Advertisement

Washington:‌ ಎಚ್‌1ಬಿ ವೀಸಾ ವಿವಾದ; ಉದ್ಯಮಿ ಮಸ್ಕ್ ಪರ ಈಗ ಟ್ರಂಪ್‌ ಬ್ಯಾಟಿಂಗ್‌!

08:52 PM Dec 29, 2024 | Team Udayavani |

ವಾಷಿಂಗ್ಟನ್‌: ಎಚ್‌1-ಬಿ ವೀಸಾ, ವಲಸೆ ನೀತಿ ಸಂಬಂಧಿಸಿ ಉದ್ಯಮಿ ಎಲಾನ್‌ ಮಸ್ಕ್ ಹಾಗೂ ಅಮೆರಿಕ ನಿಯೋಜಿತ ಅಧ್ಯಕ್ಷ ಟ್ರಂಪ್‌ ಬೆಂಬಲಿಗರ ನಡುವೆ ಕಾದಾಟ ಶುರುವಾಗಿರುವಂತೆಯೇ, ಖುದ್ದು ಟ್ರಂಪ್‌ ಅವರೇ ಮಸ್ಕ್ಗೆ ಬೆಂಬಲ ನೀಡಿ, ಎಚ್‌1ಬಿ ವೀಸಾ ಪರ ಬ್ಯಾಟಿಂಗ್‌ ಮಾಡಿದ್ದಾರೆ.

Advertisement

ಇದು ಟ್ರಂಪ್‌ ಬೆಂಬಲಿಗರನ್ನೇ ಗೊಂದಲಕ್ಕೀಡುಮಾಡಿದೆ. ಅಮೆರಿಕದ ಅಭಿವೃದ್ಧಿಗೆ ಕೌಶಲಯುತ ವಲಸಿಗರ ಅಗತ್ಯವಿದೆ. ಹಾಗಾಗಿ ಎಚ್‌1-ಬಿ ವೀಸಾ ಅಗತ್ಯ. ಈ ಉಪಕ್ರಮದ ವಿರುದ್ಧ ಯಾರೇ ನಿಂತರೂ ಅವರ ವಿರುದ್ಧ ಹೋರಾಡುತ್ತೇನೆ ಎಂದು ಮಸ್ಕ್ ಟ್ವೀಟ್‌ ಮಾಡಿದ್ದರು. ಇದಕ್ಕೆ ಟ್ರಂಪ್‌ ಬೆಂಬಲಿಗರು ಆಕ್ಷೇಪಿಸಿದ್ದರು. ಇದೀಗ ಮಸ್ಕ್ ಪರ ಟ್ರಂಪ್‌ ಬ್ಯಾಟಿಂಗ್‌ ಮಾಡಿ ‘ನನಗೆ ಈ ವೀಸಾ ಪದ್ದತಿ ಬಗ್ಗೆ ಬಹಳ ಹೆಮ್ಮೆ ಇದೆ ಮತ್ತು ನಾನು ಅದರ ಪರವಾಗಿಯೇ ಇದ್ದೇನೆ. ಸ್ವತಃ ನನ್ನ ಸಂಸ್ಥೆಗಳಲ್ಲೂ ಹಲವು ಮಂದಿ ಎಚ್‌1-ಬಿ ವೀಸಾ ನೌಕರರಿದ್ದಾರೆ. ಅದೊಂದು ಉತ್ತಮ ಯೋಜನೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next