Advertisement
ಇದೇ ರೀತಿಯ ಸಮಸ್ಯೆ ಬೆಂಗಳೂರು ನಗರದಲ್ಲೂ ಕಾಡುತ್ತಿದೆ. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರೂಪಿಸಿರುವ ವಿಧಾನ ಎಂದರೆ ಕೆರೆಗಳಲ್ಲಿ ತ್ಯಾಜ್ಯನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಸ್ಥಾಪಿಸುವುದು. ಈಗಾಗಲೇ ಕೆಲವು ಕೆರೆಗಳಲ್ಲಿ ಎಸ್‌ಟಿಪಿಗಳನ್ನು ಸ್ಥಾಪಿಸಲಾಗಿದೆ. ಇದೇ ಮಾದರಿಯನ್ನು ಮಂಗಳೂರಿನಲ್ಲೂ ಮಹಾನಗರ ಪಾಲಿಕೆ ಅನುಸರಿಸಿದರೆ ಪ್ರಸ್ತುತ ಉಳಿದುಕೊಂಡಿರುವ ಆದರೆ ತ್ಯಾಜ್ಯ, ಕೊಳಚೆ ನೀರಿನಿಂದ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುÊಆ ಕೆರೆಗಳನ್ನು ಉಳಿಸಬಹುದು.
Related Articles
ಖಾಸಗಿ ಸಹಭಾಗಿತ್ವ
ಬೆಂಗಳೂರಿನ ಕೆರೆಗಳಲ್ಲಿ ಎಸ್‌ಟಿಪಿ ಘಟಕ ಸ್ಥಾಪಿಸಲು ಖಾಸಗಿ ಸಂಸ್ಥೆಗಳು ಸಹಭಾಗಿತ್ವ ನೀಡುತ್ತಿವೆ. ಮಹಾದೇವ ಪುರ ಕೆರೆಯಲ್ಲಿ ದಿನಕ್ಕೆ ಒಂದು ದಶಲಕ್ಷ ಲೀಟರ್‌ಗಳಷ್ಟು ಕೊಳಚೆ ನೀರು ಸಂಸ್ಕರಿಸುವ ಪರಿಸರಸ್ನೇಹಿ ಘಟಕವನ್ನು ಈಗಾಗಲೇ ಲೋಕಾರ್ಪಣೆ ಮಾಡಲಾಗಿದೆ. ಯುನೈಟೆಡ್ ವೇ ಬೆಂಗಳೂರು, ಬಿಬಿಎಂಪಿ ಮತ್ತು ಸಿಟಿಜನ್ ಗ್ರೂಪ್ ಪಾಲುದಾರಿಕೆಯಲ್ಲಿ ಈ ಎಸ್‌ಟಿಪಿ ಘಟಕವನ್ನು ಸ್ಥಾಪಿಸಲಾಗಿದೆ. ಕೆಲವು ಕಾರ್ಪೊರೇಟ್ ಕಂಪೆನಿಗಳು ಇದಕ್ಕೆ ಸಹಕಾರ ನೀಡಿವೆ. ಈ ಘಟಕ ಶುದ್ಧೀಕರಣ ರಾಸಾಯಿನಿಕ ಮುಕ್ತವಾದ ಪ್ರಕ್ರಿಯೆಯನ್ನು ಒಳಗೊಂಡಿದ್ದು ಅತಿ ಕಡಿಮೆ ವಿದ್ಯುತ್‌ನಲ್ಲಿ ತ್ಯಾಜ್ಯ ನೀರು ಸಂಸ್ಕರಿಸಲಾಗುತ್ತಿದೆ. ಬೆಂಗಳೂರು ಮೂಲದ ಕನ್ಸೋರ್ಟಿಯಮ್ ಫಾರ್ ಡಿವ್ಯಾಟ್ಸ್ ಡಿಸ್ಸೆಮೀನೇಷನ್ ಸೊಸೈಟಿ ಈ ಶುದ್ಧೀಕರಣ ಘಟಕದ ವಿನ್ಯಾಸ ಮತ್ತು ಅನುಷ್ಠಾನಕ್ಕೆ ತಾಂತ್ರಿಕ ಪರಿಣತಿಯನ್ನು ನೀಡಿದೆ.
Advertisement
ಮಂಗಳೂರು ನಗರದಲ್ಲಿ ಪ್ರಮುಖ ಕೆರೆಗಳಾದ ಗುಜ್ಜರಕೆರೆ, ಕಾವೂರು ಕೆರೆ, ಮೈರಾಡಿ ಕೆರೆ, ಬಗ್ಗುಂಡಿ ಕೆರೆ ಮಲೀನ, ತ್ಯಾಜ್ಯ ನೀರು ಸಮಸ್ಯೆ ಎದುರಿಸುತ್ತಿದೆ. ಕಾಯಕಲ್ಪ ನೀಡಿ ಸಂರಕ್ಷಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದರೂ ಯಶಸ್ಸು ಲಭಿಸಿಲ್ಲ. ಒಂದಷ್ಟು ಕೆಲಸ ನಡೆದರೂ ಮರು ವರ್ಷ ಕೆರೆ ತನ್ನ ಹಿಂದಿನ ಸ್ವರೂಪಕ್ಕೆ ಮರಳುತ್ತದೆ. ಇದಕ್ಕೆ ಮೂಲ ಕಾರಣ ಕೊಳಚೆ ಹಾಗೂ ತ್ಯಾಜ್ಯ ನೀರು ಕೆರೆಗಳನ್ನು ಸೇರುತ್ತಿರುವುದು. ಅದುದರಿಂದ ಬೆಂಗಳೂರು ಮಾದರಿಯಲ್ಲಿ ಮಂಗಳೂರಿನಲ್ಲೂ ಕೆರೆಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಅಳವಡಿಸಿ ಮಲೀನ ನೀರು ಸೇರದಂತೆ ತಡೆಯವ ಕಾರ್ಯ ಅವಶ್ಯವಿದೆ. ಮಂಗಳೂರಿನಲ್ಲಿ ಪರಿಸರಾಸಕ್ತ ನಾಗರಿಕರು ಒಟ್ಟು ಸೇರಿ ರಚಿಸಿಕೊಂಡಿರುವ ಕೆಲವು ಕೆರೆ ಸಂರಕ್ಷಣಾ ಸಮಿತಿಗಳು ಕೆರೆಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಶ್ರಮಿಸುತ್ತಿವೆ. ಅವುಗಳ ಸಹಕಾರವನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕೆ ಆರ್ಥಿಕ ಸಂಪನ್ಮೂಲವನ್ನು ಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಸಹಭಾಗಿತ್ವವನ್ನು ಪಡೆದು ಎಸ್‌ಟಿಪಿಗಳನ್ನು ಅಳವಡಿಸಬಹುದಾಗಿದೆ.
– ಕೇಶವ ಕುಂದರ್