Advertisement
ರಾಜ್ಯ ಸರಕಾರವು ಮಹಿಳೆಯರ ಮತ್ತು ಮಕ್ಕಳ ಅಕ್ರಮ ಸಾಗಾಟ ತಡೆ, ಬಾಲ್ಯ ವಿವಾಹ ನಿಷೇಧ ಮತ್ತು ಸಮಗ್ರ ಮಕ್ಕಳ ರಕ್ಷಣೆಗಾಗಿ ಈ ಹಿಂದೆ ಗ್ರಾಮ ಮಟ್ಟದಲ್ಲಿ ರಚಿಸಿದ್ದ ಸಮಿತಿಗಳನ್ನು ವಿಲೀನಗೊಳಿಸಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕಾವಲು ಸಮಿತಿಯನ್ನು ರಚಿಸುವಂತೆ ಎಲ್ಲ ಗ್ರಾ.ಪಂ.ಗಳಿಗೆ ಆದೇಶ ನೀಡಿತ್ತು.
ಸಮಿತಿಯಲ್ಲಿ 13 ಹುದ್ದೆಗ ಳನ್ನು ರಚಿಸಲಾಗಿದೆ. ಗ್ರಾ.ಪಂ.ಅಧ್ಯಕ್ಷರು (ಮಹಿಳೆ) ಸಮಿತಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ (ಮಹಿಳಾ ಉಪಾಧ್ಯಕ್ಷರಿಲ್ಲದಿದ್ದಲ್ಲಿ ಸದಸ್ಯೆ) ಸಮಿತಿಯ ಉಪಾಧ್ಯಕ್ಷರಾಗಿರುತ್ತಾರೆ. ಓರ್ವ ಗ್ರಾ.ಪಂ. ಮಹಿಳಾ ಸದಸ್ಯೆ, ಗ್ರಾ.ಪಂ. ವ್ಯಾಪ್ತಿ ಸರಕಾರಿ ಶಾಲೆಯ ಮುಖ್ಯ ಶಿಕ್ಷಕರು (ಮುಖ್ಯೋಪಾಧ್ಯಾಯರು ಪುರುಷರಾಗಿ ದ್ದರೆ ಶಿಕ್ಷಕಿಯ ಆಯ್ಕೆ), ಗ್ರಾಮ ಲೆಕ್ಕಿಗರು, ಆಶಾ ಕಾರ್ಯಕರ್ತೆ, ಬೀಟ್ ಪೊಲೀಸ್ ಅಧಿಕಾರಿ, ಗ್ರಾ.ಪಂ. ವ್ಯಾಪ್ತಿಯ ಐಸಿಡಿಎಸ್ ಮೇಲ್ವಿಚಾರಕಿ, ಸ್ವಯಂಸೇವಾ ಸಮಿತಿ ಮಹಿಳಾ ಸದಸ್ಯ, ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ತಲಾ ಒಬ್ಬ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ, ಸ್ತ್ರೀ ಶಕ್ತಿ ಸಂಘದ ಪ್ರತಿನಿಧಿ, ಪಿಡಿಒ ಸಮಿತಿಯ ಸದಸ್ಯರಾಗಿರುತ್ತಾರೆ. ಸಮಿತಿಯ ಜವಾಬ್ದಾರಿ
ಗ್ರಾ.ಪಂ. ಮಟ್ಟದಲ್ಲಿ ಸಮಿತಿಯು ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಸಮಿತಿಯು ತನ್ನ ವ್ಯಾಪ್ತಿಯ 18 ವರ್ಷದೊಳಗಿನ ಹೆಣ್ಣುಮಕ್ಕಳ ಮತ್ತು 21 ವರ್ಷದೊಳಗಿನ ಗಂಡು ಮಕ್ಕಳ ಶಿಕ್ಷಣ, ವಾಸಸ್ಥಳ ಸೇರಿದಂತೆ ವಿವಿಧ ಮಾಹಿತಿ ಸಂಗ್ರಹಿಸಬೇಕು. ಪೊಲೀಸ್, ಶಾಲೆ, ಅಂಗನವಾಡಿ, ಮಹಿಳಾ ಸ್ವಸಹಾಯ ಸಂಘಗಳು, ಯುವ ಸಂಘಟನೆಗಳು ಮಕ್ಕಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಬೇಕು. ಮಕ್ಕಳ ಅಕ್ರಮ ಸಾಗಾಣಿಕೆ ತಡೆಗಟ್ಟುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಸಮಿತಿ ಮಾಡುತ್ತದೆ. ಗ್ರಾಮಕ್ಕೆ ಬಂದ ಹೊಸಬರ ಮಾಹಿತಿ ಸಂಗ್ರಹ, ಬಾಲ್ಯವಿವಾಹ ತಡೆಗೆ ಅಗತ್ಯ ಕ್ರಮ, ಶಿಕ್ಷಣ ವಂಚಿತ ಮಕ್ಕಳನ್ನು ಗುರುತಿಸಿ ಶಾಲೆಡಿಚಿ ಕರೆತರುವ ಪ್ರಯತ್ನ, ಸರಕಾರದ ಸವಲತ್ತುಗಳ ಮಾಹಿತಿ ಒದಗಣೆ ಸಮಿತಿಯ ಇತರ ಹೊಣೆಗಳು.
Related Articles
– ಶೇಷಪ್ಪ, ಉಸ್ಮಾನ್ ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕರು ಉಡುಪಿ ಮತ್ತು ದ.ಕ.
Advertisement
– ತೃಪ್ತಿ ಕುಮ್ರಗೋಡು