Advertisement
ತಾಲೂಕಿನ ಪ್ರಾದೇಶಿಕ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದ ಕಾಶೀಪುರ ಕಾಯ್ದಿಟ್ಟಅರಣ್ಯದಲ್ಲಿ 450 ಎಕರೆ ಜಮೀನಿದ್ದು, ಅದರ ಪೈಕಿ 73 ಹೆಕ್ಟೇರ್ ಜಮೀನನ್ನು ಕೆಎಸ್‌ಎಫ್ ಐಸಿಗೆ ಹಸ್ತಾಂತರ ಮಾಡಿದ್ದು ಅವರು ಸದರಿ ಜಮೀನಿನಲ್ಲಿ ನೀಲಗಿರಿ ಬೆಳೆಸಿರುತ್ತಾರೆ.
Related Articles
Advertisement
ತಕರಾರಿಲ್ಲ ಎಂದು ಪ್ರಸ್ತಾವನೆ: ತಹಶೀಲ್ದಾರ್ ಬಲ್ಲ ಗ್ರಾಪಂಗೆ ತ್ಯಾಜ್ಯ ವಿಲೇವಾರಿ ಘಟಕ
ಸ್ಥಾಪನೆಗಾಗಿ ಶೆಟ್ಟಿಬಣಕನಹಳ್ಳಿ ಗ್ರಾಮದ ಸ.ನಂ.76ರ ವಿಸ್ತೀರ್ಣ 5.00 ಎಕರೆ ಅರಣ್ಯದಲ್ಲಿರುವ ಜಮೀ ನನ್ನು ಗುರುತಿಸಿ ಸದರಿ ಜಮೀ ನನ್ನು ಗೋಮಾಳ ಎಂಬುದಾಗಿ ವರ್ಗೀಕರಿಸಲಾಗಿದೆ. ಈ ಜಮೀನಿನಲ್ಲಿ ಯಾರೂ ಬಗರ್‌ಹುಕುಂ ಸಾಗುವಳಿ ಇರುವುದಿಲ್ಲ. ಈ ಜಮೀನು ಮಂಜೂರಾತಿ ಕೋರಿ ಯಾರೂ ನಮೂನೆ-50, 53 ಅರ್ಜಿ ಸಲ್ಲಿಸಿಕೊಂಡಿರುವುದಿಲ್ಲ. ಈ ಜಮೀನಿಗೆ ಸಂಪರ್ಕ ರಸ್ತೆ ಇರುತ್ತದೆ. ಈ ಜಮೀನಿನ ಸಂಬಂಧ ಯಾವುದೇ ಸಿವಿಲ್ ನ್ಯಾಯಾಲಯ ಪ್ರಕರಣಗಳು ಬಾಕಿ ಇರುವುದಿಲ್ಲ,
ಈ ಜಮೀನು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ ಹಾಗೂ ಉದ್ದೇಶಿತ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮಂಜೂರು ಮಾಡಲು ಗ್ರಾಮಸ್ಥರ ತಂಟೆ-ತಕರಾರು ಇರುವುದಿಲ್ಲ ಎಂದು ತಹಶೀಲ್ದಾರ್ ಸಹಾಯಕ ಕಮೀಷನರ್‌ಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಜಮೀನು ಮಂಜೂರಿಗೆ ಶಿಫಾರಸು: ತಹಶೀಲ್ದಾರ್ ವರದಿ ಅನ್ವಯ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜಮೀನನ್ನು ಮಂಜೂರು ಮಾಡಬಹುದೆಂದು ಸಹಾಯಕ ಕಮಿಷನರ್ ಶಿಫಾರಸು ಮಾಡಿರುತ್ತಾರೆ. ಪ್ರಸ್ತಾವನೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಸರ್ಕಾರದ ಸುತ್ತೋಲೆ ಸಂ.ಆರ್.ಡಿ 70 ಎಲ್‌ಜಿಪಿ 2008 ದಿನಾಂಕ 08.08.2020 ರ ನಿರ್ದೇಶನದಂತೆ 5 ಎಕರೆ ಜಮೀನನ್ನು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಮಂಜೂರು ಮಾಡಿರುತ್ತಾರೆ.
ಯೋಜನೆ ರದ್ದುಗೆ ಪ್ರಸ್ತಾವನೆ ಸಲ್ಲಿಸಿಲ್ಲ : ಕಾಶೀಪುರ ಕಾಯ್ದಿಟ್ಟ ಅರಣ್ಯದಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕ ಪ್ರಾರಂಭಗೊಂಡಲ್ಲಿ ವಾಹನಗಳ ಓಡಾಟ ಮತ್ತು ಉಂಟಾಗುವ ಮಾಲಿನ್ಯದಿಂದ ಪ್ರಾಣಿ ಮತ್ತು ಪಕ್ಷಿಸಂಕುಲಕ್ಕೆ ತೊಂದರೆ ಉಂಟಾಗಲಿದೆ. ಜಿಲ್ಲಾಧಿಕಾರಿಗಳು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಮೀನು ಮಂಜೂರು ಮಾಡಿ 5 ತಿಂಗಳು ಕಳೆದರೂ ಸದರಿ ಯೋಜನೆಯನ್ನು ರದ್ದುಗೊಳಿಸಿ ಅರಣ್ಯ ಮತ್ತು ಅರಣ್ಯದಲ್ಲಿರುವ ಸಸ್ಯ ಸಂಪತ್ತು ಹಾಗೂ ವನ್ಯ ಜೀವಿಗಳನ್ನು ಉಳಿಸಬೇಕೆಂದುಕೋರಿ ಇದುವರೆಗೂ ವಲಯಾರಣ್ಯಾಧಿಕಾರಿ ರವಿಕೀರ್ತಿ ಅಥವಾ ಸಹಾಯಕ ವಲಯಾರಣ್ಯಧಿಕಾರಿ ಕೃಷ್ಣಮೂರ್ತಿ ಯಾರೊಬ್ಬರೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸದೇ ಇರುವುದಕ್ಕೆ ಅಚ್ಚರಿಗೆ ಕಾರಣವಾಗಿದೆ.
ಪ್ರಾಣಿ-ಪಕ್ಷಿ, ಸಸ್ಯಸಂಕುಲ ನಾಶ ಒಟ್ಟಿನಲ್ಲಿ ಈ ಜಮೀನು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ ವೆಂದು ಕಾಯ್ದಿಟ್ಟ ಅರಣ್ಯದ ಮಧ್ಯದಲ್ಲಿರುವ ಗೋಮಾಳ ಜಮೀನು ಪೈಕಿ 5 ಎಕರೆ ಪ್ರದೇಶವನ್ನು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಂಜೂರಾತಿಗಾಗಿ ತಹಶೀಲ್ದಾರ್ ರಾಜಶೇಖರ್ ಪ್ರಸ್ತಾವನೆ ಸಲ್ಲಿಸಿದ್ದು, ಸದರಿ ಅರಣ್ಯ ಪ್ರದೇಶದಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಗೊಂಡಲ್ಲಿ ಹಲವಾರು ದಶಕಗಳ ಹಿಂದೆ ಬೆಳೆಸಿರುವ ಸಸ್ಯ ಸಂಪತ್ತು ನಾಶವಾಗುವುದಲ್ಲದೇ ವನ್ಯ ಜೀವಿಗಳ ವಾಸಕ್ಕೆ ಸಂಚಕಾರ ಬರಬಹುದು.
ಜಮೀನು ಸರ್ವೆ ಮಾಡಿಸಿ ಗ್ರಾಪಂ ವಶಕ್ಕೆ : ಹಲವಾರು ವರ್ಷಗಳ ಹಿಂದೆ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯದ ಅಂಚಿನಲ್ಲಿರುವ ಸರ್ವೆ ನಂಬರ್ 76ರ ಗೋಮಾಳ ಜಮೀನನ್ನು ತಮ್ಮದೆಂದು ಕಾಯ್ದಿಟ್ಟ ಅರಣ್ಯಕ್ಕೆ ಸೇರಿಸಿಕೊಂಡು ಅನಧಿಕೃತವಾಗಿ ಫೆನ್ಸಿಂಗ್ ಹಾಕಿಕೊಂಡಿದ್ದರು. ಆದರೆ ಜಿಲ್ಲಾಧಿಕಾರಿಗಳ ಆದೇಶದಂತೆ ಶೀಘ್ರದಲ್ಲಿಯೇ ನಿಗದಿತ ಜಮೀನನ್ನು ಸರ್ವೆ ಮಾಡಿಸಿ ವಶಕ್ಕೆ ಪಡೆದು ಗ್ರಾಪಂಗೆ ನೀಡಲಾಗುವುದು ಎಂದು ತಹಶೀಲ್ದಾರ್ ರಾಜಶೇಖರ್ ಉದಯವಾಣಿಗೆ ತಿಳಿಸಿದರು.
ಅರಣ್ಯದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕುರಿತಂತೆ ತಮಗೆ ಇದುವರೆಗೂ ಮಾಹಿತಿಯೇ ಇಲ್ಲ. ಈ ಕುರಿತು ವಲಯಾರಣ್ಯ ಧಿಕಾರಿ ರವಿಕೀರ್ತಿ ಮೂಲಕ ಮೇಲಾಧಿಕಾರಿ ಗಳಿಗೆ ವರದಿ ಸಲ್ಲಿಸಲಾಗುವುದು. – ಕೃಷ್ಣಮೂರ್ತಿ, ಸಹಾಯಕ ವಲಯಾರಣ್ಯಧಿಕಾರಿ
ಅರಣ್ಯದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕುರಿತಂತೆ ತಮಗೆ ಇದುವರೆಗೂ ಮಾಹಿತಿ ಇಲ್ಲ. ಸ್ಥಳೀಯ ವಲಯಾರಣ್ಯಧಿಕಾರಿಯಿಂದ ಮಾಹಿತಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು. – ಶಿವಶಂಕರ್, ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿ
– ಎಂ.ನಾಗರಾಜಯ್ಯ