ಬೆಂಗಳೂರು: ನೀರು ಮತ್ತು ಪೆಟ್ರೋಲ್ ಮಿಶ್ರಣವಾದರೆ ಏನು ಮಾಡ ಬೇಕು? ಇಂಥದ್ದೊಂದು ಪ್ರಶ್ನೆಗೆ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ ಲಿಮಿಟೆಡ್ (ಎಂಆರ್‌ಪಿಎಲ್) ಉತ್ತರ ಹುಡುಕಿದೆ.
ನೀರು ಮತ್ತು ಪೆಟ್ರೋಲಿಯಂ ಉತ್ಪನ್ನವನ್ನು ಸುಲಲಿತವಾಗಿ ಬೇರ್ಪಡಿಸುವ ಸೂಪರ್ ಹೈಡ್ರೋಫೋಬಿಕ್ ಸ್ಪಾಂಜ್ ಅನ್ನು ಎಂಆರ್‌ಪಿಎಲ್ ಸಂಶೋಧಿಸಿದೆ.
ಇಂಧನ ಸಂಸ್ಕರಣ ಘಟಕ, ಪೆಟ್ರೋಲಿಯಂ ಉತ್ನನ್ನಗಳ ಸಂಸ್ಥೆ ಮತ್ತು ಪೆಟ್ರೋಲ್ ಬಂಕ್ ಸಹಿತವಾಗಿ ಇನ್ನಿತರ ಸ್ಥಳಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಗೆ ನೀರು ಮಿಶ್ರಣವಾಗುತ್ತಿರುತ್ತದೆ. ತೈಲದ ಜತೆ ನೀರು ಸೇರಿದರೆ ನೀರು ಕೆಳಭಾಗದಲ್ಲಿ ನಿಲ್ಲುತ್ತದೆೆ. ಹೀಗಿದ್ದಾಗ ಸುಲಭವಾಗಿ ಇದನ್ನು ಬೇರ್ಪಡಿಸುವುದು ಕಷ್ಟ. ಈ ನಿಟ್ಟಿನಲ್ಲಿ ಎಂಆರ್‌ಪಿಎಲ್‌ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ನೀರು ಮತ್ತು ತೈಲವನ್ನು ಬೇರ್ಪಡಿಸಲು ಸೂಪರ್ ಹೈಡ್ರೋಫೋಬಿಕ್ ಸ್ಪಾಂಜ್‌ನ್ನು ಸಿದ್ಧಪಡಿಸಿದೆ. ಇದರ ಪ್ರಾತ್ಯಕ್ಷಿಕೆಯನ್ನು ಬೆಂಗಳೂರು ಅಂತಾ ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ಇಡಲಾಗಿದೆ.
ಪೆಟ್‌ಕೋಲ್ ಪಾಲಿಮರ್ ಶೀಟ್
ಎಂಆರ್‌ಪಿಎಲ್‌ನ ಮತ್ತೂಂದು ಸಂಶೋಧನೆ ಪೆಟ್‌ಕೋಲ್ ಪಾಲಿಮರ್ ಶೀಟ್. ಕಚೇರಿ ಅಥವಾ ಇತರ ಒಳಾಂಗಣಗಳ ವಿನ್ಯಾಸಕ್ಕೆ ಇದನ್ನು ಬಳಸಬಹುದು. ಇದಕ್ಕೆ ನಿರುಪಯುಕ್ತ ಕಲ್ಲಿದ್ದಲನ್ನು ಉಪಯೋಗಿಸಿಕೊಳ್ಳುತ್ತಿರುವುದು ವಿಶೇಷ. ಶೇ.40ರಷ್ಟು ಪೆಟ್‌ಕೋಲ್(ಬಳಸಿದ ಇದ್ದಿಲು) ಬಳಸಿಕೊಂಡು ಪಾಲಿಮರ್ ಶೀಟ್‌ಗಳನ್ನು ಸಿದ್ಧಪಡಿಸಲಾಗುತ್ತದೆ. ಅತ್ಯಂತ ಸುಸ್ಥಿರತೆಯ ಜತೆಗೆ ಇದು ದೀರ್ಘಕಾಲ ಬಾಳಿಕೆಗೆ ಬರಲಿದೆ ಎಂದು ಸಂಸ್ಥೆಯ ಆದಿಶಂಕರ್ ಅವರು ಮಾಹಿತಿ ನೀಡಿದರು.
ಸೂಪರ್ ಹೈಡ್ರೋ ಫೋಬಿಕ್ ಸ್ಪಾಂಜ್‌ಗೆ ಸಂಬಂಧಿಸಿ ದಂತೆ ಹಕ್ಕುಸ್ವಾಮ್ಯ (ಪೇಟೆಂಟ್)ವನ್ನು ಎಂಆರ್‌ಪಿಎಲ್ ಪಡೆದುಕೊಂಡಿದೆ. ಆಡಳಿ ತಾತ್ಮಕ ತೀರ್ಮಾನದ ಬಳಿಕ ಈ ಸ್ಪಾಂಜ್ ಮಾರಾಟಕ್ಕೆ ಲಭ್ಯ ವಾಗ ಲಿದೆ. ವೆಚ್ಚವೂ ಅಷ್ಟೇನೂ ದುಬಾರಿ ಯಾಗಿರುವುದಿಲ್ಲ.
– ಆದಿಶಂಕರ ರಾವ್
ಮುಖ್ಯ ನಿರ್ವಾಹಕ, ಸಂಶೋಧನ ಮತ್ತು ಅಭಿವೃದ್ಧಿ ವಿಭಾಗ ಲ್ಯಾಬೋರೇಟರಿ
– ರಾಜು ಖಾರ್ವಿ ಕೊಡೇರಿ