Advertisement

ರಸ್ತೆ ಬದಿಯಲ್ಲೇ ತ್ಯಾಜ್ಯ ಸಂಗ್ರಹ!

03:29 PM Aug 27, 2019 | Team Udayavani |

ಕುರುಗೋಡು: ಮಹತ್ವದ ಸಂಕಲ್ಪ ಯೋಜನೆಯಾದ ಸ್ವಚ್ಚ ಭಾರತ್‌ ದೇಶಾದ್ಯಂತ ಸಕ್ರಿಯವಾಗಿ ನಡೆಯುತ್ತಿದ್ದರೂ ಪಟ್ಟಣದ ರಸ್ತೆ ಬದಿಯಲ್ಲೇ ತ್ಯಾಜ್ಯ ಎಸೆಯುವ ಪ್ರವೃತ್ತಿ ನಿತ್ಯ ನಡೆಯುತ್ತಿದ್ದು ಕಾನೂನುಗಳಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ.

Advertisement

ಈ ಸಮಸ್ಯೆಯಿಂದ ಕುರುಗೋಡಿನಿಂದ ಬಳ್ಳಾರಿಗೆ ಹೋಗುವ ಮುಖ್ಯ ಹೆದ್ದಾರಿ ಬದಿಯು ಅಸಹ್ಯಕರವಾಗಿ ಗೋಚರಿಸುತ್ತಿದೆ. ಇನ್ನೂ ಪಟ್ಟಣದ ಬಳ್ಳಾರಿ ರಾಜ್ಯ ರಸ್ತೆಯಲ್ಲಿ ತ್ಯಾಜ್ಯದ ರಾಶಿಗಳಿಂದಾಗಿ ಅಕ್ಷರಶಃ ಕಸ ಮತ್ತು ಮದ್ಯದ ಬಾಟಲ್ಗಳು ಹಾಕುವ ಕೊಂಪೆಯಾಗಿದೆ.

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯಲ್ಲಿ ತ್ಯಾಜ್ಯ ರಾಶಿಯಾದ ಪರಿಣಾಮ ವಾಹನ ಚಾಲಕರು ಹಾಗೂ ಪಾದಚಾರಿಗಳಿಗೆ ಪ್ರಾಣ ಭೀತಿ ಎದುರಾಗಿದೆ. ಆಹಾರದ ಆಸೆಯಿಂದ ಬರುವ ದನಗಳು ಪ್ಲಾಸ್ಟಿಕ್‌ ಚೀಲ ಸಮೇತ ಆಹಾರ ತಿಂದು ಆರೋಗ್ಯ ಹದಗೆಡಿಸಿಕೊಳ್ಳುತ್ತಿವೆ. ಆಹಾರದ ಆಸೆಯಿಂದ ತ್ಯಾಜ್ಯ ಚೀಲಗಳನ್ನು ರಸ್ತೆ ಮಧ್ಯದವರೆಗೂ ಪ್ರಾಣಿಗಳು ಎಳೆದಾಡುವುದರಿಂದ ರಸ್ತೆಯೆಲ್ಲ ದುರ್ವಾಸನೆ ಬೀರಿ ಜನರಿಗೆ ಸಮಸ್ಯೆಯಾಗುತ್ತಿದೆ.

ತ್ಯಾಜ್ಯ ಸಂಗ್ರಹಕ್ಕೆ ಸ್ಥಳದ ಕೊರತೆ: ಪಟ್ಟಣದಲ್ಲಿ ಜನರು ನಿತ್ಯ ಬಳಕೆ ಮಾಡುವ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಲು ಸ್ಥಳದ ಕೊರತೆ ಇರುವುದರಿಂದ ಪುರಸಭೆ ರಸ್ತೆ ಬದಿಯಲ್ಲಿ ತ್ಯಾಜ್ಯಗಳನ್ನು ಹಾಕುತ್ತಿದೆ. ಪಟ್ಟಣದ ಬೈಲೂರು ರಸ್ತೆಯಲ್ಲಿರುವ 24 ಎಕರೆ ಸ್ಥಳ ನಿಗದಿಗೆ ಈಗಾಗಲೇ ಸುಮಾರು ದಿನಗಳಿಂದ ಪುರಸಭೆ ಆಡಳಿತವು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಂಬಂಧಿಸಿದ ಇಲಾಖೆಗೆ ಅನುಮೋದನೆ ಪಡೆಯಲು ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾದಂತಿಲ್ಲ. ಇದರಿಂದ ಪುರಸಭೆ ನಿರ್ಲಕ್ಷ್ಯ ತೋರುತ್ತಿದೆ.

ಬಾಡಿಗೆ ವಾಹನ: ಪುರಸಭೆಗೆ ಕೋಟಿಗಟ್ಟಲೇ ಅನುದಾನ ಬರುತ್ತಿದ್ದರೂ ತ್ಯಾಜ್ಯ ವಸ್ತುಗಳ ಸಂಗ್ರಹಕ್ಕೆ ಬಾಡಿಗೆ ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ. ಪುರಸಭೆ ರಸ್ತೆಗಳಲ್ಲಿ ಸಂಗ್ರಹಣೆಗೊಂಡಿರುವ ತ್ಯಾಜ್ಯ ಸಂಗ್ರಹಣೆಗೆ 1 ಟ್ರ್ಯಾಕ್ಟರ್‌ ವಾಹನ, 1 ಟಾಟಾ ಎಸಿ ಮತ್ತು 2 ಟ್ರ್ಯಾಕ್ಟರ್‌ಗಳು ಪಟ್ಟಣದ ಮನೆ ಮನೆಗೆ ಕಸ ಸಂಗ್ರಹಣೆ ಮಾಡಲು 3 ವಾಹನಗಳನ್ನು ಬಾಡಿಗೆ ರೂಪದಲ್ಲಿ ಬಳಕೆ ಮಾಡುತ್ತಿದ್ದಾರೆ.

Advertisement

 

•ಸುಧಾಕರ್‌ ಮಣ್ಣೂರು

Advertisement

Udayavani is now on Telegram. Click here to join our channel and stay updated with the latest news.

Next