ನಗರದ ಜನವಾಡ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ಕೇಂದ್ರ ಪಾವನಧಾಮದಲ್ಲಿ ಬ್ರಹ್ಮಕುಮಾರಿಸ್ ಯುವ ವಿಭಾಗದಿಂದ ಆಯೋಜಿಸಿದ್ದ “ನನ್ನ ಭಾರತ ಸುವರ್ಣ ಭಾರತದ ಪರಿಕಲ್ಪನೆ’ ಸಂಕಲ್ಪ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
Advertisement
ಇಂದಿನ ಜನರು ದುಡ್ಡಿನ ಬೆನ್ನತ್ತಿ ಜೀವನದ ಅತ್ಯಮೂಲ್ಯ ಸಂತೋಷವನ್ನು ಕಳೆದುಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ಜನಪ್ರಿಯ ರಾದವರೆಲ್ಲ ಶ್ರೇಷ್ಠರಾಗಿರುವುದಿಲ್ಲ. ಹಾಗೆಯೇ ಶ್ರೇಷ್ಠರಾಗಿರುವವರೆಲ್ಲ ಜನಪ್ರಿಯರಾಗಿರುವುದಿಲ್ಲ. ನಮ್ಮಜೀವನದ ಅಂತಿಮ ಯಾತ್ರೆಗೆ ತೆರಳುವಾಗ ನಾವು ಕೂಡಿಟ್ಟ ಸಂಪತ್ತು ಹೊತ್ತೂಯ್ಯಲು ಜೇಬು ಸಹ ಇರುವುದಿಲ್ಲ. ನಮ್ಮನ್ನು ನರಕಕ್ಕೆ ಕರೆದೊಯ್ಯುವ ಯಮನು ಸಹ ಲಂಚ ಪಡೆಯಲಾರ. ಹೀಗಿರುವಾಗ ನಮಗೆ ನೂರು ಅಂತಸ್ತಿನ ಬಂಗಲೆ, ಹತ್ತಾರು ಕಾರುಗಳು, ಇಪ್ಪತ್ತು ಆಳುಗಳು ಏಕೆ ಬೇಕು ಎಂದು ಪ್ರಶ್ನಿಸಿದರು.
ಬೀದರ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗಿಸಲು ನಮ್ಮೊಂದಿಗೆ ಸರ್ವರೂ ಕೈ ಜೋಡಿಸಬೇಕು ಎಂದು
ಕರೆ ನೀಡಿದರು. ಮಹಾರಾಷ್ಟ್ರದ ಪುಣೆಯ ಬ್ರಹ್ಮಕುಮಾರಿ ಕೇಂದ್ರದ ಸಂಚಾಲಕಿ ಬಿ.ಕೆ. ಶ್ರೀಲತಾ ಸಹೋದರಿ ಮಾತನಾಡಿ, 2017ರ ಆಗಸ್ಟ್ 13ರಂದು ಆರಂಭವಾದ ಈ ಯಾತ್ರೆಯು ಉತ್ತರ ಭಾರತದ ಗುಜರಾತ, ಮಧ್ಯ
ಪ್ರದೇಶ, ಮಹಾರಾಷ್ಟ್ರ, ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣಾ ರಾಜ್ಯಗಳಲ್ಲಿ
ಸುಮಾರು ಮೂರು ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳನ್ನು ಯುವಜನರಿಗಾಗಿ ನಡೆಸಿದ್ದು, ಸುಮಾರು ನಾಲ್ಕು ಲಕ್ಷ ಯುವಜನರು ಇದರ ಲಾಭ ಪಡೆದಿದ್ದಾರೆ. ಸುಮಾರು ಮೂವತ್ತು ಸಾವಿರ ಕಿ.ಮೀ. ವರೆಗೆ ಈ ರ್ಯಾಲಿ ಸಂಚರಿಸಿದೆ. 2020ರೊಳಗೆ ಇಡೀ ದೇಶದ ಮೂಲೆ, ಮೂಲೆಗಳಿಗೆ ಸಂಚರಿಸಿ ಸ್ವತ್ಛ ಹಾಗೂ ಸಮೃದ್ಧ ಭಾರತ ನಿರ್ಮಿಸುವ ಗುರಿ ಹೊಂದಿರುವುದಾಗಿ ಹೇಳಿದರು.
Related Articles
Advertisement