Advertisement

ರಾಜಘಟ್ಟ ಕೆರೆಗೆ ಸೇರುತ್ತಿದೆ ತ್ಯಾಜ್ಯ

03:54 PM Sep 14, 2021 | Team Udayavani |

ದೊಡ್ಡಬಳ್ಳಾಪುರ:ತಾಲೂಕಿನರಾಜಘಟ್ಟ ಕೆರೆ ಅಂಗಳದಲ್ಲಿ ವಿವಿಧ ತ್ಯಾಜ್ಯಗಳನ್ನ ತಂದು ಸುರಿಯುವ ಮೂಲಕ ಕಸದ ತೊಟ್ಟಿಯಾಗಿ ಮಾಡಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಅರ್ಕಾವತಿ ನದಿ ಪಾತ್ರದಲ್ಲಿನ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ನಗರಕ್ಕೆ ಸಮೀಪವೇ ಇರುವ ರಾಜಘಟ್ಟ ಕೆರೆ ಅಂಗಳಕ್ಕೆ ಹೋಟೆಲ್‌, ಮಾಂಸದ ಅಂಗಡಿ ಗಳಲ್ಲಿನ ತ್ಯಾಜ್ಯವನ್ನು ರಾತ್ರಿ ವೇಳೆ ತಂದು ಸುರಿಯಲಾಗುತ್ತಿದೆ. ಅದರಲ್ಲೂ ಕೋಳಿ ಅಂಗಡಿಗಳ ತ್ಯಾಜ್ಯವನ್ನು ಚೀಲಗಳಲ್ಲಿ ತುಂಬಿಕೊಂಡು ಬಂದು ರಾಶಿ ಹಾಕಲಾಗುತ್ತಿದೆ.

ಇದರಿಂದ ಕೆರೆ ಸುತ್ತಮುತ್ತಲಿನ ತೋಟ, ಮನೆಗಳಲ್ಲಿ ವಾಸ ಮಾಡುವುದೇ ದುಸ್ತರವಾಗಿದೆ. ಕೋಳಿ ತ್ಯಾಜ್ಯ ತಿನ್ನಲು ನಾಯಿಗಳು ಹಿಂಡು ಹಿಂಡಾಗಿ ಬರುತ್ತಿವೆ. ನಾಯಿಗಳ ಗುಂಪು ಕುರಿ, ಹಸುಗಳ ಮೇಲೆ ದಾಳಿ ನಡೆಸಿ ಕಚ್ಚಿ ಹಾಕುತ್ತಿವೆ.

ಇದನ್ನೂ ಓದಿ:ಯಾದಗಿರಿ ಜಿಲ್ಲೆಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ! ಸೋದರ ಮಾವನಿಂದಲೇ ಕೃತ್ಯ

ಅಧಿಕಾರಿಗಳ ನಿರ್ಲಕ್ಷ್ಯ: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಹಲವಾರು ಕಾರ್ಖಾನೆಗಳು ರಾಸಾಯನಿಕ ಯುಕ್ತ ನೀರನ್ನು ಟ್ಯಾಂಕರ್‌ಗಳಲ್ಲಿ ರಾತ್ರಿ ಸಮಯದಲ್ಲಿ ತಂದು ಬಿಡುತ್ತಿದ್ದಾರೆ. ಇದರಿಂದಕೆರೆಯಲ್ಲಿ ಸಂಗ್ರಹವಾಗಿರುವ ಅಲ್ಪಸ್ವಲ್ಪ ಮಳೆ ನೀರು ಸಹ ಕಲುಷಿತ ವಾಗುತ್ತಿವೆ. ರಾಸಾಯನಿಕಯುಕ್ತ ನೀರು ಬಿಟ್ಟಿರುವ ಸ್ಥಳದಲ್ಲಿ ಹುಲ್ಲು ಸಹ ಬೆಳೆಯದೆ ಸುಟ್ಟು ಹೋಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಎಚ್ಚರ ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next