Advertisement

ಬಿಡದಿ ಪಟ್ಟಣದಲ್ಲಿ ಕಸದ ರಾಶಿ; ಜನಾಕ್ರೋಶ

02:17 PM Mar 22, 2022 | Team Udayavani |

ರಾಮಗನರ: ತಾಲೂಕಿನ ಬಿಡದಿ ಪಟ್ಟಣದಲ್ಲಿ ಸ್ವಚ್ಛ ಭಾರತ ಅಭಿಯಾನ ಎಂಬುದು ಮರಿಧೀಚಿಕೆಯಾಗಿದೆ. ಪುರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಮತ್ತು ತಾವು ವಾಸಿಸುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಕನಿಷ್ಠ ಪ್ರಜ್ಞೆಯನ್ನು ಕಳೆದುಕೊಂಡಿರುವ ಕೆಲವು ನಿವಾಸಿಗಳಿಂದಾಗಿ ಬಿಡದಿ ಪಟ್ಟಣದ ಬಹುತೇಕ ಬಡಾವಣೆಗಳು ಗಬ್ಬೆದ್ದು ಹೋಗಿದೆ.

Advertisement

ಬಹುತೇಕ ಎಲ್ಲ ಬಡಾವಣೆಗಳಲ್ಲೂ ಟನ್‌ಗಟ್ಟಲೆ ತ್ಯಾಜ್ಯ ವಿಲೇವಾರಿಯಾಗದೆ ರಸ್ತೆ ಬದಿಯಲ್ಲಿ ಶೇಖರಣೆ ಯಾಗುತ್ತಿದೆ. ತ್ಯಾಜ್ಯ ಕೊಳೆತು ನಾರುತ್ತಿದ್ದು, ರೋಗ ರುಜಿನಗಳಿಗೆ ಕಾರಣವಾಗುತ್ತಿದೆ. ಆದರೆ ಪುರಸಭೆಯ ಅಧಿಕಾರಿಗಳು ತ್ಯಾಜ್ಯವನ್ನು ವಿಲೇವಾರಿ ಮಾಡದೆ ಇದು ತಮ್ಮ ಹೊಣೆ ಅಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇನ್ನೊಂದೆಡೆ ರಸ್ತೆ ಬದಿಯನ್ನು ತಿಪ್ಪೆ ಯನ್ನಾಗಿಸಿಕೊಂಡಿರುವ ನಾಗರಿಕರು ಗೃಹ ತ್ಯಾಜ್ಯವನ್ನು ಸುರಿಯುತ್ತಿದ್ದಾರೆ. ಬಿ

ಡದಿಯ ಪ್ರತಿಷ್ಠಿತ ಬಡಾವಣೆಗಳ ಪೈಕಿ ಒಂದು ಯೋಗೇಶ್‌ ಲೇ ಔಟ್‌ನ ಮುಖ್ಯ ರಸ್ತೆಯಲ್ಲಿ ವಾರ ಕಳೆದರೂ ತ್ಯಾಜ್ಯ ರಾಶಿ ವಿಲೇವಾರಿ ಆಗಿಲ್ಲ. ಇಲ್ಲಿನ ಕೆಲವು ನಿವಾಸಿಗಳು ಸಹ ತಮ್ಮ ಹೊಣೆ ಮರೆತು ಇಲ್ಲಿ ತ್ಯಾಜ್ಯ ಸುರಿಯುವುದನ್ನು ಮುಂದುವರಿಸಿದ್ದಾರೆ. ತ್ಯಾಜ್ಯ ಈಗ ರಸ್ತೆಯನ್ನು ಸಂಪೂರ್ಣವಾಗಿ ಆವರಿಸಿದ್ದು, ಪಾದಚಾರಿಗಳು ತ್ಯಾಜ್ಯವನ್ನು ತುಳಿದೇ ಹೋಗಬೇಕಾಗಿದೆ.

ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪುರಸ ಭೆ ವಾಹನಗಳಿಗೆ ಕೊಡಬೇಕಾದದ್ದು ನಾಗರಿಕರ ಕರ್ತವ್ಯ. ಪುರಸಭೆಯ ವಾಹನ ಬರದಿದ್ದರೆ ಅಧಿಕಾರಿಗಳಿಗೆ ತಿಳಿಸಿ ವಾಹನ ಕರೆಸಿಕೊಂಡು ತ್ಯಾಜ್ಯ ಕೊಡ ಬೇಕು. ಆದರೆ ಇಲ್ಲಿರುವ ಪ್ರಜ್ಞಾವಂತ ನಾಗರಿಕರು ಸಹ ತಮ್ಮ ಹೊಣೆ ಮರೆತು ರಸ್ತೆ ಬದಿಯಲ್ಲೇ ತ್ಯಾಜ್ಯ ಸುರಿಯುತ್ತಿದ್ದಾರೆ.

ಬಳಸಲು ಅಯೋಗ್ಯವಾದ ಹಾಸಿಗೆಗಳನ್ನು ತಂದು ರಸ್ತೆಯಲ್ಲಿ ಬಿಸಾಡಿ ಹೋಗಿರುವು ದನ್ನು ಇಲ್ಲಿ ಕಾಣಬಹುದು. ಬಿಡದಿ ಪುರಸಭೆಯ ಅಧಿಕಾರಿಗಳು ಕಸ ವಿಲೇವಾರಿಗೆ ಸ್ಥಳ ಇಲ್ಲ ಎಂಬ ನೆಪ ಹೇಳದೆ, ತಕ್ಷಣ ರಸ್ತೆ ಬದಿಗಳಲ್ಲಿ ಶೇಖರಣೆ ಆಗಿರುವ ತ್ಯಾಜ್ಯವನ್ನು ತೆರವುಗೊಳಿಸ ಬೇಕು. ನಾಗರಿಕರು ಪುರಸಭೆಯ ವಾಹನಗಳಿಗೆ ತ್ಯಾಜ್ಯ ಕೊಟ್ಟು ತಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳ ಬೇಕು ಎಂಬುದು ಬಿಡದಿಯ ಬಹುತೇಕ ನಾಗರೀಕರ ಅಭಿಪ್ರಾಯ

Advertisement

ಯೋಗೇಶ್‌ ಬಡಾವಣೆಯಲ್ಲಿ ಕಳೆದ ಒಂದು ವಾರದಿಂದ ಶೇಖರಣೆ ಆಗಿರುವ ತ್ಯಾಜ್ಯ ತೆರವಾಗಿಲ್ಲ. ತ್ಯಾಜ್ಯ ಕೊಳೆತು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ಉಂಟಾಗಿದೆ. ಅಧಿಕಾರಿಗಳು ತಕ್ಷಣ ಈ ಸಮಸ್ಯೆಯತ್ತ ಗಮನ ಹರಿಸಿ ತ್ಯಾಜ್ಯ ತೆರವುಗೊಳಿಸಬೇಕು. – ಮುತ್ತಣ್ಣ , ನಾಗರಿಕರು, ಬಿಡದಿ

Advertisement

Udayavani is now on Telegram. Click here to join our channel and stay updated with the latest news.

Next