Advertisement

ನೀರು,ಮರಳು ಸಮಸ್ಯೆಗೆ ಸ್ಪಂದನೆ: ಜಿಲ್ಲಾಧಿಕಾರಿ

03:10 AM Apr 25, 2019 | Team Udayavani |

ಉಡುಪಿ: ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಚಿಂತನೆ ನಡೆಸಲಾಗುವುದು ಮತ್ತು ಮರಳು ಸಮಸ್ಯೆಯನ್ನು ಕಾನೂನು ರೀತ್ಯಾ ಪರಿಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದ್ದಾರೆ.

Advertisement

ಲೋಕಸಭಾ ಚುನಾವಣೆಯ ನಿರ್ವಹಣೆಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಲು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಗುರುವಾರ ನೀರಿನ ಸಮಸ್ಯೆ ಕುರಿತು ಸಭೆ ಕರೆದಿದ್ದೇನೆ ಎಂದರು.

ಟ್ಯಾಂಕರ್‌ ಮೂಲಕ ನೀರು ಸರಬರಾಜಿಗೆ ನೀತಿ ಸಂಹಿತೆ ಕಾರಣಕ್ಕೆ ಒಪ್ಪುತ್ತಿಲ್ಲ ಎಂಬ ದೂರಿನ ಬಗ್ಗೆ, ಜಿಪಿಎಸ್‌ ಅಳವಡಿಸಿದ ಟ್ಯಾಂಕರ್‌ನಲ್ಲಿ ಸರಬರಾಜು ಮಾಡಬಹುದು. ಸಮರ್ಪಕವಾಗಿ ಬೇಡಿಕೆ ಸಲ್ಲಿಸಿದರೆ ಅನುಮತಿ ಕೊಡಬಹುದು. ಕೆಲವು ಗ್ರಾ.ಪಂ.ಗಳಲ್ಲಿ ಇದನ್ನು ಮಾಡುತ್ತಿದ್ದೇವೆ ಎಂದರು.

ನೀರು ಸಂಗ್ರಹಕ್ಕೆ ಅಡ್ಡಿಯಾಗುವ ಹೂಳೆತ್ತುವ ಕುರಿತು ಪಟ್ಟಿ ಕೊಡಲು ಹೇಳಿದ್ದೇನೆ. ಇದರಲ್ಲಿ ಬಜೆಯೂ ಸೇರಿದೆ. ಸಮರ್ಪಕ ಕ್ರಿಯಾಯೋಜನೆ ಕೊಟ್ಟರೆ ಒಂದೆರಡು ವಾರಗಳಲ್ಲಿ ಕ್ರಮ ಜರುಗಿಸುತ್ತೇವೆ ಎಂದರು.

ಅನುಮತಿ ಸಿಕ್ಕಿದ ಕುಂದಾಪುರ ತಾಲೂಕಿನ ನಾನ್‌ಸಿಆರ್‌ಝಡ್‌ ವ್ಯಾಪ್ತಿಯ 2 ಮರಳುದಿಬ್ಬಗಳನ್ನು ತೆರವುಗೊಳಿಸಲು ಬೇಕಾದ ಪ್ರಕ್ರಿಯೆ ಎ. 23ರ ಬಳಿಕ ನಡೆಸಬಹುದು ಎಂದು ಸರಕಾರ ಸೂಚಿಸಿದೆ. ಈ ಕುರಿತು ತಿಂಗಳ ಹಿಂದೆಯೇ ಪತ್ರ ಬರೆದಿದ್ದೆವು. ಇದರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.

Advertisement

171 ಗುತ್ತಿಗೆದಾರರಿಗೆ ಮರಳುಗಾರಿಕೆ ನಡೆಸಲು ಅವಕಾಶ ಕೊಡಬಹುದು ಎಂದು ರಾಜ್ಯ ಮತ್ತು ಕೇಂದ್ರ ಸರಕಾರ ಹೇಳಿದೆ ಎಂಬ ಶಾಸಕ ಕೆ. ರಘುಪತಿ ಭಟ್‌ ಅವರ ಹೇಳಿಕೆಯನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಾಗ, ಪ್ರತಿಕ್ರಿಯೆಗೆ ನಿರಾಕರಿಸಿದರು. ಚುನಾವಣೆಗೆ ಹಿಂದೆ ಯಾವ ಸ್ಥಿತಿ ಇತ್ತೋ ಅದೇ ಸ್ಥಿತಿ ಮುಂದುವರಿಯುತ್ತಿದೆ. ಕಾನೂನು ಪ್ರಕಾರ ಕ್ರಮ ಜರುಗಿಸುತ್ತೇವೆ ಎಂದು ಉತ್ತರಿಸಿದರು.

ಶೇ.83 ಎಪಿಕ್‌ ಕಾರ್ಡ್‌ ಬಳಕೆ
ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಮತದಾನ ಬಹಿಷ್ಕಾರಿಸುತ್ತೇವೆಂದು ಹೇಳಿದಾಗ ತಹಶೀಲ್ದಾರರು ಮನವೊಲಿಸಿದರು ಎಂದು ಜಿಲ್ಲಾಧಿಕಾರಿ ಹೇಳಿದರು. ಎಲ್ಲ ಕಡೆ ಶಾಂತಿಯುತ ಮತದಾನ ನಡೆದಿದೆ. ಇದಕ್ಕೆ ರಾಜಕೀಯ ಪಕ್ಷಗಳು, ಅಧಿಕಾರಿಗಳು, ಪೊಲೀಸರು, ಸಿಬಂದಿ, ಜನರು ಕಾರಣ ಎಂದು ಶ್ಲಾ ಸಿದರು. ಶೇ.83ರಷ್ಟು ಮತದಾರರು ಎಪಿಕ್‌ ಕಾರ್ಡ್‌ ಬಳಸಿದ್ದಾರೆ.ಎಸ್‌ಪಿ ನಿಶಾ ಜೇಮ್ಸ್‌ ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆ ಮತ ಪ್ರಮಾಣ ಹೆಚ್ಚು
ಲೋಕಸಭೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.75.91 ಮತದಾನವಾಗಿದ್ದು, ಇದರಲ್ಲಿ ಉಡುಪಿ ಜಿಲ್ಲೆಯ ಮತದಾನ ಶೇ.77.66 ಆಗಿದೆ. ಸೈಂಟ್‌ ಸಿಸಿಲೀಸ್‌ ಶಾಲೆಯಲ್ಲಿ ಮತಯಂತ್ರಗಳನ್ನು ಸೂಕ್ತ ಬಂದೋ ಬಸ್ತ್ ನಲ್ಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next