ಹುಳಿಯಾರು: ಖಾಸಗಿ ಜಮೀನಿನಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದ್ದು, ರೈತ ಹಿಗ್ಗಾಮುಗ್ಗಾ ತರಾಟೆತೆಗೆದುಕೊಂಡ ನಂತರ ಸುರಿದ ತ್ಯಾಜ್ಯವನ್ನು ಪುನಃತುಂಬಿಕೊಂಡು ಹೋದ ಘಟನೆ ಹುಳಿಯಾರು ಸಮೀಪದ ತಮ್ಮಡಿಹಳ್ಳಿ ರಸ್ತೆಯಲ್ಲಿ ಸೋಮವಾರ ನಡೆದಿದೆ.
ಎಲ್ಲೆಂದರಲ್ಲಿ ಸುರಿಯುತ್ತಾರೆ: ಹುಳಿಯಾರು ಪಟ್ಟಣಪಂಚಾಯ್ತಿ ವ್ಯಾಪ್ತಿಯಲ್ಲಿ ಸಂಗ್ರಹವಾದ ತ್ಯಾಜ್ಯವನ್ನುವಿಲೇವಾರಿ ಮಾಡಲು ಕೆಂಕೆರೆಯ ಪುರದಮಠದ ಬಳಿಸ್ಥಳ ಗುರುತಿಸಲಾಗಿದೆ. ಆದರೆ ಸದರಿ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾಗದ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುತ್ತಿದ್ದಾರೆ.
ಟ್ರ್ಯಾಕ್ಟರ್ ಬಿಡುವುದಿಲ್ಲ ಎಂದು ಪಟ್ಟು: ಈ ಬಗ್ಗೆ ಅನೇಕ ದೂರುಗಳು ಕೇಳಿಬಂದರೂ ಕ್ರಮ ಕೈಗೊಳ್ಳದಹಿನ್ನೆಲೆಯಲ್ಲಿ ಖಾಸಗಿ ಜಮೀನು, ಸರ್ಕಾರಿ ಜಾಗ, ರಸ್ತೆಬದಿಯಲ್ಲಿ ತ್ಯಾಜ್ಯ ಸುರಿದು ಕೈ ತೊಳೆದುಕೊಳ್ಳುತ್ತಿದ್ದಾರೆ.ಹೀಗೆ ಸೋಮವಾರವೂ ಸಹ ವೈ.ಎಸ್.ಪಾಳ್ಯದಿಂದತಮ್ಮಡಿಹಳ್ಳಿಗೆ ಹೋಗುವ ರಸ್ತೆಯ ಪಕ್ಕದಲ್ಲಿರುವಬರದಲೇಪಾಳ್ಯದ ಉಮೇಶ್ ಎಂಬುವವರ ಜಮೀನಿಗೆ ತ್ಯಾಜ್ಯ ಸುರಿದಿದ್ದಾರೆ.
ಎಂದಿನಂತೆ ಹುಳಿಯಾರು ಕಡೆಯಿಂದ ಬರುವಾಗಇದನ್ನು ಗಮಿಸಿದ ಜಮೀನು ಮಾಲೀಕ ಉಮೇಶ್,ಪೌರಕಾರ್ಮಿಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದೆಕೊಂಡಿದ್ದಾರೆ. ಸುರಿದ ತ್ಯಾಜ್ಯ ಪುನಃ ತುಂಬಿಕೊಂಡುಹೋಗದಿದ್ದರೆ ಟ್ರ್ಯಾಕ್ಟರ್ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ವಿಲೇವಾರಿ ಸ್ಥಳದ ಬಗ್ಗೆ ಮಾಹಿತಿ ಇಲ್ಲ: ಅಂತಿಮವಾಗಿ ವಿಧಿಯಿಲ್ಲದೆ ಸುರಿದ ಒಂದು ಟ್ರ್ಯಾಕ್ಟರ್ ಲೋಡ್ ತ್ಯಾಜ್ಯವನ್ನು ಇಬ್ಬರೇ ಪೌರಕಾರ್ಮಿಕರು ಒಂದೆರಡುಗಂಟೆ ಪುನಃ ಲೋಡ್ ಮಾಡಿಕೊಂಡು ಉಮೇಶ್‌ಜಮೀನಿನಿಂದ ತೆರಳಿದ್ದಾರೆ. ಆದರೆ, ಮತ್ತೆ ಈತ್ಯಾಜ್ಯವನ್ನು ಎಲ್ಲಿ ಸುರಿದಿದ್ದಾರೆ ಎಂಬುದುತಿಳಿಯದಾಗಿದೆ. ಅಧಿಕಾರಿಗಳೂ ಸಹ ತ್ಯಾಜ್ಯವಿಲೇವಾರಿ ಮಾಡುತ್ತಿರುವ ಸ್ಥಳದ ಬಗ್ಗೆ ನಿಖರ ಮಾಹಿತಿ ತಿಳಿಸುತ್ತಿಲ್ಲ.