ದೇವನಹಳ್ಳಿ: ಬೆಂಗಳೂರಿನಿಂದ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಬಿಬಿಎಂಪಿ ಕಸ ಸುರಿಯುತ್ತಿದ್ದರು. ಅದರಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ಸ್ಥಳೀಯರು ಎದುರಿಸುತ್ತಿದ್ದು, ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಹೋರಾಟಗಳನ್ನು ಮಾಡಿದ್ದರು.
ಅದೇ ಮಾದರಿಯಲ್ಲಿ ಅಪರಿಚಿತ ವಾಹನದಲ್ಲಿ ತಾಲೂಕಿನ ಗಡಿ ಪ್ರದೇಶದ ಜಾಲಿಗೆ ಗ್ರಾಪಂ ವ್ಯಾಪ್ತಿಯಲ್ಲಿನ ಬಚ್ಚಹಳ್ಳಿ ರಸ್ತೆ ಮಾರ್ಗದ ಅನುಪಯುಕ್ತ ಬಂಡೆ ಪ್ರದೇಶದ ಗುಂಡಿಗೆ ಅಪರಿ ಚಿತ ವ್ಯಕ್ತಿಗಳು ರಾತ್ರಿ ವೇಳೆಯಲ್ಲಿ ತ್ಯಾಜ್ಯ ಸುರಿಯುತ್ತಿದ್ದು, ಇದರಿಂದ ಸುತ್ತಮುತ್ತಲಿನ ವಾತಾವರಣ ಕಲುಷಿತ ಗೊಂಡು, ದುರ್ವಾಸನೆ ಯಿಂದ ಸ್ಥಳೀಯರು ಬದುಕು ನಡೆಸುವ ಪರಿಸ್ಥಿತಿ ಉಂಟಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಸವನ್ನು ತಂದು ಸುರಿಯುತ್ತಿರುವವರ ವಿರುದ್ಧ ಜನರು ಹೋರಾಟ ನಡೆಸಿದ್ದರು. ಈ ಘಟನೆ ಮಾಸುವ ಮುನ್ನವೇ ಈ ವ್ಯಾಪ್ತಿಯಲ್ಲಿ ಕಸ ಹಾಕುತ್ತಿದ್ದಾರೆ. ಗ್ರಾಪಂ ಅಭಿವೃದ್ಧಿ ಅಧಿಕಾರಿ ಆಗಲಿ, ಜನಪ್ರತಿನಿಧಿಗಳಾಗಲೀ ಇತ್ತ ಗಮನಹರಿಸಿಲ್ಲ. ಸುತ್ತಮುತ್ತಲಿನ ಜನರು ಅನಾ ರೋಗ್ಯಕ್ಕೆ ತುತ್ತಾಗುವ ಎಲ್ಲ ಲಕ್ಷಣ ಕಾಣಿಸುತ್ತಿದೆ. ತಿಂಡ್ಲು- ದ್ಯಾವರಹಳ್ಳಿ-ಜಾಲಿಗೆ-ಬಚ್ಚಹಳ್ಳಿ ಗ್ರಾಮ ಗಳಿಗೆ ಹೊಂದಿಕೊಂಡಿರುವ ಬಂಡೆ ಇದಾಗಿದ್ದು, ಯಾರೋ ರಾತ್ರಿ ವೇಳೆಯಲ್ಲಿ ಬಿಬಿಎಂಪಿಯಿಂದ ಕೋಳಿ ತ್ಯಾಜ್ಯ, ಪ್ಲಾಸ್ಟಿಕ್, ಸತ್ತ ಜಾನು ವಾರು ಇಲ್ಲಿಗೆ ತಂದು ಸುರಿಯುತ್ತಿದ್ದಾರೆ. ಈ ಪ್ರದೇಶದಲ್ಲಿ ಸಂಚಾರ ಮಾಡಲೂ ತೊಂದರೆ ಯಾಗುತ್ತಿದೆ ಎಂದು ಬಿಕೆಎಸ್ ಪ್ರತಿಷ್ಠಾನದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮಸ್ಥರು ಆರೋಪ: ಗ್ರಾಮಸ್ಥರು ತ್ಯಾಜ್ಯ ಸುರಿಯುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಗ್ರಾಪಂಗೆ ಮನವಿ ಸಲ್ಲಿಸಿದ್ದರೂ,ಅಧಿಕಾರಿಗಳ ನಿರುತ್ಸಾಹ ಎದ್ದು ಕಾಣುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಯತೇತ್ಛವಾಗಿ ಗುಂಡಿಗೆ ತ್ಯಾಜ್ಯ ಸುರಿಯುತ್ತಿರುವುದರಿಂದ ಬಂಡೆ ಪ್ರದೇಶದಲ್ಲಿ ಮಳೆ ನೀರಿನೊಂದಿಗೆ ಬೆರೆತು ಅಂತರ್ಜಲ ವಿಷಪೂರಿತವಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾತ್ರಿ ವೇಳೆಯಲ್ಲಿ ತ್ಯಾಜ್ಯ ಸುರಿಯುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವು ದರ ಮೂಲಕ ದಂಡವಿಸಬೇಕು. ಸ್ಥಳೀಯ ಜನಪ್ರತಿನಿಧಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಶೀಘ್ರವಾಗಿ ಇತ್ತ ಗಮನಹರಿಸಿಕ್ರಮಕೈಗೊಳ್ಳಬೇಕು. ಕೂಡಲೇ ತ್ಯಾಜ್ಯವನ್ನುತೆರವುಗೊಳಿಸಿ, ತ್ಯಾಜ್ಯ ಸುರಿಯದಂತೆ ಎಚ್ಚರಿಕೆಯ ನಾಮಫಲಕ ಅಳವಡಿಸಬೇಕು.
– ಬಿ.ಕೆ.ಶಿವಪ್ಪ, ಅಧ್ಯಕ್ಷ, ನಾ.ಹಿತರಕ್ಷಣಾ ಸಮಿತಿ
ತಾಲೂಕಿನ ಗಡಿ ಪ್ರದೇಶದ ಜಾಲಿಗೆ ಗ್ರಾಪಂ ವ್ಯಾಪ್ತಿಯಲ್ಲಿನ ಬಚ್ಚಹಳ್ಳಿ ರಸ್ತೆ ಮಾರ್ಗದ ಬಂಡೆ ಮಾರ್ಗದಲ್ಲಿ ಕಸವನ್ನು ಯಾರು ಹಾಕುತ್ತಿದ್ದಾರೆ ಎಂಬುದರ ಬಗ್ಗೆ ಸ್ಥಳೀಯ ಗ್ರಾಪಂ ಅಭಿವೃದ್ಧಿಅಧಿಕಾರಿಗಳು ಪರಿಶೀಲನೆ ಮಾಡಿ ಮಾಹಿತಿ ಪಡೆದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
– ಎಚ್.ಡಿ. ವಸಂತಕುಮಾರ್, ತಾಪಂ ಇಒ
– ಎಸ್.ಮಹೇಶ್