Advertisement

ಪಪಂ ರಸ್ತೆಯಲ್ಲೇ ಕಸದ ರಾಶಿ!

01:13 PM Jan 01, 2020 | Team Udayavani |

ಬೀಳಗಿ: ಸ್ಥಳೀಯ ಡಾ|ಅಂಬೇಡ್ಕರ್‌ ವೃತ್ತದ ಬಳಿಯ ಬುಡ್ಡರ ಓಣಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಬಜಾರ್‌ ರಸ್ತೆಯ ಬದಿಗೆ ನಿತ್ಯ ಕಸ-ಮುಸುರಿ ಚೆಲ್ಲುತ್ತಿರುವ ಪರಿಣಾಮ ಗಬ್ಬೆದ್ದು ನಾರುತ್ತಿದೆ. ಇದನ್ನು ಶುಚಿಗೊಳಿಸಲು ಪಪಂಗೆ ಮನವಿ ಮಾಡಿಕೊಳ್ಳುತ್ತಿರುವುದು ವ್ಯರ್ಥ ಪ್ರಯತ್ನವಾಗಿದೆ ಎಂದು ಇಲ್ಲಿನ ರಸ್ತೆ ಬದಿಯ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಇದು ಒಂದು ದಿನದ ಗೋಳಲ್ಲ. ಕಳೆದ ಹಲವಾರು ತಿಂಗಳುಗಳ ವ್ಯಥೆ. ಇಲ್ಲಿನ ಓಣಿಯ ಸುತ್ತಮುತ್ತಲಿನ ಸಾರ್ವಜನಿಕರು ಈ ರಸ್ತೆ ಸ್ಥಳವನ್ನು ಅಕ್ಷರಶ ಕಸದ ತೊಟ್ಟಿಯನ್ನಾಗಿಸಿಕೊಂಡಿದ್ದಾರೆ.  ಮನೆಯಲ್ಲಿನ ಕಸ, ಮುಸುರಿ ಯಾರ ಭಯವೂ ಇಲ್ಲದೆ ರಸ್ತೆಗೆ ಎಸೆಯುತ್ತಿರುವುದರಿಂದ ಈ ಪ್ರದೇಶದಲ್ಲಿ ಸುತ್ತಾಡುವುದು ಅಸಹ್ಯವಾಗಿದೆ. ಸಾರ್ವಜನಿಕರು ರಸ್ತೆಯ ಮೇಲೆ ಕಸ-ಮುಸುರಿ ಹಾಕುವುದನ್ನು ನಿಲ್ಲಿಸುವಂತೆ ಪಪಂ ಕಟ್ಟುನಿಟ್ಟಿನ ಸೂಚನೆ ನೀಡುತ್ತಿಲ್ಲ.

ಸ್ವತಾ ಕಾರ್ಯವನ್ನಾದರೂ ಕೈಗೊಳ್ಳುತ್ತಿಲ್ಲ ಅಥವಾ ಕಸದ ತೊಟ್ಟಿ ಇಡುವಲ್ಲಿಯೂ ಕೂಡಾ ಮುತುವರ್ಜಿ ವಹಿಸುತ್ತಿಲ್ಲ. ಇಲ್ಲಿನ ಸುತ್ತಮುತ್ತಲಿನ ಅಂಗಡಿ ವ್ಯಾಪಾರಸ್ಥರು ಸಾಂಕ್ರಾಮಿಕ ರೋಗ ಭೀತಿಯಿಂದ ನರಳುವಂತಾಗಿದೆ. ಈ ಕುರಿತು ಪಪಂ ಸಿಬ್ಬಂದಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಗಮನಹರಿಸುತ್ತಿಲ್ಲ. ಇಲ್ಲಿ ಅಶುಚಿತ್ವವಾಗದಂತೆ ಜಾಗೃತಿ ವಹಿಸುವಂತೆ ಸ್ಥಳೀಯರ ಆಗ್ರಹವಾಗಿದೆ.

ಸ್ಥಳಿಯರೆ ಗಲೀಜು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ನಾಳೆಯಿಂದ ಆ ಸ್ಥಳದಲ್ಲಿ ಬೆಳಗ್ಗೆ ಕಸದ ವಾಹನ ನಿಲ್ಲಿಸುವ ವ್ಯವಸ್ಥೆ ಮಾಡುವುದರ ಜತೆಗೆ, ಯಾರೂ ಕಸ-ಮುಸುರಿ ಹಾಕದಂತೆ ಎಚ್ಚರಿಕೆ ನೀಡಲಾಗುವುದು. ಉಲ್ಲಂಘಿಸಿದರೆ ದಂಡ ವಿಧಿಸಲು ಕ್ರಮ ಕೈಗೊಳ್ಳುವೆ. ದೇವೀಂದ್ರ ಧನಪಾಲ, ಮುಖ್ಯಾಧಿಕಾರಿಗಳು, ಪಪಂ ಬೀಳಗಿ

Advertisement

Udayavani is now on Telegram. Click here to join our channel and stay updated with the latest news.

Next