ಉಡುಪಿ: ಪೆರ್ಡೂರಿನ ಸುಣ್ಣಂಗಿ ಎಂಬ ಪ್ರದೇಶದಲ್ಲಿರುವ ಸರ್ಕಾರಿ ಬಾವಿಯೊಂದಕ್ಕೆ ನಾಗರ ಹಾವೊಂದು ಬಿದ್ದಿದ್ದು, ಇದನ್ನು ಖ್ಯಾತ ಉರಗ ತಜ್ಞ ಗುರುರಾಜ ಸನಿಲ್ ಅವರು ಬಾವಿಗಿಳಿದು ಹಾವನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ:28ನೇ ವರ್ಷದ ಪುತ್ತೂರು ಕೋಟಿ – ಚೆನ್ನಯ ಕಂಬಳ ಸಂಪನ್ನ: ಇಲ್ಲಿದೆ ಸಂಪೂರ್ಣ ಫಲಿತಾಂಶ ಪಟ್ಟಿ
ಬಾವಿಯೊಳಗೆ ಹಲವು ದಿನಗಳಿಂದ ಹಾವು ಇದ್ದಿರುವುದನ್ನು ಗಮನಿಸಿದ ಪೆರ್ಡೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ದೇವು ಪೂಜಾರಿ ಅವರು ಸನಿಲ್ ಅವರಿಗೆ ಕರೆ ಮಾಡಿ ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಗುರುರಾಜ್ ಸನಿಲ್ ಅವರು ಏಣಿಯ ಸಹಾಯದ ಮೂಲಕ ಬಾವಿಯೊಳಗೆ ಇಳಿದು ನಾಗರ ಹಾವನ್ನು ಹಿಡಿದಿದ್ದರು. ಸನಿಲ್ ಅವರ ಕಾರ್ಯಕ್ಕೆ ದೇವು ಪೂಜಾರಿ ಹಾಗೂ ಪಂಚಾಯ್ತಿ ಸದಸ್ಯ ಜಗದೀಶ್ ಶೆಟ್ಟಿ ಸಹಕಾರ ನೀಡಿದ್ದರು.
ಹಾವನ್ನು ಸಮೀಪದ ಕಾಡಿಗೆ ಬಿಡಲಾಗಿದ್ದು, ಅದು ಸುಮಾರು 15 ದಿನಗಳಿಂದ ಬಾವಿಯೊಳಗೆ ಇದ್ದಿದ್ದು, ಅದು ಆಹಾರವಿಲ್ಲದೆ ಸೊರಗಿರುವುದಾಗಿ ಸನಿಲ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಗುರುರಾಜ್ ಸನಿಲ್ ಅವರು ಕಳೆದ ಹಲವಾರು ವರ್ಷಗಳಿಂದ ಈ ಕಾಯಕವನ್ನು ಮಾಡುತ್ತಿದ್ದು, ಈವರೆಗೆ ಅವರು ಸುಮಾರು 25 ಸಾವಿರಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿದ್ದಾರೆ.