Advertisement

ಕೋಟೇಶ್ವರ ಪರಿಸರದಲ್ಲಿ ತ್ಯಾಜ್ಯ ವಿಲೇವಾರಿಯೇ ಸವಾಲು

11:36 PM Sep 30, 2019 | Team Udayavani |

ಕೋಟೇಶ್ವರ: ಸ್ವಚ್ಛ ಗ್ರಾಮ ಪರಿಕಲ್ಪನೆಗೆ ಪೂರಕವಾದ ವ್ಯವಸ್ಥೆ ಕಲ್ಪಿಸುವಲ್ಲಿ ಕೆಲವೊಂದು ಗ್ರಾ.ಪಂ. ವ್ಯಾಪ್ತಿಯಲ್ಲಿ ತೊಡಕಾಗುತ್ತಿದ್ದರೂ, ಸ್ವತ್ಛತೆಗೆ ಆದ್ಯತೆ ನೀಡಿ ತ್ಯಾಜ್ಯ ವಿಲೇವಾರಿಗೊಳಿಸುತ್ತಾರೆ. ಆದರೆ ಮತ್ತೆ ಮೂಟೆಗಟ್ಟಲೇ ತ್ಯಾಜ್ಯ ಬಂದು ಸೇರುತ್ತಿರುವುದು ಸವಾಲಾಗಿದ್ದು, ಅದಕ್ಕೊಂದು ಉದಾಹರಣೆಯಾಗಿದೆ ಕೋಟೇಶ್ವರ ಮುಖ್ಯ ರಸ್ತೆಯ ಸರ್ವೀಸ್‌ ರೋಡ್‌ನ‌ಲ್ಲಿ ಎಸೆಯಲಾಗಿರುವ ಬಾರಿ ಪ್ರಮಾಣದ ತ್ಯಾಜ್ಯ.

Advertisement

ನುಂಗಲಾರದ ತುತ್ತು
ಕಳೆದ ಹಲವು ತಿಂಗಳಿನಿಂದ ಬ್ಯಾನರ್‌ ಸಹಿತ ಗ್ರಾ.ಪಂ.ನಲ್ಲಿ ಗ್ರಾಮಸ್ಥರಿಗೆ ಮಾಹಿತಿ ನೀಡಿ ತ್ಯಾಜ್ಯ ಎಸೆಯುದರಿಂದ ಉಂಟಾಗುತ್ತಿರುವ ದುಷ್ಪರಿಣಾಮ, ಸಾಂಕ್ರಾಮಿಕ ರೋಗಗಳ ಬಾಧೆ ಬಗ್ಗೆ ಮಾಹಿತಿ ನೀಡಲಾಗಿದ್ದರೂ ಮನಬಂದಂತೆ ತ್ಯಾಜ್ಯ ಎಸೆಯುತ್ತಿರುವುದು ಪಂಚಾಯತ್‌ಗೆ ನುಂಗಲಾರದ ತುತ್ತಾಗಿದೆ.

ಇಲ್ಲಿನ ರಾ. ಹೆದ್ದಾರಿಯ ಹಿಂದೂ ರುದ್ರಭೂಮಿ ಪಾರ್ಶ್ವದಲ್ಲಿ ಮೂಟೆಗಟ್ಟಲೇ ತ್ಯಾಜ್ಯ ಕಂಡುಬಂದಿದ್ದು ಅದಕ್ಕೂ ಮಿಗಿಲಾಗಿ ಇಲ್ಲಿನ ಸರ್ವೀಸ್‌ ರಸ್ತೆಯಲ್ಲಿ ಬಸ್‌ ಕಾಯುವ ಜಾಗದ ಪರಿಸರದಲ್ಲಿ ಮುಖ್ಯರಸ್ತೆಯಲ್ಲಿಯೂ ಕೊಳಚೆ ತ್ಯಾಜ್ಯ ಪದಾರ್ಥಗಳನ್ನು ಎಸೆಯಲಾಗಿದೆ.

ಸಾಂಕ್ರಾಮಿಕ ರೋಗ ಭೀತಿ
ಡೆಂಗ್ಯೂ, ಟೈಫಾಯ್ಡ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳು ಅಲ್ಲಲ್ಲಿ ಕಂಡು ಬರುತ್ತಿವೆ. ತ್ಯಾಜ್ಯದ ಪರಿಸರದಲ್ಲಿ ನಿಲ್ಲುವ ನೀರಿನಿಂದಾಗಿ ಕಸ ಕಡ್ಡಿಗಳು ಕೊಳೆಯುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಇಲ್ಲಿನ ಜನರದ್ದು. ಜತೆಗೆ ಸೊಳ್ಳೆಗಳ ಕಾಟವೂ ಅಧಿಕವಾಗಿದ್ದು ಜನರು ಆತಂಕದಲ್ಲೇ ಬದುಕುವಂತಾಗಿದೆ.

ಕೋಟೇಶ್ವರದಿಂದ ಕಟೆRರೆ ಸಾಗುವ ಇಂಡಸ್ಟ್ರಿಯಲ್‌ ಏರಿಯಾ ಪರಿಸರದಲ್ಲೂ ತ್ಯಾಜ್ಯ ಎಸೆಯಲಾಗಿದೆ. ಈ ಸಮಸ್ಯೆಗೆ ಶೀಘ್ರ ಪರಿ ಹಾರ ನೀಡುವಂತೆ ಗ್ರಾಮಸ್ಥರು ಸಂಬಂಧಿಸಿದ ಇಲಾಖೆಯನ್ನು ಆಗ್ರಹಿಸಿದ್ದಾರೆ.

Advertisement

ಖೇದಕರ
ಒಂದಿಷ್ಟು ಕಾಲ ಕೋಟೇಶ್ವರ ಗ್ರಾ.ಪಂ. ಅಲ್ಲಿನ ನೌಕರರ ಸಹಕಾರದಿಂದ ರಾತ್ರಿ ಹೊತ್ತಿನಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ವಿಶೇಷ ಪಡೆ ರಚಿಸಿ ಆ ಬಗ್ಗೆ ಜಾಗೃತಿ ವಹಿಸಿತ್ತು. ಆದರೆ ಈಗ ಮತ್ತೇ ತ್ಯಾಜ್ಯ ಎಸೆಯಲಾಗಿರುವುದು ಖೇದಕರ.
ಸುಬ್ರಹ್ಮಣ್ಯ ಶೆಟ್ಟಿಗಾರ್‌,
ಗ್ರಾಮಸ್ಥರು

ಸವಾಲಾಗಿದೆ
ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳಲಾಗಿದ್ದರು ಪದೆಪದೇಈ ಕೃತ್ಯ ಎಸಗುತ್ತಿರುವುದು ಗ್ರಾ.ಪಂ.ಗೆ ಸವಾಲಾಗಿದೆ. ಪುರಸಭೆಯ ಅಧಿಕಾರಿಗಳನ್ನು ಭೇಟಿಮಾಡಿ ಜಪ್ತಿಯಲ್ಲಿನ ಡಂಪಿಂಗ್‌ ಯಾರ್ಡ್‌ಗೆ ಕಸ ವಿಲೇವಾರಿಗೆ ಕೋರಲಾಗುವುದು. ಅ.2ರಂದು ಮತ್ತೆ ವಿವಿಧ ಸಂಘಟನೆಗಳ ಸಹಕಾರದಿಂದ ಶ್ರಮದಾನದ ಮೂಲಕ ತ್ಯಾಜ್ಯ ವಿಲೇವಾರಿಗೊಳಿಸಲಾಗುವುದು.
-ತೇಜಪ್ಪ ಕುಲಾಲ್‌,
ಪಿಡಿಒ ಕೋಟೇಶ್ವರ ಗ್ರಾ.ಪಂ.

-ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next