Advertisement

LSG; ಮಯಾಂಕ್ ಯಾದವ್ ಗೆ ಭಾರತ ತಂಡದಲ್ಲಿ ಸ್ಥಾನ?: ಕೋಚ್ ಹೇಳಿದ್ದೇನು?

12:32 PM Apr 01, 2024 | Team Udayavani |

ಲಕ್ನೋ: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಹೀರೋ ಆದವರು ದಿಲ್ಲಿಯ ಯುವ ವೇಗಿ ಮಯಾಂಕ್ ಯಾದವ್. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ಗೆ ಪದಾರ್ಪಣೆ ಮಾಡಿದ ಮಯಾಂಕ್ ತನ್ನ ಎಕ್ಸ್ ಪ್ರೆಸ್ ವೇಗದ ಬೌಲಿಂಗ್ ನಿಂದ ಗಮನ ಸೆಳೆದಿದ್ದಾರೆ.

Advertisement

ಶಿಖರ್ ಧವನ್ ಗೆ 155.8 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಬಾಲ್ ಎಸೆದ ಮಯಾಂಕ್ ಯಾದವ್ ನಿರಂತರವಾಗಿ 150 ಕಿ.ಮೀ ವೇಗದಲ್ಲಿ ಚೆಂಡೆಸುದು ಅಚ್ಚರಿ ಮೂಡಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ 2024 ರ ಮೊದಲ ಗೆಲುವನ್ನು ದಾಖಲಿಸಿದ್ದರಿಂದ 21 ವರ್ಷ ವಯಸ್ಸಿನ ಮಯಾಂಕ್ ಅಂತಿಮವಾಗಿ ಮೂರು ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು.

ಇದೀಗ, ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತದ ಟೆಸ್ಟ್ ತಂಡದಲ್ಲಿ ಮಯಾಂಕ್ ಅವರನ್ನು ಪರಿಗಣಿಸಲಾಗಿತ್ತು ಎಂದು ಅವರ ಕೋಚ್ ದೇವೇಂದ್ರ ಶರ್ಮಾ ಹೇಳಿದ್ದಾರೆ.

ರೇವ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ದೇವೆಂದರ್, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಮಯಾಂಕ್ ರನ್ನು ಆಯ್ಕೆ ಮಾಡುವ ಮೊದಲು ಬೌಲಿಂಗ್ ನೋಡಲು ಬಯಸಿದ್ದರು. ಆದರೆ ಆ ವೇಳೆ ಮಯಾಂಕ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು ಎಂದರು.

ರಿಷಬ್ ಪಂತ್ ಮತ್ತು ಸೌರವ್ ಗಂಗೂಲಿ ಅವರು ಮಯಾಂಕ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಲು ಬಯಸಿದ್ದರು ಎಂದು ಪ್ರತಿಷ್ಠಿತ ಸಾನೆಟ್ ಕ್ಲಬ್ ನಡೆಸುತ್ತಿರುವ ದೇವೆಂದರ್ ಬಹಿರಂಗಪಡಿಸಿದ್ದಾರೆ. ಅಲ್ಲದೆ ಗುಜರಾತ್ ಟೈಟಾನ್ಸ್ ಕೋಚ್ ಆಶಿಶ್ ನೆಹ್ರಾ ಕೂಡ ವೇಗಿಯ ಬಗ್ಗೆ ಆಸಕ್ತಿ ಹೊಂದಿದ್ದರು ಎಂದು ಅವರು ಹೇಳಿದರು.

Advertisement

ಐಪಿಎಲ್ 2022 ಕ್ಕಿಂತ ಮುಂಚಿತವಾಗಿ, ಮಾಯಾಂಕ್ ರನ್ನು ಲಕ್ನೋ ರೂ 20 ಲಕ್ಷಕ್ಕೆ ಖರೀದಿಸಿತು. ಆದಾಗ್ಯೂ, ಅವರು ಆ ಋತುವಿನಲ್ಲಿ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ನಂತರದ ಋತುವಿನಲ್ಲಿ, ಅವರು ಗಾಯದ ಕಾರಣದಿಂದಾಗಿ ಪಂದ್ಯಾವಳಿಯಿಂದ ಹೊರಗುಳಿದರು.

2021 ರಲ್ಲಿ ವಿಜಯ್ ಹಜಾರೆ ಟ್ರೋಫಿಯ ಸಮಯದಲ್ಲಿ ಮಯಾಂಕ್ ಮೊದಲ ಬಾರಿಗೆ ಗಮನ ಸೆಳೆದಿದ್ದರು. ಅವರ ಪಂದ್ಯಾವಳಿಯ ಚೊಚ್ಚಲ ಪಂದ್ಯದಲ್ಲಿ, ಅವರು 49 ನೇ ಓವರ್‌ನಲ್ಲಿ ಮೇಡನ್ ಬೌಲ್ ಮಾಡಿದ್ದರು. ಆ ವೇಳೆ ಹರಿಯಾಣ ತಂಡಕ್ಕೆ ಕೊನೆಯ 12 ಎಸೆತಗಳಲ್ಲಿ 12 ರನ್ ಬೇಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next