Advertisement
ಆ ಗ್ರಹಕ್ಕೆ ‘ಡಬ್ಲ್ಯೂಎಎಸ್‌ಪಿ-76’ ಎಂದು ಹೆಸರಿಡಲಾಗಿದ್ದು, ಅದಕ್ಕೆ ಒಬ್ಬ ಸೂರ್ಯನಿದ್ದಾನೆ. ತನ್ನ ಸೂರ್ಯನಿಗೆ ತೀರಾ ಸಮೀಪದಲ್ಲಿರುವ ಕಾರಣದಿಂದ ಆ ಗ್ರಹದ ಹಗಲಿನ ವೇಳೆ ಅಲ್ಲಿ 2,400 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರುತ್ತದೆ. ಅತಿ ಉಷ್ಣಾಂಶದಿಂದಾಗಿ ಅಲ್ಲಿನ ನೆಲದಲ್ಲಿರುವ ಕಬ್ಬಿಣಾಂಶ ಭಾಷ್ಪೀಕರಣಗೊಂಡು ವಾತಾವರಣಕ್ಕೆ ಸೇರುತ್ತದೆ. ನಮ್ಮ ಭೂಮಿಯ ಹಾಗೆಯೇ, ಆ ಗ್ರಹದ ಒಂದು ಮಗ್ಗುಲಲ್ಲಿ ಹಗಲಿದ್ದಾಗ, ಮತ್ತೂಂದು ಕಡೆ ರಾತ್ರಿಯಿರುತ್ತದೆ. ಆದರೆ, ಅಲ್ಲಿ ರಾತ್ರಿಯಿರುವ ಕಡೆ ಉಷ್ಣಾಂಶ 1,500 ಡಿಗ್ರಿಗೆ ಕುಸಿಯುತ್ತದೆ. ಆಗ ಭಾಷ್ಪೀಕರಣಗೊಂಡ ಕಬ್ಬಿಣದ ಕಣಗಳು, ಕಡಿಮೆ ಉಷ್ಣಾಂಶದ ಕಡೆಗೆ ಸಾಗಿ ಅಲ್ಲಿ ಸಂಯುಕ್ತಗೊಂಡು ಮಳೆಯಂತೆ ನೆಲಕ್ಕೆ ಬೀಳುತ್ತವೆ.
ನಾವಿರುವ ಸೌರ ಮಂಡಲದ ಅಂಚಿನಲ್ಲಿ 139 ಹೊಸ ಸಣ್ಣ ಗ್ರಹಗಳನ್ನು ಪತ್ತೆ ಹಚ್ಚಲಾಗಿದೆ ಎಂದು ದ ಆಸ್ಟ್ರೋಫಿಸಿಕಲ್ ಜರ್ನಲ್ ಸಪ್ಲಿಮೆಂಟ್ ಸೀರೀಸ್ ಎಂಬ ನಿಯತಕಾಲಿಕೆಯಲ್ಲಿ ಮೂಡಿಬಂದಿರುವ ಅಧ್ಯಯನ ವರದಿಯೊಂದು ತಿಳಿಸಿದೆ. ಇವುಗಳಿಗೆ ಟ್ರಾನ್ಸ್-ನೆಫ್ಚೂನ್ ಗ್ರಹಗಳೆಂದು (‘ಟಿಎನ್‌ಒ’ಗಳು) ಪರಿಗಣಿಸಲಾಗಿದೆ.