Advertisement

ಛೋಟಾ ಭೀಮ್‌ ನೋಡುತ್ತಾ, ಸೀರೆಗೆ ಫಾಲ್ಸ್ ಹಚ್ಚುತ್ತಾ..

08:11 AM Apr 29, 2020 | mahesh |

ಲಾಕ್‌ಡೌನ್‌ನ ಮೊದಲೆರಡು ದಿನ ತಲೆ ಕೆಟ್ಟು, ಹೇಗಪ್ಪಾ ದಿನ ಕಳೆಯುವುದು ಅಂತ ಗೊಣಗಿಕೊಳ್ಳುವಂತಾದರೂ, ಅನಿವಾರ್ಯವಾಗಿ ಅದಕ್ಕೆ ಹೊಂದಿಕೊಳ್ಳಲೇಬೇಕಾಯ್ತು. ಅದರಲ್ಲೂ, ಪರೀಕ್ಷೆ ಬರೆಯದೆಯೇ ಪಾಸಾದ, ಪರೀಕ್ಷೆ ಬರೆಯಬೇಕಾದ ಮಕ್ಕಳು ಮನೆಯಲ್ಲಿ ಇರುವುದರಿಂದ, ನಾಜೂಕಾಗಿ ದಿನದೂಡಬೇಕಾದ ಸಂಕಟ. ರಜೆಯ ಹಿಗ್ಗು ಒಬ್ಬರಿಗಾದರೆ, ಓದಿನ ಜವಾಬ್ದಾರಿ ಮತ್ತೂಬ್ಬರಿಗೆ. ಇವರ ಮದ್ಯೆ ಹೈರಾಣಾಗುವ ಪರಿಸ್ಥಿತಿ ನನ್ನದು.

Advertisement

ಇಲ್ಲಿ ನನ್ನ ಸಹಾಯಕ್ಕೆ ಬಂದದ್ದು, ಮರೆತುಹೋಗಿದ್ದ ಹೊಲಿಗೆ, ಕಸೂತಿ ಮತ್ತು ದೂರದರ್ಶನದಲ್ಲಿ ಮರುಪ್ರಸಾರವಾಗುತ್ತಿರುವ ರಾಮಾಯಣ, ಮಹಾಭಾರತ ಧಾರಾವಾಹಿಗಳು. ಮಕ್ಕಳೊಂದಿಗೆ ಕೂತು ನೋಡುತ್ತಾ, ಅವರಿಗೆ ಅರ್ಥವಾಗುವಂತೆ ಕಥೆ ಹೇಳುವುದು, ಈಗ ನನ್ನಿಷ್ಟದ ಕೆಲಸ. ನನ್ನ ದೈನಂದಿನ ಕೆಲಸಗಳಲ್ಲಿ ಕುತೂಹಲ ತೋರುತ್ತ, ಸಹಾಯ ಮಾಡಲು ಮುಂದಾಗುವ ಮೊಮ್ಮಗನ ತುಂಟಾಟವನ್ನು ಸಹಿಸಿಕೊಳ್ಳುವುದರ ಜೊತೆಗೆ, ಅವನೊಂದಿಗೆ ಡೋರಾ, ಛೋಟಾ ಭೀಮ್‌ಗಳನ್ನೂ ನೋಡುತ್ತಿದ್ದೇನೆ. ಅಷ್ಟೇ ಅಲ್ಲ, ಸಾದಾ ರವಿಕೆಗಳ ತೋಳುಗಳಿಗೆ ಹಳೆಯ ಸೀರೆಗಳ ಬಾರ್ಡರ್‌ ಹೊಲಿದು, ಗ್ರ್ಯಾಂಡ್‌ ಲುಕ್‌ ಕೊಡುವಲ್ಲಿ ಯಶಸ್ವಿಯಾಗಿದ್ದೇನೆ. ಸೂಜಿ ದಾರ ಹಿಡಿದು, ಹೊಸ ಸೀರೆಗಳಿಗೆ ಫಾಲ್ಸ್ ಹಚ್ಚುತ್ತಿರುವೆ. ಅಷ್ಟರಮಟ್ಟಿಗೆ, ಹಣ ಉಳಿತಾಯ ಮಾಡಿದ ಸಂತಸವೂ ಸಿಕ್ಕಿದೆ. ಮನೆಯಲ್ಲಿ ತರಕಾರಿಯಿಲ್ಲದಿದ್ದಾಗ, ಬಾಲ್ಕನಿಯಲ್ಲಿ ಬೆಳೆದಿದ್ದ ಬಸಳೆ ಸೊಪ್ಪಿನ ಎಲೆ, ಬಳ್ಳಿಯನ್ನೇ ಉಪಯೋಗಿಸಿ ಅಡುಗೆ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದು ಲಾಕ್‌ಡೌನ್‌ನ ದಿನಗಳ ಹೈಲೈಟ್

– ಕೆ.ವಿ. ರಾಜಲಕ್ಷ್ಮೀ

Advertisement

Udayavani is now on Telegram. Click here to join our channel and stay updated with the latest news.

Next