ಮುಂಬಯಿ : ಚಿತ್ರೀಕರಣದ ಭಾಗವಾಗಿದ್ದ ಕಾರ್ಯಕ್ರಮದ ಸೆಟ್‌ನಿಂದ ಹಿಜಾಬ್ ಧರಿಸಿರುವ ತುನಿಶಾ ಶರ್ಮಾ ಚಿತ್ರವು ವೈರಲ್ ಆಗುತ್ತಿದೆ. ನಾವು ಆಕೆಯನ್ನು ಹಿಜಾಬ್ ಧರಿಸುವಂತೆ ಬಲವಂತ ಮಾಡಿಲ್ಲ ಎಂದು ಪ್ರಕರಣದ ಆರೋಪಿ ಶೀಜಾನ್ ಖಾನ್ ನ ಸಹೋದರಿ ಫಲಕ್ ನಾಜ್ ಸೋಮವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶೀಜಾನ್ ಖಾನ್ ಅವರ ಕುಟುಂಬ ಸದಸ್ಯರು ಮತ್ತು ವಕೀಲರು ತುನೀಶಾಳ ತಾಯಿ ಅವಳನ್ನು ನಿರ್ಲಕ್ಷಿಸುತ್ತಿದ್ದರು ಮತ್ತು ಅವಳನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಇದು ಆಕೆಯ ಬಾಲ್ಯದ ಆಘಾತ ಮತ್ತು ಖಿನ್ನತೆಗೆ ಕಾರಣವಾಯಿತು ಎಂದು ಹೇಳಿದ್ದಾರೆ.
ಈ ಆರೋಪಗಳು ಆಧಾರ ರಹಿತ ಮತ್ತು ತಪ್ಪು. ಶೀಜಾನ್ ಯಾವತ್ತೂ ಡ್ರಗ್ಸ್ ಸೇವಿಸುತ್ತಿರಲಿಲ್ಲ. ತುನಿಶಾ ಶರ್ಮಾ ತಾಯಿ ಮಾಡಿರುವ ಆರೋಪ ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.ನನ್ನ ಮಗನ ವಿರುದ್ಧ ತುನಿಶಾ ಶರ್ಮಾ ಅವರ ತಾಯಿಮಾಡುತ್ತಿರುವ ಆರೋಪಗಳಿಗೆ ಸಾಕ್ಷ್ಯವನ್ನು ಒದಗಿಸಬೇಕು ಎಂದು ಶೀಜಾನ್ ಖಾನ್ ತಾಯಿ ಹೇಳಿದರು.
ತುನಿಶಾ ಅವರ ಚಿಕ್ಕಪ್ಪ ಎಂದು ಕರೆಯಲ್ಪಡುವ ಪವನ್ ಶರ್ಮಾ ಅವರ ಮಾಜಿ ಮ್ಯಾನೇಜರ್ ಆಗಿದ್ದರು, 4 ವರ್ಷಗಳ ಹಿಂದೆ ಅವರನ್ನು ವಜಾಗೊಳಿಸಲಾಗಿತ್ತು. ಏಕೆಂದರೆ ಅವರು ಸಾಕಷ್ಟು ಹಸ್ತಕ್ಷೇಪ ಮತ್ತು ಅವಳೊಂದಿಗೆ ಕಠಿಣವಾಗಿ ವರ್ತಿಸುತ್ತಿದ್ದರು ಎಂದು ಶೀಜನ್ ಖಾನ್ ಪರ ವಕೀಲ ಹೇಳಿದ್ದಾರೆ.
ತುನಿಶಾ ಮತ್ತು ಸಂಜೀವ್ ಕೌಶಲ್ (ಚಂಡೀಗಢದಲ್ಲಿ ಚಿಕ್ಕಪ್ಪ) ಭಯಾನಕ ಸಂಬಂಧವನ್ನು ಹೊಂದಿದ್ದರು. ಸಂಜೀವ್ ಕೌಶಲ್ ಮತ್ತು ಆಕೆಯ ತಾಯಿ, ವನಿತಾ ಅವರು ತುನಿಶಾಳ ಹಣಕಾಸಿನ ಮೇಲೆ ನಿಯಂತ್ರಣ ಹೊಂದಿದ್ದರು. ತುನೀಶಾ ತನ್ನ ಸ್ವಂತ ಹಣಕ್ಕಾಗಿ ತನ್ನ ತಾಯಿಯ ಮುಂದೆ ಆಗಾಗ್ಗೆ ಕೈಚಾಚುತ್ತಿದ್ದಳು ಎಂದು ಶೀಜಾನ್ ಖಾನ್ ಪರ ವಕೀಲರು ಹೇಳಿದ್ದಾರೆ.
ಸಂಜೀವ್ ಕೌಶಲ್ ಹೆಸರು ಕೇಳಿದೊಡನೆ ತುನೀಶಾ ತುಂಬಾ ಗಾಬರಿಯಾಗುತ್ತಿದ್ದಳು. ಸಂಜೀವ್ ಕೌಶಲ್ ಅವರ ಪ್ರಚೋದನೆಯ ಮೇರೆಗೆ, ತುನಿಶಾ ಅವರ ತಾಯಿ ಆಕೆಯ ಕತ್ತು ಹಿಸುಕಲು ಪ್ರಯತ್ನಿಸಿದರು. ಸಂಜೀವ್ ಕೌಶಲ್ ಮತ್ತು ತುನೀಶಾ ಅವರ ತಾಯಿ ತುನೀಶಾ ಜೀವನವನ್ನು ನಿಯಂತ್ರಿಸುತ್ತಿದ್ದರು ಎಂದು ಹೇಳಿದರು.
ನಟಿ ತುನಿಶಾ ಶರ್ಮಾ, ಡಿಸೆಂಬರ್ 24 ರಂದು ಪಾಲ್ಘರ್‌ನ ವಸಾಯಿ ಬಳಿ ಧಾರಾವಾಹಿಯ ಸೆಟ್‌ನಲ್ಲಿ ವಾಶ್‌ರೂಮ್‌ನಲ್ಲಿ ಕಠಿಣ ನಿರ್ಧಾರ ಕೈಗೊಂಡಿದ್ದರು. ಆ ಬಳಿಕ ಶೀಜಾನ್ ಖಾನ್ ಅವರನ್ನು ಪ್ರಚೋದನೆ ನೀಡಿದ ಆರೋಪದಲ್ಲಿ ಡಿಸೆಂಬರ್ 25 ರಂದು ಬಂಧಿಸಲಾಗಿತ್ತು.