ ಗೆ ಅವಕಾಶ ಕಲ್ಪಿಸುವ ಕುರಿತು ಚಿಂತಿಸಲಾಗುತ್ತಿದೆ.

ಪಾಲಿಕೆ ಸೇವೆಗಳು ಆನ್‌ಲೈನ್‌ನಲ್ಲಿ ಸಿಗಲಿವೆ. ಎಂದು ಪಾಲಿಕೆ ಅಧಿಕಾರಿಗಳು ಭರವಸೆ ನೀಡಿ 2020 ಜನವರಿಗೆ ಒಂದು ವರ್ಷ ಸಮೀಪಿಸುತ್ತಿದೆ. ಆದರೂ ಇನ್ನೂ ಆನ್‌ಲೈನ್‌ ಸೇವೆಗಳು ಮಾತ್ರ ವಿಳಂಬ ವಾ ಗಿವೆ. ಕಳೆದ ವರ್ಷ ಜನವರಿ ಯಿಂದ ನೀರಿನ ಶುಲ್ಕ, ಖಾತಾ ಬದಲಾಣೆ, ಖಾತಾ ನೋಂದಣಿ, ನೀರಿನ ಸಂಪರ್ಕ, ಯುಜಿಡಿ ಸಂಪರ್ಕ, ಪುರಭವನದ ಬಾಡಿಗೆ, ಮೈದಾ ನದ ಬಾಡಿಗೆ ಸಹಿತ ಪಾಲಿಕೆಯಿಂದ 10 ಸೇವೆಗಳನ್ನು ಆನ್‌ಲೈನ್‌ ಮೂಲಕ ಮಾಡಬಹುದು ಎಂಬು ದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದರು.

ಪ್ರಸ್ತುತ ನೀರಿನ ಬಿಲ್‌, ಪುರಭವನ ಬಾಡಿಗೆ ಸಹಿತ ಬಹುತೇಕ ಸೇವೆಗಳಿಗಾಗಿ ಜನರು ಪಾಲಿಕೆ ಕಚೇರಿ ಅಥವಾ ಮಂಗಳೂರು ಒನ್‌ಗೆ ತೆರಳಬೇಕಾಗಿದೆ. ಅಲ್ಲಿ ಗಂಟೆಗಟ್ಟಲೆ ನಿಂತು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕಾಗಿದೆ. ಇದಕ್ಕೆ ಮುಕ್ತಿ ನೀಡುವ ನಿಟ್ಟಿನಲ್ಲಿ ಆನ್‌ಲೈನ್‌ ಸೇವೆ ಆರಂಭಿಸಲಾಗುವುದು ಎಂಬುದಾಗಿ ಪಾಲಿಕೆ ಹೇಳಿತ್ತು.

ತುಮಕೂರಿನಲ್ಲಿ ಪ್ರಯೋಗ
ಈಗಾಗಲೇ ತುಮಕೂರು ನಗರ ಪಾಲಿಕೆಯಲ್ಲಿ ಬಿಲ್‌ ಪಾವತಿಗೆ ಆನ್‌ಲೈನ್‌ ವ್ಯವಸ್ಥೆ ಜಾರಿಯಲ್ಲಿದ್ದು, ಇದೇ ಮಾದರಿಯನ್ನು ಮನಪಾದಲ್ಲೂ ಜಾರಿಗೊಳಿಸಲು ಪಾಲಿಕೆ ನಿರ್ಧರಿಸಿತ್ತು. ಈ ಮೂಲಕ ಎಲ್ಲ ಪೌರ ಸೇವೆಗಳು ಜನರಿಗೆ ಕುಳಿತಲ್ಲಿಯೇ ಸಿಗುವಂತೆ ಮಾಡುವ ಪರಿಕಲ್ಪನೆ ಇರಿಸಲಾಗಿತ್ತು. ಇದೀಗ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ.

Advertisement

ಕೊನೆಯ ಹಂತದ ಸಿದ್ಧತೆ
ಮಹಾನಗರ ಪಾಲಿಕೆಯ ಆನ್‌ಲೈನ್‌ ವ್ಯವಸ್ಥೆಗೆ ಸಿದ್ಧತೆ ಮಾಡಲಾಗುತ್ತಿದ್ದು, ಡಾಟಾ ಪ್ರಕ್ರಿಯೆಯು ಕೊನೆಯ ಹಂತದಲ್ಲಿದೆ. ಒಂದು ತಿಂಗಳಿನಲ್ಲಿ ಪಾಲಿಕೆಯ ಸಾರ್ವಜನಿಕರಿಗೆ ಆನ್‌ಲೈನ್‌ ವ್ಯವಸ್ಥೆ ಕಲ್ಪಿಸಲಿದೆ. ಮೊದಲನೇ ಹಂತದಲ್ಲಿ ನೀರಿನ ಬಿಲ್‌ ಪಾವತಿಗೆ ಅವಕಾಶ ನೀಡಲಾಗುತ್ತದೆ.
 - ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ, ಪಾಲಿಕೆ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next