Advertisement

ವಿವಿ ಕ್ಯಾಂಪಸ್‌ನಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ

10:42 AM Mar 14, 2021 | Team Udayavani |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ ಮೂಲಕ ಹಾದು ಹೋಗುವ ವೃಷಭಾವತಿ ನದಿಯ ನೀರನ್ನು ಶುದ್ಧೀಕರಿಸಲು 12 ಎಕರೆ ಜಾಗದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣವಾಗಲಿದೆ.

Advertisement

ವಿವಿಯ ಕ್ಯಾಂಪಸ್‌ ಒಳಗೆ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಜಲ ಮಂಡಳಿಯಿಂದ ಸರ್ಕಾರದ ಮೂಲಕ ಬೆಂವಿವಿಗೆಜಮೀನು ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಅದರಂತೆ ಬೆಂವಿವಿ ಸಿಂಡಿಕೇಟ್‌ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಸರ್ಕಾರದ ನಿಯಮಾನುಸಾರವೇ ಜಮೀನನ್ನು ಗುತ್ತಿಗೆ (ಲೀಸ್‌) ಆಧಾರದಲ್ಲಿ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಬೆಂವಿವಿ ಕ್ಯಾಂಪಸ್‌ ಮೂಲಕ ಹಾದು ಹೋಗುವ ವೃಷಭಾವತಿ ನದಿಯು ಸಂಪೂರ್ಣ ಕಲುಷಿತವಾಗಿದೆ.

ರಾಷ್ಟ್ರೀಯ ಕಾನೂನು ಶಾಲೆ ಮೂಲಕ ಬೆಂವಿವಿ ಕ್ಯಾಂಪಸ್‌ಗೆ ಪ್ರವೇಶಿಸುವಾಗ ಕೊಳಚೆ ನೀರಿನವಾಸನೆಯ ಅನುಭವ ತಿಳಿಯುತ್ತದೆ. ಕೊಳಚೆ ನೀರನ್ನುಸಂಸ್ಕರಿಸಿ, ವಿಶ್ವವಿದ್ಯಾಲಯದ ವಿವಿಧ ವಿಭಾಗ, ಹಾಸೆ rಲ್‌ ಹಾಗೂ ಆಡಳಿತ ಕಚೇರಿಗೆ ಸರಬರಾಜು ಮಾಡಲಾಗುತ್ತದೆ. ಕುಡಿಯಲು ಈ ನೀರನ್ನು ಬಳಸಲು ಸಾಧ್ಯವಿಲ್ಲ.ಬೇರೆಲ್ಲ ಉದ್ದೇಶಕ್ಕೂ ಬಳಸಬಹುದಾಗಿದೆ. ಸುಮಾರು60 ದಶಲಕ್ಷ ಲೀಟರ್‌ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣ ಘಟಕ ಸ್ಥಾಪನೆಗೆ 12 ಎಕರೆ ಜಮೀನು ಕೋರಿದ್ದೇವೆಎಂದು ಜಲಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಜಲಮಂಡಳಿಯಿಂದ ಬಂದಿರುವ ಪ್ರಸ್ತಾವನೆ ಯನ್ನು ಸಿಂಡಿಕೇಟ್‌ ಮುಂದಿಟ್ಟಿದ್ದೇವೆ. ಸಿಂಡಿಕೇಟ್‌ ಕೂಡ ಇದನ್ನು ಒಪ್ಪಿಗೆ ನೀಡಿದ್ದೇವೆ. ಜಮೀನನ್ನು 30 ವರ್ಷಕ್ಕೆ ಗುತ್ತಿಗೆಗೆ ನೀಡಲಾಗುತ್ತದೆ. ಗುತ್ತಿಗೆ ಹಣ ಎಷ್ಟು ಎಂಬುದನ್ನು ಸರ್ಕಾರವೇ ನಿಗದಿಮಾಡಲಿದೆ. ಸರ್ಕಾರದ ನಿಯಮಾನುಸಾರವಾಗಿಯೇ ಜಮೀನು ನೀಡುವ ಪ್ರಕ್ರಿಯೆ ನಡೆಯಲಿದೆ ಎಂದು ವಿವಿಯ ಅಧಿಕಾರಿಯೊಬ್ಬರು ವಿವರಿಸಿದರು.

Advertisement

ವಿವಿಯಿಂದ ಜಾಗ ಪಡೆದವರು: ಬೆಂಗಳೂರು ವಿಶ್ವ ವಿದ್ಯಾಲಯ ಕ್ಯಾಂಪಸ್‌ ವಿಶಾಲವಾಗಿದ್ದು, ಈಗಾಗಲೇಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸಂಸ್ಥೆಗಳಕಚೇರಿಗೂ ಇಲ್ಲಿ ಜಾಗ ನೀಡಲಾಗಿದೆ. ನ್ಯಾಕ್‌,ರಾಷ್ಟ್ರೀಯ ಕಾನೂನು ಶಾಲೆ, ಕಲಾಗ್ರಾಮ, ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕಾನಾಮಿಕ್ಸ್‌, ಭಾರತೀಯ ಕ್ರೀಡಾಪ್ರಾಧಿಕಾರ ಮೊದಲಾದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳುಜಮೀನು ಪಡೆದಿವೆ. ಇವುಗಳ ಜತೆಯಲ್ಲೇ ಸಿಬಿಎಸ್‌ ಇಗೆ 1 ಎಕರೆ, ಕೌನ್ಸಿಲ್‌ ಆಫ್ ಆರ್ಕಿಟೆಕ್ಟರ್‌ಗೆ ಸೆಂಟರ್‌ ಆಫ್ ಎಕ್ಸಲೆನ್ಸ್‌ ಇನ್‌ ಆರ್ಕಿಟೆಕ cರ್‌ ಸ್ಥಾಪಿಸಲು 2 ಎಕರೆ,ಗುಲ್ಬರ್ಗ ಕೇಂದ್ರ ವಿಶ್ವವಿದ್ಯಾಲಯಕ 1 ೆR 0 ಎಕರೆ ನೀಡಲಾಗಿದ್ದು, ಇದರಲ್ಲಿ ಇಸ್ರೋ, ಡಿಆರ್‌ಡಿಒ, ಗುಲ್ಬರ್ಗ ವಿವಿ ಹಾಗೂ ಬೆಂಗಳೂರು ವಿವಿ ಜಂಟಿಯಾಗಿ ಏರೋಸ್ಪೇಸ್‌ ಮತ್ತು ಸ್ಪೇಸ್‌ ತಂತ್ರಜ್ಞಾನದ ಕುರಿತುಸಂಶೋಧನೆ ನಡೆಸಲಿವೆ. ಯುಜಿಸಿಯೋಗ ಕೇಂದ್ರಕ್ಕೆ15 ಎಕರೆ, ನ್ಯಾಕ್‌ಗೆ 5 ಎಕರೆ ನೀಡಲು ಸಿಂಡಿಕೇಟ್‌ ಒಪ್ಪಿಗೆ ಸೂಚಿಸಿದೆ. ಸರ್ಕಾರದಿಂದ ಲೀಸ್‌ಗೆ ಜಮೀನು ಪಡೆದ ಎಲ್ಲ ಸಂಸ್ಥೆಗಳು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೇ ಆಗಿವೆ ಎಂದು ಬೆಂವಿವಿ ಮೂಲಗಳು ತಿಳಿಸಿವೆ.

ಸರ್ಕಾರದ ಸೂಚನೆಯಂತೆ ಜಲಮಂಡಳಿಗೆ ಜಮೀನು ನೀಡಲು ಸಿಂಡಿಕೇಟ್‌ನಲ್ಲಿ ತೀರ್ಮಾನ ಮಾಡಿದ್ದೇವೆ. ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪನೆಯಾದ ನಂತರ ಸಂಸ್ಕರಿಸಿದ ನೀರು ವಿವಿಯ ಬಳಕೆಗೆ ಸಿಗಲಿದೆ. ಕುಡಿಯುವುದಕ್ಕೆ ಹೊರತುಪಡಿಸಿ ಬೇರೆ ಎಲ್ಲ ರೀತಿಯಲ್ಲೂ ಈ ನೀರಿನ ಬಳಕೆ ಮಾಡಲಾಗುವುದು.

ಪ್ರೊ.ಕೆ.ಆರ್‌.ವೇಣುಗೋಪಾಲ್‌, ಕುಲಪತಿ ಬೆಂವಿವಿ

ತ್ಯಾಜ್ಯ ನೀರು ಸಂಸ್ಕರಣಾ ಘಟಕಸ್ಥಾಪಿಸಲು ಜಮೀನು ಹಂಚಿಕೆಮಾಡುವ ಸಂಬಂಧ ವಿಶ್ವವಿದ್ಯಾಲಯದೊಂದಿಗೆ ಮಾತುಕತೆ ನಡೆಯುತ್ತಿದ್ದು, ಜಮೀನುಮಂಜೂರಾದರೆ 12 ಎಕರೆ ಜಾಗದಲ್ಲಿ ತ್ಯಾಜ್ಯನೀರು ಸಂಸ್ಕರಣ ಘಟಕ ನಿರ್ಮಾಣಮಾಡಲಾಗುತ್ತದೆ. 60 ದಶಲಕ್ಷ ಲೀಟರ್‌ ಸಾಮರ್ಥ್ಯ ಘಟಕ ನಿರ್ಮಾಣವಾಗಲಿದೆ. ಗಂಗಾಧರ್‌, ಮುಖ್ಯ ಎಂಜಿನಿಯರ್‌,ತ್ಯಾಜ್ಯ ನೀರು ಸಂಸ್ಕರಣ ಘಟಕ, ಜಲಮಂಡಳಿ

 

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next