Advertisement
ನಗರದಲ್ಲಿ ಶುಕ್ರವಾರ ಮಾತ್ರ ಒಣ ಕಸ ಸಂಗ್ರಹ ಮಾಡಲಾಗುತ್ತಿದೆ. ಕಳೆದ ಶುಕ್ರವಾರ ಒಟ್ಟು 330 ಟನ್ ಒಣಕಸ ಸಂಗ್ರಹವಾಗಿದೆ. ಒಣಕಸ ಪ್ರತ್ಯೇಕವಾಗಿ ಸಂಗ್ರಹ ಮಾಡಿದ ಪರಿಣಾಮ ಸದ್ಯ ಪ್ರತೀ ದಿನ ಹಸಿ ಕಸ ಪ್ರಮಾಣ 220 ಟನ್‌ಗಳಿಗೆ (ಹಿಂದೆ ಸುಮಾರು 300 ಟನ್) ಇಳಿದಿದೆ.
Related Articles
ಪಚ್ಚನಾಡಿ ಡಂಪಿಂಗ್ ಯಾರ್ಡ್ ಪ್ರದೇಶಗಳಿಗೆ ನಗರ ಹೊರತುಪಡಿಸಿ ಇತರ ಭಾಗಗಳಿಂದ ತ್ಯಾಜ್ಯ ಕಳುಹಿಸುವ ಸ್ಥಳೀಯ ಸಂಸ್ಥೆಗಳು ತ್ಯಾಜ್ಯ ವಿಂಗಡಣೆ ಮಾಡಿ ನೀಡುವಂತೆ ಪಾಲಿಕೆಯಿಂದ ನೋಟಿಸ್ ನೀಡಲಾಗಿದೆ. ಅಪಾರ್ಟ್ ಮೆಂಟ್, ಬೃಹತ್ ತ್ಯಾಜ್ಯ ಉತ್ಪಾದಕರು, ಮಾಲ್, ಉದ್ದಿಮೆದಾರರು ಸ್ವಂತ ತ್ಯಾಜ್ಯ ಸಂಸ್ಕರಣೆ ಕಾಂಪೋ ಸ್ಟಿಂಗ್ ಘಟಕವನ್ನು ಕಡ್ಡಾಯವಾಗಿ ನಿರ್ಮಿಸುವಂತೆ, ಉತ್ಪಾದನೆಯಾಗುವ ತ್ಯಾಜ್ಯವನ್ನು ಸ್ಥಳ ದಲ್ಲಿಯೇ ಸಂಸ್ಕರಣೆ ಮಾಡುವಂತೆ ಸೂಚಿಸಲಾಗಿದೆ. ಕಾಂಪೋಸ್ಟಿಂಗ್ ಘಟಕ ನಿರ್ಮಿಸುವ ತನಕ ತಮ್ಮ ಸಂಸ್ಥೆಯಲ್ಲಿ ದಿನನಿತ್ಯ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿ ಕಸ ಹಾಗೂ ಒಣಕಸವಾಗಿ ವಿಂಗಡಿಸಿ ನೀಡಬೇಕಾಗಿದೆ.
Advertisement
ದಂಡ ಪ್ರಯೋಗ ಜಾರಿಹಸಿ ಕಸ, ಒಣಕಸ ಪ್ರತ್ಯೇಕವಾಗಿ ನೀಡು ವಂತೆ ಪಾಲಿಕೆ ಮಾಡಿದ ಮನವಿಗೆ ಸಾರ್ವ ಜನಿಕರಿಂದ ಉತ್ತಮ ಪ್ರತಿ ಕ್ರಿಯೆ ವ್ಯಕ್ತವಾಗಿದೆ. ತ್ಯಾಜ್ಯ ವಿಂಗ ಡಿಸದಿದ್ದರೆ ಪಾಲಿಕೆಯ ವತಿಯಿಂದ ಕಸ ಸಂಗ್ರಹಣೆಯನ್ನು ಮುಂದಿನ ದಿನಗಳಲ್ಲಿ ಸ್ವೀಕರಿಸುವುದಿಲ್ಲ. ಜತೆಗೆ ಸಂಬಂಧಪಟ್ಟವರಿಂದ ದಂಡ ಸ್ವೀಕರಿಸಲಾಗುವುದು. ತ್ಯಾಜ್ಯ ವಿಂಗಡಣೆ ಮಾಡದವರಿಗೆ, ರಸ್ತೆ ಬದಿಯಲ್ಲಿ ಬಿಸಾ ಡುವವರಿಗೆ 1,000ದಿಂದ 25,000 ರೂ.ವರೆಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು.
-ಅಕ್ಷಯ್ ಶ್ರೀಧರ್, ಆಯುಕ್ತರು, ಮನಪಾ