Advertisement
ತುರ್ತು ಪರಿಸ್ಥಿತಿ: ಕೊಂಚ ಹೆಚ್ಚಿನ ಪ್ರಮಾಣದ ಲ್ಲಿಯೇ ಇತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇದೊಂ ದು ತುರ್ತು ಪರಿಸ್ಥಿತಿಯಂತಿದೆ ಎಂದು ಪ್ರತಿಪಾ ದಿಸಿದೆ. ಪರಿಸ್ಥಿತಿ ನಿಯಂತ್ರಿಸಲು ಯಾವೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡುವಂತೆ ಕೇಂದ್ರ, ಉ.ಪ್ರ. ಪಂಜಾಬ್ ಮತ್ತು ಹರ್ಯಾಣ ಸರಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ಜತೆಗೆ ಪರಿಸರಕ್ಕೆ ಪೂರಕವಾಗಿರುವ ವಿದ್ಯುತ್ ಮತ್ತು ಸೋಲಾರ್ ಶಕ್ತಿ ಆಧಾರಿತ ವಾಹನಗಳ ಬಳಕೆಗೆ ಏಕೆ ಪ್ರೋತ್ಸಾಹ ನೀಡಬಾರದು ಎಂದು ಕೋರ್ಟ್ ಪ್ರಶ್ನಿಸಿದೆ.
Related Articles
ದಿಲ್ಲಿ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ ಯಾಕೆ ಮೌನ ವಹಿಸಿದ್ದಾರೆಂದು ಕಾಲೆಳೆದಿ ರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 1978ರ ಸಿನಿಮ “ಗಮನ್’ನ ಹಾಡಿನ ಸಾಲುಗಳನ್ನು ಟ್ವೀಟ್ ಮಾಡಿದ್ದಾರೆ. “ಎದೆ ಯಲ್ಲಿ ನೋವಿದೆ. ಕಣ್ಣುಗಳಲ್ಲಿ ಬಿರುಗಾಳಿ ಇದೆ. ನಗರದಲ್ಲಿ ಯಾಕೆ ಎಲ್ಲರೂ ತೊಂದರೆಗೀಡಾಗಿದ್ದಾರೆ? ಇದಕೇRನು ಹೇಳುತ್ತೀರಿ ಸಾಹೇಬ್? ಸುಮ್ಮನೇಕೆ ಇದ್ದೀರಿ’ ಎಂದು ಟ್ವೀಟ್ ಮಾಡಿದ್ದಾರೆ.
Advertisement