ಗ್ಲಾಸ್ಕೋ:ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ “ಕಾಪ್ 26” ಶೃಂಗದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸ್ಕಾಟ್ಲೆಂಡ್ ನ ಗ್ಲಾಸ್ಗೋದಿಂದ ಹೊರಡುವ ಮೊದಲು ಭಾರತೀಯ ಸಮುದಾಯದವರನ್ನು ಭೇಟಿಯಾಗಿದ್ದು, ಈ ಸಂದರ್ಭದಲ್ಲಿ ಮೋದಿ ಡ್ರಮ್ಸ್ ಬಾರಿಸಿದ್ದು ವೈರಲ್ ಆಗಿದೆ.
ಇದನ್ನೂ ಓದಿ:ಹಾನಗಲ್ ನಲ್ಲಿ ಕಾಂಗ್ರೆಸ್ ಮುಳುಗುವ ಹಂತದಲ್ಲಿ ಕಡ್ಡಿ ಹಿಡಿದು ಬದುಕಿದೆ : ಸಚಿವ ಈಶ್ವರಪ್ಪ
ಪ್ರಧಾನಿ ಮೋದಿ ಅವರು ಭಾರತಕ್ಕೆ ತೆರಳುವ ಮುನ್ನ ಸಾಂಪ್ರದಾಯಿಕ ಉಡುಗೆ ಮತ್ತು ಟರ್ಬನ್ಸ್ ಧರಿಸಿದ್ದ ಭಾರತೀಯ ಸಮುದಾಯದರು ಭಾರೀ ಸಂಖ್ಯೆಯಲ್ಲಿ ಸೇರಿದ್ದು, ಅವರನ್ನೆಲ್ಲಾ ಭೇಟಿಯಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದರು. ಈ ವೇಳೆ ತಾವೂ ಕೂಡಾ ಡ್ರಮ್ಸ್ ಬಾರಿಸುವ ಮೂಲಕ ಸಂಗೀತ ನುಡಿಸುತ್ತಿದ್ದ ತಂಡಕ್ಕೆ ಸಾಥ್ ನೀಡಿದ್ದರು.
ಭಾರತೀಯ ಸಮುದಾಯದ ಹಲವಾರು ಮಂದಿಗೆ ಹಸ್ತಲಾಘವ ಮಾಡಿದ ಪ್ರಧಾನಿ ಮೋದಿ ಅವರು ಬಳಿಕ ಕೆಲವು ಕುಟುಂಬದ ಸದಸ್ಯರ ಜತೆ ಸಂವಹನ ನಡೆಸಿದರು. ಕೆಲವು ಪುಟಾಣಿಗಳು ಪ್ರಧಾನಿ ಮೋದಿ ಅವರ ಬಳಿ ಬಂದು ಹಸ್ತಲಾಘವದ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.
Related Articles
ಹವಾಮಾನ ಬದಲಾವಣೆ ಶೃಂಗದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಅವರು, ನಮ್ಮ ಪುರಾತನ ಗ್ರಂಥಗಳು ಎಲ್ಲಾ ಜೀವರಾಶಿ ಮತ್ತು ಶಕ್ತಿಗಳ ಮೂಲ ಸೂರ್ಯ ಎಂದು ನಮಗೆ ನಿರ್ದೇಶಿಸಿವೆ. ಎಲ್ಲಿಯವರೆಗೆ ನಾವು ಸೂರ್ಯನ ಜೊತೆಗಿದ್ದೇವೋ ಭೂಮಿ ಪ್ರವರ್ಧಮಾನಕ್ಕೆ ಬರುತ್ತಲೇ ಇತ್ತು. ಆದರೆ ನಾವು ಯಾವಾಗ ಸೂರ್ಯನಿಂದ ದೂರ ಸಾಗಲು ಆರಂಭಿಸಿದೆವೋ ನಮ್ಮ ಸಂಕಷ್ಟಗಳು ಆರಂಭವಾದವು ಎಂದು ತಿಳಿಸಿದ್ದರು.