Advertisement

ಹೊಸ ಆವಿಷ್ಕಾರಕ್ಕೆ ಪುರಸ್ಕಾರ

08:30 AM Oct 26, 2018 | Karthik A |

ಕ್ಯಾಲಿಫೋರ್ನಿಯಾ: ವಾತಾವರಣದಲ್ಲಿನ ಗಾಳಿಯನ್ನೇ ಬಳಸಿ ಶುದ್ಧ ಕುಡಿಯುವ ನೀರನ್ನು ಉತ್ಪಾದಿಸುವ ಹೊಸ ತಂತ್ರಜ್ಞಾನ ಆವಿಷ್ಕರಿಸಿರುವ ಕ್ಯಾಲಿಫೋರ್ನಿಯಾದ ಡೇವಿಡ್‌ ಹಟ್ಜ್ì ಹಾಗೂ ರಿಚ್‌ ಗ್ರೋಡನ್‌ ಜೋಡಿಗೆ ಪ್ರಸಕ್ತ ವರ್ಷದ ‘ವಾಟರ್‌ ಅಬಂಡನ್ಸ್‌ ಎಕ್ಸ್‌-ಪ್ರೈಜ್‌’ ಪ್ರಶಸ್ತಿ ಸಂದಿದೆ. 11 ಕೋಟಿ ರೂ. ನಗದು ಪುರಸ್ಕಾರಕ್ಕೂ ಅವರು ಭಾಜನರಾಗಿದ್ದಾರೆ. ಪರಿಸರ ಸ್ನೇಹಿ ವಿಧಾನಗಳ ಮೂಲಕ ನೀರನ್ನು ಉತ್ಪಾದಿಸುವ ತಂತ್ರಜ್ಞಾನ ಆವಿಷ್ಕರಿಸುವವರಿಗೆ ಎಕ್ಸ್‌ ಪ್ರೈಜ್‌ ಸಂಸ್ಥೆ 2016ರಿಂದ ಈ ಸ್ಪರ್ಧೆ ಆಯೋಜಿಸುತ್ತಿದ್ದು, ಈ ಬಾರಿ 100ಕ್ಕೂ ಹೆಚ್ಚು ಸಂಶೋಧಕರು ಭಾಗವಹಿಸಿದ್ದರು. ವಿಶೇಷವೆಂದರೆ, ಈ ಸಂಸ್ಥೆಯ ಟ್ರಸ್ಟಿಗಳಲ್ಲಿ ಭಾರತೀಯರಾದ ಉದ್ಯಮಿ ರತನ್‌ ಟಾಟಾ ಕೂಡ ಒಬ್ಬರು.

Advertisement

ಏನಿದು ತಂತ್ರಜ್ಞಾನ?: ‘WeDew’ (ವುಡ್‌-ಟು-ಎನರ್ಜಿ ಡಿಪ್ಲಾಯ್ಡ ವಾಟರ್‌ ಸಿಸ್ಟಂ) ಹೆಸರಿನ ಈ ತಂತ್ರಜ್ಞಾನದಲ್ಲಿ, ವಾತಾವರಣದಲ್ಲಿನ ಬಿಸಿ ಗಾಳಿ ಹೀರಿಕೊಂಡು ಅದನ್ನು ಈ ದಂಪತಿ ಆವಿಷ್ಕರಿಸಿರುವ ‘ಸ್ಕೈವಾಟರ್‌’ ಎಂಬ ಪರಿಕರದಿಂದ ತಣ್ಣಗಾಗಿಸಿ, ಆನಂತರ ಕುಗ್ಗಿಸಲಾಗುತ್ತದೆ. ಹೀಗೆ ಕುಗ್ಗಲ್ಪಟ್ಟ ಗಾಳಿ ಟ್ಯಾಂಕ್‌ನಲ್ಲಿ ಮೋಡಗಳ ರೂಪದಲ್ಲಿ ಸಂಗ್ರಹವಾಗುತ್ತದೆ. ಮೋಡಗಳು ಕ್ರಮೇಣ ನೀರಾಗಿ ಪರಿವರ್ತನೆಗೊಳ್ಳುತ್ತದೆ. ಇದರಿಂದ ಕೇವಲ 1.20 ರೂ. ವೆಚ್ಚದಲ್ಲಿ ಪ್ರತಿದಿನ 2,000 ಲೀ. ನೀರು ಉತ್ಪಾದಿಸಬಹುದು. ಇನ್ನು, ಗಾಳಿಯನ್ನು ಕುಗ್ಗಿಸಲು ಬೇಕಾಗುವ ವಿದ್ಯುತ್ತನ್ನು ಬಯೋಗ್ಯಾಸ್‌ ಮೂಲಕ ಉತ್ಪಾದಿಸಿ, ಅದರಿಂದ ಬರುವ ಇದ್ದಿಲು, ಬೂದಿಯನ್ನು ಪುನಃ ಗಿಡಗಳಿಗೆ ಬಳಸಬಹುದು. ಹಾಗಾಗಿ, ಇದು ಶೇ. 100ರಷ್ಟು ಪರಿಸರ ಸ್ನೇಹಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next