Advertisement

ವಾಷಿಂಗ್ಟನ್ ಡಿಸಿಯಲ್ಲಿ ಗುಂಡಿನ ಚಕಮಕಿ: ಓರ್ವ ಸಾವು, ಹಲವು ಮಂದಿಗೆ ಗಾಯ

09:33 AM Sep 21, 2019 | Team Udayavani |

ವಾಷಿಂಗ್ಟನ್: ವಾಷಿಂಗ್ಟನ್ ಡಿಸಿಯ ನಡುರಸ್ತೆಯಲ್ಲಿಯೇ ಗುಂಡಿನ ಚಕಮಕಿ ನಡೆದಿದ್ದು ಓರ್ವ ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ .

Advertisement

ಸ್ತಳೀಯ ಕಾಲಮಾನ ಪ್ರಕಾರ ರಾತ್ರಿ 10 ಗಂಟೆ ವೇಳೆ ಈ ದುರ್ಘಟನೆ ನಡೆದಿದ್ದು ಕೆಲಹೊತ್ತಿನವರೆಗೂ ನಿರಂತರ ಗುಂಡಿನ ಚಕಮಕಿ ನಡೆದಿದೆ. ಆರು ಮಂದಿಗೆ  ತೀವ್ರತರವಾಗಿ ಗಾಯವಾಗಿದೆ ಎಂದು ಸ್ಥಳೀಯ ಮಾಧ್ಯಮದ ವರದಿ ತಿಳಿಸಿದೆ.

ಘಟನೆ ನಡೆದ ಸ್ಥಳ ಶ್ವೇತ ಭವನದಿಂದ ಅನತಿ ದೂರದಲ್ಲಿದ್ದು ಸ್ಥಳಕ್ಕೆ ಪೋಲಿಸರು ದೌಡಾಯಿಸಿದ್ದಾರೆ. ಯಾರ ನಡುವೆ ಗುಂಡಿನ ಚಕಮಕಿ ಆಗುತ್ತಿದೆ ಎಂ ಮಾಹಿತಿ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next