ಚಿಕ್ಕೋಡಿ: ತಾಲೂಕಿನ ಸದಲಗಾ ಪಟ್ಟಣದಲ್ಲಿ ನಿರ್ಮಾಣವಾದ ತ್ಯಾಜ್ಯ ನೀರು ಸಂಗ್ರಹಣಾಘಟಕ ಸೋರಿಕೆಯಿಂದ ಅಪಾರ ಪ್ರಮಾಣದತ್ಯಾಜ್ಯ ನೀರು ದೂಧಗಂಗಾ ನದಿಗೆ ಸೇರಿದೆ. ಇದರಿಂದ ಗಡಿ ಭಾಗದ ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.
2018ರಲ್ಲಿ ಸದಲಗಾ ಪಟ್ಟಣದಲ್ಲಿ ತ್ಯಾಜ್ಯ ನೀರು ಸಂಗ್ರಹ ಘಟಕ ನಿರ್ಮಿಸಲಾಗಿತ್ತು.ಕಾಮಗಾರಿ ಮುಗಿದು ಮೂರೇ ವರ್ಷದಲ್ಲಿತ್ಯಾಜ್ಯ ನೀರು ಸಂಗ್ರಹ ಘಟಕದ ಟ್ಯಾಂಕ್‌ಸೋರಿಕೆಯಾಗುತ್ತಿದೆ. ಕಳಪೆ ಕಾಮಗಾರಿನಡೆದಿದೆ ಎಂಬುದು ಪಟ್ಟಣದ ನಾಗರಿಕರ ಆರೋಪವಾಗಿದೆ. ಶನಿವಾರ ರಾತ್ರಿ ತ್ಯಾಜ್ಯನೀರಿನ ಘಟಕ ಸೋರಿಕೆಯಾಗಿ ಲಕ್ಷಾಂತರ ಲೀಟರ್ ತ್ಯಾಜ್ಯ ನೀರು ನದಿ ಸೇರಿದೆ.
ದೂಧಗಂಗಾ ನದಿ ವ್ಯಾಪ್ತಿಯಲ್ಲಿ ಸದಲಗಾ, ಮಲಿಕವಾಡ, ಯಕ್ಸಂಬಾ ಮತ್ತು ಕಲ್ಲೋಳಹಾಗೂ ನೆರೆಯ ಮಹಾರಾಷ್ಟ್ರದ ಅನೇಕ ಹಳ್ಳಿಗಳು ಬರುತ್ತವೆ. ಈಗಾಗಲೇ ತ್ಯಾಜ್ಯನೀರು ನದಿ ಸೇರಿರುವುದರಿಂದ ನದಿ ನೀರುಕಲುಷಿತಗೊಂಡಿದೆ. ನದಿ ನೀರನ್ನು ಮೂರು ದಿನ ಬಳಕೆ ಮಾಡದಂತೆ ನದಿ ತೀರದ ಗ್ರಾಮಗಳಲ್ಲಿ ಅಧಿಕಾರಿಗಳು ಡಂಗೂರ ಸಾರುತ್ತಿದ್ದಾರೆ.
ಗಡಿ ಭಾಗದಲ್ಲಿ ಕೋವಿಡ್ ಹೊಡೆತದಿಂದ ಮೊದಲೆ ಜನ ಸಂಕಷ್ಟ ಎದುರಿಸುತ್ತಿದ್ದಾರೆ.ಇಂತಹ ಕಠಿಣ ಪರಿಸ್ಥಿಯಲ್ಲಿ ತ್ಯಾಜ್ಯ ನೀರಿನ ಘಟಕ ಸೋರಿಕೆಯಿಂದ ಅಪಾರ ಪ್ರಮಾಣದ ತ್ಯಾಜ್ಯ ನೀರು ನದಿಗೆ ಹೋಗಿರುವುದು ನದಿ ತೀರದ ಗ್ರಾಮಸ್ಥರ ಆಕ್ರೋಶ ಹೆಚ್ಚಿಸಿದೆ. ನೆತ್ತಿಸುಡುವ ಬಿಸಿಲಿನ ಝಳಕ್ಕೆ ಜನ ಕಂಗೆಟ್ಟುಹೋಗಿದ್ದಾರೆ. ದನಕರುಗಳಿಗೆ ಕುಡಿಯಲುನದಿ ನೀರು ಬಳಕೆ ಮಾಡುವ ನದಿ ತೀರದಗ್ರಾಮಸ್ಥರಿಗೆ ಇದು ಈಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನದಿಯಲ್ಲಿನ ಜಲಚರಗಳಿಗೂ ಅಪಾಯ ತಪ್ಪಿದ್ದಲ್ಲ.
ನಿರ್ಲಕ್ಷ ತೋರಿದ ಅಧಿಕಾರಿ ಹಾಗೂ ಗುತ್ತಿಗೆದಾರ ಮೇಲೆ ಕ್ರಮವಾಗಲಿ: ಪದೇ ಪದೇ ತ್ಯಾಜ್ಯ ನೀರು ಸೋರಿಕೆಯಾಗಿ ಹಳ್ಳದಮೂಲಕ ನದಿ ಸೇರುತ್ತದೆ. ಅಕ್ಕಪಕ್ಕದ ರೈತರಜಾನುವಾರಗಳ ಆರೋಗ್ಯದ ಮೇಲೆ ಪರಿಣಾಮಬಿರುತ್ತದೆ. ಈಗ ಅಪಾರ ಪ್ರಮಾಣದ ನೀರುಸೋರಿಕೆಯಾಗಿ ನದಿ ನೀರು ಮಲಿನವಾಗಿದೆ.ಈ ಘಟನೆಗೆ ನಿರ್ಲಕ್ಷ ತೋರಿದ ಅ ಧಿಕಾರಿಗಳುಮತ್ತು ಗುತ್ತಿಗೆದಾರರ ಮೇಲೆ ಕ್ರಮಜರುಗಿಸಬೇಕು ಎಂದು ಸದಲಗಾ ಪಟ್ಟಣದ ನಾಗರಿಕರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಸಂಗ್ರಹಣಾಘಟಕದ ತ್ಯಾಜ್ಯ ನೀರು ಸೋರಿಕೆಯಾಗಿದೆಎಂಬ ವಿಷಯ ತಿಳಿದ ಒಳಚರಂಡಿ ಮತ್ತು ನೀರು ಸರಬರಾಜು ಇಲಾಖೆ ಅಧಿಕಾರಿಗಳು ತಕ್ಷಣ ಸದಲಗಾ ಪಟ್ಟಣದ ಯುಜಿಡಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಅಧಿಕಾರಿಗಳು ಸದಲಗಾ ನಾಗರಿಕರ ಮಧ್ಯೆ ಮಾತಿನ ಚಕಮಕಿ ಕೂಡಾ ನಡೆಯಿತು.
ಕಳೆದ 2019ರಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ತ್ಯಾಜ್ಯ ನೀರಿನ ಘಟಕಕ್ಕೆ ಹಾನಿಯುಂಟಾಗಿದೆ. ಫೌಂಡೇಶನ್‌ದಲ್ಲಿ ಹಾನಿಯಾಗಿದ್ದರಿಂದ ತ್ಯಾಜ್ಯ ನೀರು ಹೊರಗಡೆ ಹೋಗಿದೆ. ಎರಡು ಅಥವಾ ಮೂರು ದಿನ ನದಿ ನೀರು ಸೇವಿಸಬಾರದೆಂದು ನದಿ ತೀರದ ಗ್ರಾಮಸ್ಥರಿಗೆ ಮನವಿ ಮಾಡಲಾಗುತ್ತಿದೆ. ಉಮೇಶ, ಎಇಇ, ನೀರು ಸರಬರಾಜು ಹಾಗೂ ಒಳಚರಂಡಿ ಚಿಕ್ಕೋಡಿ ವಿಭಾಗ. ತ್ಯಾಜ್ಯ ನೀರಿನ ಘಟಕ ಸೋರಿಕೆಯಾಗಿದೆ ಎಂಬ ವಿಷಯ ಗಮನಕ್ಕೆ ಬಂದಿದೆ. ತಕ್ಷಣ ಪರಿಶೀಲಿಸಿ ವರದಿ ನೀಡುವಂತೆ ಪುರಸಭೆ ಮುಖ್ಯಾ ಧಿಕಾರಿಗೆ ಸೂಚನೆ ನೀಡಲಾಗಿದೆ. –
ಪ್ರವೀಣ ಜೈನ್, ತಹಶೀಲ್ದಾರ್, ಚಿಕ್ಕೋಡಿ.