ಮುಂಬೈ: ಕ್ರಿಕೆಟ್ ಗೆ ವಿದಾಯ ಹೇಳಿದ ಬಳಿಕ ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿರುವ ವಾಸಿಂ ಜಾಫರ್ ತನ್ನ ಹಾಸ್ಯ ಮಿಶ್ರಿತ ಟ್ವೀಟ್ ಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಡಿಆರ್ ಎಸ್ ಗೂ ಹೊಸ ವ್ಯಾಖ್ಯಾನವನ್ನು ಜಾಫರ್ ನೀಡಿದ್ದಾರೆ.
ಡಿಆರ್ ಎಸ್ ಎಂದರೆ ಡಿಸಿಶನ್ ರಿವೀವ್ ಸಿಸ್ಟಮ್. ಅಂದರೆ ಅಂಪಾಯರ್ ನೀಡಿದ ತೀರ್ಪು ತೃಪ್ತಿದಾಯಕವಿಲ್ಲದಿದ್ದರೆ ಅದರ ವಿರುದ್ಧ ಮೂರನೇ ಅಂಪಾಯರ್ ಗೆ ಮೇಲ್ಮನವಿ ಸಲ್ಲಿಸಬಹುದು. ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಎರಡನೇ ದಿನ ಇಂತಹ ಪ್ರಸಂಗಗಳು ಎದುರಾಗಿತ್ತು.
ಇದನ್ನೂ ಓದಿ:ಬಿ.ಎ, ಬಿ.ಕಾಂ ಫಲಿತಾಂಶ ಕೂಡಲೇ ಘೋಷಿಸಿ…ಇಲ್ಲದಿದ್ರೆ ವಿವಿಗೆ ಬಾಂಬ್ ಹಾಕ್ತೇವೆ!
ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರ ಎಸೆತದಲ್ಲಿ ಎರಡು ಬಾರಿ ಇಂತಹ ಸಂದರ್ಭ ಬಂದಿತ್ತು. ಬೌಲರ್ ಸಿರಾಜ್ ಮಾತು ಕೇಳಿದ ವಿರಾಟ್ ಕೊಹ್ಲಿ ಡಿಆರ್ ಎಸ್ ಸಲ್ಲಿಸಿದರು. ಆದರೆ ಎರಡು ಬಾರಿಯೂ ಅವರ ವಿರುದ್ಧವಾಗಿಯೇ ತೀರ್ಪು ಬಂದಿತ್ತು. ಇದಕ್ಕೆ ತಮಾಷೆ ಮಾಡಿರುವ ವಾಸಿಂ ಜಾಫರ್ ಡಿಆರ್ ಎಸ್ ಎಂದರೆ don’t review Siraj ಎಂದಿದ್ದಾರೆ.
ಲಾರ್ಡ್ಸ್ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಕೆ.ಎಲ್.ರಾಹುಲ್ ಭರ್ಜರಿ ಶತಕ ಬಾರಿಸಿ ಮಿಂಚಿದರು. ರೋಹಿತ್ ಶರ್ಮಾ 84 ರನ್ ಗಳಿಸಿದ್ದರು.