Advertisement

ತ್ಯಾಜ್ಯ ಸಾಗಾಟ ವಾಹನ ನಿಲುಗಡೆ: ಪರಿಸರ ಮಾಲಿನ್ಯ

09:36 PM Feb 24, 2022 | Team Udayavani |

ಸುರತ್ಕಲ್‌: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸ್ವತ್ಛತ ಕಾರ್ಯಕ್ಕೆ ಗುತ್ತಿಗೆ ಪಡೆದಿರುವ ಆ್ಯಂಟನಿ ವೇಸ್ಟ್‌ ಸಂಸ್ಥೆ ವಾಹನಗಳನ್ನು ಸುರತ್ಕಲ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಸಮೀಪ ಇಲಾಖೆಯ ಆವರಣದೊಳಗೆ ನಿಲ್ಲಿಸಲಾಗುತ್ತಿದೆ. ಇದರಿಂದ ಆ ಪರಿಸರದಲ್ಲಿ ಮಾಲಿನ್ಯ ಸೃಷ್ಟಿಯಾಗುತ್ತಿದ್ದು, ಸಾರ್ವಜನಿಕರು, ಆಸ್ಪತ್ರೆಗೆ ಬರುವವರು ಸಂಕಷ್ಟ ಎದುರಿಸುವಂತಾಗಿದೆ.

Advertisement

ಗುತ್ತಿಗೆ ಪಡೆದ ಸಂಸ್ಥೆ ತನ್ನ ನೂರಾರು ವಾಹನದ ನಿಲುಗಡೆಗೆ ಬೇಕಾದ ಸ್ಥಳವನ್ನು ಹೊಂದಿರಬೇಕೆಂಬ ನಿಯಮವಿದ್ದರೂ ಖಾಲಿ ಸ್ಥಳಾವಕಾಶ ಇರುವಲ್ಲಿ ನಿಲ್ಲಿಸುತ್ತಾ ಬರಲಾಗುತ್ತಿದೆ.

ಸಮೀಪದಲ್ಲಿದೆ ಇಂದಿರಾ ಕ್ಯಾಂಟೀನ್‌  :

ಸುರತ್ಕಲ್‌ ಭಾಗದಲ್ಲಿ ನಿತ್ಯ ಸ್ವತ್ಛತೆ ನಡೆಸಿ ಬಳಿಕ ವಾಹನವನ್ನು ನಿಲ್ಲಿಸಲಾಗುತ್ತದೆ. ಕೆಲವು ಬಾರಿ ತ್ಯಾಜ್ಯವನ್ನು ಹೇರಿಕೊಂಡು ವಾಹನಗಳು ಅಲ್ಲೇ ನಿಂತಿರುತ್ತವೆ. ಸಮೀಪವೇ ಇಂದಿರಾ ಕ್ಯಾಂಟೀನ್‌ ಕಾರ್ಯನಿರ್ವಹಿಸುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಮಕ್ಕಳ ಆರೈಕೆ ಕೇಂದ್ರ, ಗರ್ಭಿಣಿಯರ ತಪಾಸಣೆ, ದಾದಿಯರ ವಸತಿ ಗೃಹ, ತರಬೇತಿ ಕೇಂದ್ರ ಮತ್ತಿತರ ನಿತ್ಯ ಕಾರ್ಯಚಟುವಟಿಕೆ ಹೊಂದಿರುವ ಕೇಂದ್ರಗಳಿವೆ.

ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದ ಒಳಗೆ ಈ ವಾಹನಗಳನ್ನು ಸ್ವತ್ಛ ಮಾಡುವುದರಿಂದ ಅಲ್ಲಲ್ಲಿ ಕಸವು ಬಿದ್ದು ಮಾಲಿನ್ಯ ಉಂಟಾಗುತ್ತಿದೆ.

Advertisement

ಈ ಹಿಂದೆ ಆರೋಗ್ಯ ಕೇಂದ್ರದ ಮುಂಭಾಗ ವಾಹನ ನಿಲ್ಲಿಸದಂತೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಮತ್ತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಒಳಗಡೆಯೇ ನಿಲ್ಲಿಸುವುದು ಎಷ್ಟು ಸಮಂಜಸ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಚರ್ಚಿಸಿ ಸೂಕ್ತ ಕ್ರಮ :

ಈ ಹಿಂದೆ ಬಂಗ್ರಕೂಳೂರು ಬಳಿ ಬಾಡಿಗೆ ನೀಡಿ ಸ್ವತ್ಛತ ವಾಹನವನ್ನು ನಿಲ್ಲಿಸಲಾಗುತ್ತಿತ್ತು. ಆದರೆ ಬಳಿಕ ಕೆಲವೊಂದು ಕಾರಣಗಳಿಂದಾಗಿ ನಿಲುಗಡೆಗೆ ವಿವಿಧೆಡೆ ಸ್ಥಳ ನಿಗದಿ ಮಾಡಲಾಗಿತ್ತು. ಸುರತ್ಕಲ್‌ನಲ್ಲಿ ಸ್ವಚ್ಛತ ವಾಹನಗಳು ಆರೋಗ್ಯ ಕೇಂದ್ರದ ವಠಾರದಲ್ಲಿ ನಿಲ್ಲಿಸುವ ಬಗ್ಗೆ ಆಕ್ಷೇಪಗಳು ಇದ್ದಲ್ಲಿ ಮೇಯರ್‌ ಹಾಗೂ ಆಯುಕ್ತರೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಡಾ| ಮಂಜಯ್ಯ ಶೆಟ್ಟಿ, ಆರೋಗ್ಯಾಧಿಕಾರಿಗಳು, ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next