Advertisement

ನೀರು, ಮರಳು ಸಮಸ್ಯೆ: ಶಾಸಕ ಮಠಂದೂರು ಆರೋಪ

03:42 AM May 21, 2019 | Team Udayavani |

ಮಂಗಳೂರು: ಜಿಲ್ಲೆಯಲ್ಲಿ ನೀರು ಮತ್ತು ಮರಳಿನ ಸಮಸ್ಯೆಗೆ ಉಸ್ತುವಾರಿ ಸಚಿವರು, ಮಹಾನಗರ ಪಾಲಿಕೆ ಆಡಳಿತ ಮತ್ತು ಜಿಲ್ಲಾ ಡಳಿತವೇ ಕಾರಣ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಮತ್ತು ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.

Advertisement

2- 3 ತಿಂಗಳಿಂದ ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಇದೆ. ವಿದ್ಯುತ್‌ ಕಣ್ಣುಮುಚ್ಚಾಲೆ ಆಡುತ್ತಿ¤ದೆ. ಇದನ್ನೆಲ್ಲ ಸಮರ್ಪಕವಾಗಿ ನಿಭಾಯಿಸಬೇಕಾದ ಉಸ್ತುವಾರಿ ಸಚಿವರೇ ಕಾಣುತ್ತಿಲ್ಲ ಎಂದವರು ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲೂ ಪ್ರಕೃತಿ ಮುನಿಸು ತೋರಿದೆ. ಪಶ್ಚಿಮ ವಾಹಿನಿ ಯೋಜನೆ ಘೋಷಿಸಿ ವರ್ಷ ಕಳೆದರೂ ಅನುಷ್ಠಾನ ವಾಗಿಲ್ಲ. ಕಿಂಡಿ ಅಣೆಕಟ್ಟು ಯೋಜನೆ ಕಾರ್ಯಗತಗೊಂಡಿಲ್ಲ ಎಂದರು.

ನದಿಯಲ್ಲಿ ಮರಳಲ್ಲ, ಹೂಳು
ನದಿಗಳಲ್ಲಿ ಮರಳು ತುಂಬಿ ಸಮಸ್ಯೆಯಾಗುತ್ತಿ ದ್ದರೂ ಮರಳಿಗಾಗಿ ಪರ ದಾಡುವ ಪರಿಸ್ಥಿತಿ ಇದೆ. ಆದರೆ ನಾನ್‌ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ 9 ಜನರಿಗೆ ಮಾತ್ರ ಮರಳು ತೆಗೆಯಲು ಪರವಾನಿಗೆ ನೀಡಲಾಗಿದೆ. ಅದರಲ್ಲೂ ಅವೈಜ್ಞಾನಿಕ ಶರ್ತ ವಿಧಿಸಲಾಗಿದೆ. ಇದರಿಂದ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪಕ್ಕೆ ಉಸ್ತುವಾರಿ ಸಚಿವರು, ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತವೇ ಹೊಣೆ ಎಂದರು.

ಅನುದಾನವೇ ಇಲ್ಲ
ಶಾಸಕರಿಗೆ ತಲಾ 2 ಕೋಟಿ ರೂ. ಅನುದಾನವನ್ನು ಕ್ಷೇತ್ರದ ಅಭಿ ವೃದ್ಧಿಗೆ ನೀಡುವುದಾಗಿ ಹೇಳಿದ್ದ ಸರಕಾರ, ಈ ತನಕ ಕೇವಲ 50 ಲಕ್ಷ ರೂ. ಮಾತ್ರ ನೀಡಿದೆ. ಸರಕಾರಕ್ಕೆ ಆರ್ಥಿಕ ಬರ ಬಂದಂತಿದೆ ಎಂದು ಟೀಕಿಸಿದರು. ಸಿಎಂ ಮಲೆನಾಡು ಅಭಿ ವೃದ್ಧಿ ಯೋಜನೆಯಡಿ 1 ಕೋ.ರೂ. ನೀಡುವುದಾಗಿ ಬೆಳಗಾವಿ ಅಧಿ ವೇಶನದಲ್ಲಿ ಹೇಳಿ 6 ತಿಂಗಳು ಕಳೆ ದರೂ ಚಿಕ್ಕಾಸೂ ಬಂದಿಲ್ಲ. ಅಡಿಕೆ ಕೊಳೆ ರೋಗದಿಂದ 56,000 ರೈತರು ಸಂಕಷ್ಟ ದಲ್ಲಿದ್ದು, 60 ಕೋಟಿ ರೂ. ಹಾನಿ ಆಗಿದೆ. ಪರಿಹಾರ ಭರವಸೆ ಸಿಕ್ಕಿದರೂ ಹಣ ಬಿಡುಗಡೆ ಆಗಿಲ್ಲ ಎಂದರು.

ಶಾಸಕ ಡಾ| ವೈ. ಭರತ್‌ ಶೆಟ್ಟಿ, ಮುಖಂಡರಾದ ರವಿಶಂಕರ ಮಿಜಾರ್‌, ಸಂಜಯ ಪ್ರಭು, ಕಿಶೋರ್‌ ರೈ ಉಪಸ್ಥಿತರಿದ್ದರು.

Advertisement

ಎತ್ತಿನಹೊಳೆ ವಿರುದ್ಧ ಅಧಿವೇಶನದಲ್ಲಿ ಪ್ರಸ್ತಾವ‌
ಎತ್ತಿನಹೊಳೆ ಯೋಜನೆಯ ವಿರುದ್ಧ ಕರಾವಳಿಯ ಎಲ್ಲ ಬಿಜೆಪಿ ಶಾಸಕರು ಮುಂದಿನ ಅಧಿವೇಶನ ದಲ್ಲಿ ಪ್ರಸ್ತಾವಿಸಲಿದ್ದಾರೆ ಎಂದು ಮಠಂದೂರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next