Advertisement

ತ್ಯಾಜ್ಯ ನಿರ್ವಹಣೆ: ದ.ಕ. ಮತ್ತೂಂದು ಮಹತ್ವದ ಹೆಜ್ಜೆ

07:29 PM Jan 06, 2022 | Team Udayavani |

ಮಹಾನಗರ: ತ್ಯಾಜ್ಯ ನಿರ್ವಹಣೆ ಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತೂಂದು ಮಹತ್ವದ ಹೆಜ್ಜೆಯನ್ನಿಟ್ಟಿದ್ದು ರಾಜ್ಯದ 2ನೇ ಎಂಆರ್‌ಎಫ್ (ಮೆಟೀರಿಯಲ್‌ ರಿಕವರಿ ಫೆಸಿಲಿಟಿ- ಸಮಗ್ರ ಘನತ್ಯಾಜ್ಯ ನಿರ್ವಹಣೆ)ಘಟಕ ಶೀಘ್ರ ಮಂಗಳೂರು ತಾಲೂಕಿನ ತೆಂಕ ಎಡಪದವಿನಲ್ಲಿ ಕಾರ್ಯಾರಂಭಗೊಳ್ಳಲಿದೆ.

Advertisement

ಯೋಜನೆ ಮಂಜೂರಾಗಿದ್ದರೂ ಸ್ಥಳದ ಅಲಭ್ಯತೆಯಿಂದಾಗಿ ಘಟಕ ನಿರ್ಮಾಣಕ್ಕೆ ಹಿನ್ನಡೆಯಾಗಿತ್ತು. ಇದೀಗ ತೆಂಕ ಎಡಪದವು ಗ್ರಾಮದಲ್ಲಿ ನಿರ್ಮಾಣ ಆರಂಭಿಸಲಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳದ ನಿಟ್ಟೆಯಲ್ಲಿ ರಾಜ್ಯದ ಮೊದಲ ಎಂಆರ್‌ಎಫ್ ಘಟಕ ಆರಂಭಗೊಂಡ ಬಳಿಕ ದ.ಕ.ದಲ್ಲಿ ನಿರ್ಮಾಣಗೊಳ್ಳುತ್ತಿದೆ. ಒಣ ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಮರು ಉತ್ಪಾದನೆಗೆ ಯೋಗ್ಯವಾಗಿಸುವ ಕೇಂದ್ರ ಇದಾಗಿದೆ. ಗ್ರಾಮೀಣ ಭಾಗದ ಒಣಕಸ ನಿರ್ವಹಣೆ ಇದರಿಂದಾಗಿ ಸುಲಭ, ವ್ಯವಸ್ಥಿತವಾಗಲಿದೆ.

10 ಮೆಟ್ರಿಕ್‌ ಟನ್‌ ಸಾಮರ್ಥ್ಯ
ಎಲ್ಲ ರೀತಿಯ ಒಣಕಸಗಳನ್ನು ಸಂಗ್ರ ಹಿಸಿ ವೈಜ್ಞಾನಿಕವಾಗಿ ವರ್ಗೀಕರಿಸಿ ಬೈಲಿಂಗ್‌ ಮೆಷಿನ್‌, ಶ್ರೆಡ್ಡರ್‌ ಮೆಷಿನ್‌ ಮೊದಲಾದವು ಗಳ ಮೂಲಕ ಸಂಸ್ಕರಿಸಿ ಮರು ಉತ್ಪಾದನೆಗೆ ಸಿದ್ಧಗೊಳಿಸಿ ಮಾರಾಟ ಮಾಡಲಾಗುತ್ತದೆ.

ನಿರ್ಮಾಣ ಆರಂಭ
ಸ್ವತ್ಛ ಭಾರತ್‌ ಮಿಷನ್‌ನಡಿ (ಗ್ರಾಮೀಣ) ತೆಂಕ ಎಡಪದವು ಗ್ರಾಮದಲ್ಲಿ ಎಂಆರ್‌ಎಫ್ ಘಟಕ ನಿರ್ಮಾಣ ಆರಂಭಿಸಲಾಗಿದೆ. ಇದರಲ್ಲಿ ಒಣತ್ಯಾಜ್ಯ ನಿರ್ವಹಣೆ ಹೆಚ್ಚು ವೈಜ್ಞಾನಿಕವಾಗಿ ನಡೆಯಲಿದೆ. 2.50 ಕೋ.ರೂ. ಮಂಜೂರಾಗಿದ್ದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅನುಷ್ಠಾನಗೊಳಿಸುತ್ತಿದೆ.
-ಡಾ| ಕುಮಾರ್‌, ಸಿಇಒ, ದ.ಕ. ಜಿ.ಪಂ.

–  ಸಂತೋಷ್‌ ಬೊಳ್ಳೆಟ್ಟು

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next