Advertisement

ಸಾಕುನಾಯಿ ಹುಟ್ಟುಹಬ್ಬಕ್ಕೆ 2.5 ಲಕ್ಷ ರೂ. ಮೌಲ್ಯದ ಗೋಲ್ಡ್‌ ಚೈನ್‌ ಗಿಫ್ಟ್‌ ಕೊಟ್ಟ ಮಹಿಳೆ

11:57 AM Jul 08, 2024 | Team Udayavani |

ಮುಂಬಯಿ: ಕೆಲವರಿಗೆ ಮನೆಯಲ್ಲಿರುವ ಸಾಕುನಾಯಿಗಳ ಮೇಲೆ ಅಪಾರವಾದ ಪ್ರೀತಿ ಇರುತ್ತದೆ. ಮುದ್ದಾಗಿ ಅವುಗಳನ್ನು ಮನೆಯ ಸದಸ್ಯರಂತೆಯೇ ಸಾಕುತ್ತಾರೆ. ಅನ್ನ, ನೀರು ಕೊಟ್ಟು ಸಾಕುವ ಈ ಸಾಕುನಾಯಿಗಳು ಅಷ್ಟೇ ನಿಷ್ಠೆಯಿಂದ ಇರುತ್ತವೆ.

Advertisement

ಮುಂಬಯಿಯಲ್ಲಿ ಮಹಿಳೆಯೊಬ್ಬರು ತನ್ನ ಪ್ರೀತಿಯ ಸಾಕುನಾಯಿಯ ಹುಟ್ಟುಹಬ್ಬಕ್ಕೆ ದುಬಾರಿ ಗಿಫ್ಟ್‌ ಕೊಟ್ಟು ಸುದ್ದಿಯಾಗಿದ್ದಾರೆ.

ಮುಂಬೈ ಮೂಲದ ಸರಿತಾ ಸಲ್ಡಾನ್ಹಾ ಎನ್ನುವವರು ʼಟೈಗರ್‌ʼ ಹೆಸರಿನ ತನ್ನ ಸಾಕುನಾಯಿಗೆ 2.5 ಲಕ್ಷ ರೂ. ಮೌಲ್ಯದ ಗೋಲ್ಡ್‌ ಚೈನ್‌ ಹಾಕಿ ನಾಯಿಯ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಚೆಂಬೂರಿನ ಅನಿಲ್ ಜ್ಯುವೆಲರ್ಸ್ ಎಂಬ ಆಭರಣ ಮಳಿಗೆಯು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದೆ.

ಸಲ್ಡಾನ್ಹಾ ತನ್ನ ಟೈಗರ್‌ಗಾಗಿ ಚಿನ್ನದ ಚೈನ್‌ ವೊಂದನ್ನು ಹಾಕಿ ಅದರ ಕತ್ತಿಗೆ ಹಾಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

Advertisement

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದ್ದು, ಸಾಕುನಾಯಿಯ ಮೇಲೆ ಮಹಿಳೆಗೆ ಇರುವ ಪ್ರೀತಿಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.

ʼಕ್ಯೂಟ್‌ʼ ಎಂದು ಕಾಮೆಂಟ್‌ ಮಾಡಿ, ಹ್ಯಾಪಿ ಬರ್ತ್‌ ಡೇ ಟೈಗರ್‌ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next